ಅರ್ಥ
ಅರ್ಥ
ಸ್ವಾತಂತ್ರ್ಯದ ರೆಕ್ಕೆಗಳು
ಮುಳ್ಳುಗಳಾಗೇ ಚುಚ್ಚಿವೆ
ಬಂಧಮುಕ್ತನಾದೆನೆಂದು
ಹೇಗೆ ಹೇಳಲಿ?
ಪರಿಹಾರದ ಉತ್ತರಗಳೇ
ಗೊಂದಲಗಳು ಆದಾಗ
ಗಾಢವಾಗಿ ಪ್ರಶ್ನಿಸಿಲು
ಹೇಗೆ ಉತ್ತರಿಸಲಿ?
ನಿಷ್ಕಲ್ಮಶ ನಗುಗಳೇ
ಮುಖವಾಡವ ಹಾಕಿದಾಗ
ಮನಸ್ಸು ತುಂಬಿ ನಗಲು
ಹೇಗೆ ಸುಲಭ ಸಾಧ್ಯ?
ಸಾಕಾರಗೊಂಡ ಕನಸುಗಳೇ
ದುಸ್ವಪ್ನಗಳಾಗಿ ಕಾಡಲು
ಮತ್ತೆ ಕನಸು ಕಾಣಲು
ಹೇಗೆ ಸಿದ್ಧವಾಗಲಿ?
ತನ್ನ ತಾನರಿತರೂ
ಅರ್ಥವಾಗದಿರಲು ನಾನು
ಇದೇ ತಾನೇ ಜೀವನ?
ಹೇಗೆ ಸ್ಥಿರವಾಗಲಿ?
