ಅರಸಿ
ಅರಸಿ
ಒಂಟಿ ಬದುಕಿಗೆ ಒಂದು ಆಸರೆಯಾಗಿ ಬಾ
ಜಂಟಿಯಾಗಿ ಬಾಳಲಿ ಜೊತೆಯಾಗಲು ಬಾ
ಕುಂಟು ನೆಪವನು ಹೇಳದೆ ನನಗಾಗಿ ಬಾ
ತುಂಟ ನಗುವಲಿ ಮನಸು ಗೆಲ್ಲಲು ಬಾ
ಕಣ್ಣಿನೊಲವಿನ ಆಮಂತ್ರಣ ನೋಡುತ
ಬೆಣ್ಣೆ ಮನದ ಮುದ್ದು ಮಾತನು ಕೇಳುತ
ಸಣ್ಣ ಕನಸನು ನನಸು ಮಾಡಲು ಓಡಿ ಬಾ
ತಣ್ಣನೆಯ ತಂಗಾಳಿ ಬೀಸಲು ಜೊತೆಗೂಡಿ ಬಾ
ನೂರು ಜನುಮವು ಕೂಡಿ ಬಾಳೋಣ ಬಾ
ಬೆರಳು ಹಿಡಿದು ಸಪ್ತಪದಿ ತುಳಿಯೋಣ ಬಾ
ಮರಳಿನ ಮೇಲೆ ಹೆಸರು ಬರೆಯೋಣ ಬಾ
ಮರೆಯದ ಜೋಡಿ ನಾವಾಗಿ ಮೆರೆಯೋಣ ಬಾ

