ಅಪರಿಚಿತರು
ಅಪರಿಚಿತರು
ಮೊದಲ ಪರಿಚಯವದು, ನೀನಂದು ಅಪರಿಚಿತ
ಸೋತು ನಿನ್ನಲ್ಲಿ ಸೆರೆಯಾದೆನು ನಿನ್ನ ಕಣ್ಣಲಿ
ನೀಡುವೆ ಪ್ರೀತಿಯನು ಕೊನೆಯಿಲ್ಲದೆ
ಮುಚ್ಚಿಟ್ಟು ಭಾವನೆಗಳ ಸುಳಿವಿಲ್ಲದೆ
ಚಿರಕಾಲ ಇರು ನೀನು ನೋವನ್ನೇ ಕಾಣದೆ
ಏಳಿಗೆಯ ಕಾಣು ನೀ ಸೋಲಿನ ಭಯವಿಲ್ಲದೆ
ನನ್ನೆದುರು ಕಂಡಿಹುದು ನರಿ ಹುಚ್ಚು ಪ್ರೀತಿ
ನೂರಾರು ಕನಸುಗಳ ಕಣ್ಣಲ್ಲಿ ಬಿತ್ತಿ
ಕಣ್ತುಂಬೊ ನೆನಪುಗಳ ಹೃದಯದಲಿ ಮುಚ್ಚಿ
ಸಾಗುತಿದೆ ಬದುಕು ನಂಬಿಕೆಯ ಬಂಡಿ ಎತ್ತಿ
ಮನಸಾರೆ ಅರ್ಪಿಸುವೆ ತನು-ಮನವ ನಿನಗಾಗಿ
ಬಂದು ಸೇರುವೆಯಾ ಪ್ರೀತಿಯ ಜೊತೆಯಾಗಿ
ಹೇಗೆ ಗೆಲ್ಲುವುದು ನಿನ್ನಯಾ ಪ್ರೀತಿಯನು
ನನ್ನಲ್ಲಿಲ್ಲವಷ್ಟು ಪರಿಪೂರ್ಣತೆ ನಿನ್ನ ಗೆಲ್ಲಲು
ಅಂದುಕೊಳ್ಳುವೆ ನೀ ನನ್ನ ಪ್ರೀತಿಯಲ್ಲವೆಂದು
ಬಡಿದೆಬ್ಬಿಸಿದೆ ಹೃದಯವದು ನೀನೇ ಬೇಕೆಂದು
ತಿಳಿದಿರಲಿಲ್ಲ ನನಗಂದು ನನ್ನದು ಸ್ವಾರ್ಥವೆಂದು
ತಿಳಿಯಿತು ನನಗಿಂದು ಸ್ವಾರ್ಥ ಪ್ರೀತಿಯಲ್ಲವೆಂದು
ನಾನಿನ್ನ ಪೂಜಿಸುವೆ ಭಕ್ತಿಯಲಿ ಮಿಂದು
ಭಕ್ತಿಯಲಿ ಕೇಳುತಿದೆ ಪ್ರೀತಿಯ ಸ್ವರವೊಂದು
ಬಂದಿಯಾಗಿರುವೆ ನಾ ನಿನ್ನ ಪ್ರೀತಿ ಸೆರೆಯಲಿಂದು
ಮನ ಅರಿತಿದೆ ನೀ ಪರಿಚಯವಿಲ್ಲದ ಪರಿಚಿತನೆಂದು....