ಆಷಾಢ
ಆಷಾಢ
ಆಷಾಢ ಮಾಸವು ನವ ವಧುವಿನ ಮೊಗದಲ್ಲಿ
ಹೊಸ ಕಳೆಯ ತಂದಿದೆ ನವ ಚೈತನ್ಯವ ತುಂಬಿದೆ
ತವರು ಮನೆಗೆ ಭೇಟಿ ನೀಡಿ ಅಮ್ಮನ ಕೈ ತುತ್ತಿನಲ್ಲಿ
ಅಮೃತವ ಸವಿಯನುಂಡು ಅವಳ ಮನ ಕುಣಿದಿದೆ
ತವರಿನ ಮನೆಯಂಗಳದಲಿ ಖುಷಿಯಿಂದ ಹಾರಾಡಿ
ನಗು ನಗುತಾ ಅರಳಿರುವ ಹೂವುಗಳ ಮುದ್ದಾಡಿ
ಸೋನೆ ಮಳೆಯ ಚಳಿಗಾಳಿಗೆ ನಲಿದಿಹಳು ಖುಷಿಯಲಿ
ಮನದಲಿ ನವಿರಾದ ಭಾವ ಮೂಡಿತು ಈ ಮಳೆಯಲಿ
ಹೊರಟಿಹಳು ತೋಟದ ಕಡೆಗೆ ತನ್ನ ತಂಗಿಯ ಜೊತೆ
ನೋಡಿಹಳು ಹಸಿರಿನಲಿ ಸೊಂಪಾದ ಮರ ಗಿಡಗಳ
ಹಾಡಿಹಳು ಸುಂದರ ಕಂಠದ ಕೋಗಿಲೆಗಳೊಂದಿಗೆ ಲತೆ
ಆಡಿಹಳು ಸಹೋದರಿಯೊಡಗೂಡಿ ವಿವಿಧ ಆಟಗಳ
ಮತ್ತೇಕೋ ಮಂಕಾಗಿಹಳಲ್ಲಾ ನಮ್ಮ ಮನೆ ಮಗಳು
ಪತಿಯ ನೆನೆ ನೆನೆದು ಉಕ್ಕಿ ಬರುತಿಹುದು ಆಕೆಗಳು
ಶ್ರಾವಣ ಬರಲೆಂದು ಕಾಯುತಿಹಳು ತನ್ನ ತವರಿನಲ್ಲಿ
ಶ್ರಾವಣ ಬಂದೊಡೆ ಸೇರಿಹಳು ಇನಿಯನ ಖುಷಿಯಲ್ಲಿ!!

