ಆಸರೆ
ಆಸರೆ
ವಿಧಿ ಬರಹಕೆ ನಾನಾದೆ ಹೊಣೆ...
ನನ್ನ ನೋವಿಗಿನ್ನೆಲ್ಲಿ ಕೊನೆ..??
ಅರ್ದ ಬಿದ್ದ ಮನೆ,ಬಿದ್ದು ಹೋಗುವ ಜೀವದಾಸರೆಗೆ...
ಕಲಿತ ಮಗ ಕೈಬಿಟ್ಟು ಸರಿದಾಯ್ತು ದೂರದೂರಿಗೆ..!
ಹರಿದ ಸೀರೆಯು ಮನಕೆ ಬಡಿದೆಬ್ಬಿಸಿ ಕೇಳುತಿದೆ..
ಬೀಳುವ ಗೋಡೆಯು ನನ್ನ ನೋವಿಗೆ ಸ್ಪಂದಿಸುತಿದೆ..
ಇಂದಿಗೂ ನನ್ನ ಮನ ತುತ್ತು ರೊಟ್ಟಿಗೆ ಹಂಬಲಿಸುತ್ತಿಲ್ಲ,
ದೂರದಿಂದರುವ ಮಗನ ಪ್ರೀತಿಗೆ ಹಂಬಲಿಸುತಿದೆ!!
ಕೈಯಲ್ಲಿ ಅಳಿಸಿದ ರೇಖೆಯು ನನ್ನ ಮೇಲೆ ನಗುತಿದೆ...
ಮಗನ ಬರುವಿಕೆಗಾಗಿ ಕಾಯುವ ನನ್ನ ಮೂರ್ಖತನಕ್ಕೆ...
ಅವನು ಬರದೆ ಬಾಡಿದ ಮನೆ ಅಂಗಳವು ಅಳುತಿದೆ...
ಅವನು ತನ್ನ ಮೇಲೆ ಕಳೆದ ಆ ಬಾಲ್ಯದ ದಿನಕ್ಕೆ!!!
ಅವನ ನೋಡಲು ಹಂಬಲಿಸುತಿದೆ ಜೀವ..
ಅವನ ನೋಡಿಯಾದರು ಮರೆಯಬಹುದು ನನ್ನ ನೋವ...
ಆದರೆ, ಹಾಳಾದ ದುಡ್ಡಿನ ಮೋಹಕೆ,ನಾನೇ ನೆನಪಿಲ್ಲ ಮಗನಿಗೆ...
ಕೊನೆಗಾಲದಲ್ಲಿ ಯಾರು ಆಸರೆ ನನಗೆ??
