STORYMIRROR

Prabhakar Tamragouri

Romance Classics Others

4  

Prabhakar Tamragouri

Romance Classics Others

ಆಕೆ

ಆಕೆ

1 min
413


ನಾ ಸಾಗುತ್ತಿದ್ದೆ ದಾರಿಗುಂಟ 

ತಿರುಗಿ ನೋಡಿದಳು ಆಕೆ 

ಸಂದಿಗೊಂದಲಗಳಲ್ಲಿ ನಡೆದು 

ಹೋಗುತ್ತಿದ್ದಳು ಅವಳು 


ಕಳೆದು ಹೋದ ನೆನಪುಗಳು 

ಒತ್ತರಿಸಿ ಬಿಳಿ ಹಾಳೆಯ 

ಪುಟ ಪುಟಗಳ ನಡುವೆ 

ಆಕೆಯ ಪ್ರತಿಬಿಂಬ ಅಚ್ಚೊತ್ತಿ 

ಪುಟ ತಿರುವಿ , ಆಳ ತಿಳಿಯದೇ

ಪದೇ ಪದೇ ಬರೆದ 

ಹಾಡಿನ ನಿನ್ನೆಗಳೆಲ್ಲಿ .....?


ರಾಶಿ ರಾಶಿ ಕನಸು ಗೀತೆಯ 

ಬಾನ ನಕ್ಷತ್ರದ ತೊಟ್ಟಿಲಲ್ಲಿ 

ನೆರಳು ಸರಿದಂತೆ 

ನೆಲಕ್ಕಂಟಿದ ಗುರುತ ,

ಕನವರಿಕೆ, ಸಂಕಟಗಳು 

ತುಟಿಯಂಚಿನಲ್ಲಿ ಆರಿದೆ ಆಸೆ 


ನಡು ರಾತ್ರಿಯಲ್ಲಿ ಕನಲಿದ

ಅಂತರಂಗದ ಏಕತಾನತೆಗೆ ಬೆದರಿದ 

ಪ್ರತಿಬಿಂಬ ಬಿದ್ದು ಅಲುಗಿದಂತೆ 

ತೆರೆದ ಮುಸುಕಿನಲಿ ಇರಲಿಲ್ಲ ಆಕೆ 

ತಿರುತಿರುಗಿ ಸುತ್ತುಮುತ್ತು ಅಲೆದು

ಸವೆದ ಬೆಳಕು ದಾರಿಗುಂಟ 

ದೋಣಿ ಸಾಗಲು ನೀರುಸಾಲದೇ

ನಿಂತ ನೀರುಗಳಲ್ಲಿ ಕುಲುಕುತ್ತಾ ಹೋದಲ್ಲಿ 

ಕಣ್ಣರಳಿಸಿ ನೋಡಿದಳು ಅವಳು ....




Rate this content
Log in

Similar kannada poem from Romance