ಆಕಾಶ ತಾರೆ
ಆಕಾಶ ತಾರೆ
ನೀ ಆಕಾಶವಾದೆ
ನಾ ಭೂಮಿಯಾದೆ
ಆದರೂ ಪ್ರೇಮದ ಮಳೆ
ಸುರಿವುದೆಂದು ನಾ ನಿನ್ನ ಪ್ರೇಮಿಸಿದೆ
ನೀ ಚಂದಿರನಾದೆ
ನಾ ನೈದಿಲೆಯಾದೆ
ಆದರೂ ಪ್ರೇಮದ ಬೆಳದಿಂಗಳು
ಸುರಿವುದೆಂದು ನಾ ನಿನ್ನ ಪ್ರೇಮಿಸಿದೆ
ನೀ ಸಿಗಲಾರದ
ಕನ್ನಡಿಯೊಳಗಿನ ಗಂಟು
ನಾ ತಿಳಿದಿದ್ದರು ಸಹ ಪ್ರೇಮಿಸಿದೆ
ನೀ ಕೈಗೆ ಸಿಗದ ಹುಳಿ ದ್ರಾಕ್ಷಿಯಾದೆ
