STORYMIRROR

Vijaya Bharathi.A.S.

Tragedy Classics Others

3  

Vijaya Bharathi.A.S.

Tragedy Classics Others

ಆಗಂತುಕ

ಆಗಂತುಕ

1 min
176

ಬಯಸದೇ ಬರುವ

ಅನಪೇಕ್ಷಿತ ಅತಿಥಿ

ಹೊತ್ತು ಗೊತ್ತಿಲ್ಲದೆ

ವಯೋಮಿತಿಯ

ಗಣನೆಯೇ ಇಲ್ಲದೆ

ಸದ್ದಿಲ್ಲದೆ ಎಲ್ಲರನು

ಹಿಂಬಾಲಿಸುವನು

ಅವಧಿ ಮುಗಿದವರ

ಖಾತೆಗಳ ಮುಗಿಸಿ

ತನ್ನೊಡನೆ ಎಳೆದೊಯ್ವ

ಅಗೋಚರ ಆಗಂತುಕ

ಇವನ ಆಗಮನದಿಂದ

ಬೆಚ್ಚಿ ಬೀಳ್ವರು ಜನರು

ಆಪ್ತೇಷ್ಟರ ಅಗಲುವಿಕೆಗೆ

ಕಣ್ಣೀರು ಹರಿಸುವರು

ಕರಗನವನು ಯಾರಿಗೂ

ಬಿಡನವನೆಂದೂ ತನ್ನ

ಕರ್ತವ್ಯ ಕರ್ಮವನು



Rate this content
Log in

Similar kannada poem from Tragedy