STORYMIRROR

Surabhi Latha

Abstract Tragedy Others

4  

Surabhi Latha

Abstract Tragedy Others

ಆಡುವ ಮಾತೆಲ್ಲ

ಆಡುವ ಮಾತೆಲ್ಲ

1 min
339

ಇರೋದು ಜೀವನ ನಾಲ್ಕು ದಿವಸ 

ಅರಿಯರು ಯಾರು ಯಾರ ಮನಸ 

ಆಡುವರ ಬಾಯಿ ಮುಚ್ಚೊಕೆ ಆಗೊಲ್ಲ 

ದೇವರಾಣೆ ಮೆಚ್ಚಿಸೋಕಾಗಲ್ಲ 

ಇದೇ ಅಲ್ಲವೇ ಕಲಿಗಾಲ 


ಒಳ್ಳೆಯದು ಮಾಡಲಾರ 

ಮಾಡುವವರ ನೋಡಲಾರ 

ಮೌನವಾಗಿಯೂ ಇರಲಾರ 

ಕೆದಕಿ ಹಾಕುವ ಉಪ್ಪು ಕಾರ 

ಇದೇ ಅಲ್ಲವೇ ಕಲಿಗಾಲ 


ಮಳ್ಳಿಯಂಗೆ ಇರಬೇಕು 

ಕಾಲಕ್ಕೆ ಬಣ್ಣ ಬದಲಿಸಬೇಕು 

ಆಡಂಬರದ ನಾಟಕೀಯಕೆ 

ಹಾಕುವರು ತಳುಕಿನ ಹೊದಿಕೆ 

ಇದೇ ಅಲ್ಲವೇ ಕಲಿಗಾಲ 


ಸತ್ಯವೇ ತಾಯಿ ತಂದೆ 

ಎನ್ನುವರು ಎಲ್ಲರ ಮುಂದೆ 

ತಮ್ಮ ಬುಡಕೆ ಬಂದಾಗ 

ತಪ್ಪು ಅರಿವರು ನೋಡಾಗ 

ಇದೇ ಅಲ್ಲವೇ ಕಲಿಗಾಲ 



Rate this content
Log in

Similar kannada poem from Abstract