STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಮುಸುಕಿನ ಗುದ್ದಾಟ

ಮುಸುಕಿನ ಗುದ್ದಾಟ

2 mins
195


     

ಏನ್ರಿ ಇದು ಈ ಮುಸುಕಿನ ಗುದ್ದಾಟ ಅನ್ನಾಕತ್ತಿರೇನು?

ಎಪ್ಪಾ ಎದರಾ ಬದರಾ ನಿಂತು ಹೊಡೆದಾಡದು ಒಂದ ಒಪ್ಪತ್ತಿಗೆ ಬೇಕು, ಇದು ಐತಿ ನೋಡ್ರಿ , ಮುಸುಕಿನ ಗುದ್ದಾಟ ಒಂದಳತಿ ಮನಸಿನ್ಯಾಗ ಮಂಡಿಗಿ ತಿನ್ನದು, ಬಾಳ್ ಹೊಲಸು ನೋಡ್ರೀಪಾ , ಯಾಕ ಅಂತ ಅನ್ನಾಕತ್ತಿರೇನು ,?


ಹೌದ್ ಬಿಡ್ರಿ ಮತ್ತ್, ಹೇಳಾಕ ದೊಡ್ಡಕ ಜಗಳರ ಆಗಿರಲ್ಲ , ಮಾತಿಗೆ ಮಾತರ ಆಗ್ಯಾವನು, ಅದೂ ಇರಲ್ಲ , ಆದ್ರೂ ಸಣ್ಣಕ ಗುದ್ದ್ಯಾಟ ಚಾಲು ಇದ್ದ ಇರ್ತತಿ. ಒಂದಳತಿ ಮನಿನೋ ಮಸಾಣಾನೊ ಅನ್ನಂಗ ವಾತಾವರಣ ಮಾಡಿ ಇಟ್ಟಿರ್ತಾರ.


ನಮ್ಮ ರಾಜಪ್ಪ ಮದವಿ ಆದ್ಮ್ಯಾಲೆ ಹೆಂಡತಿ ಕರ್ಕಂಡ್ ಅಲ್ಲೇ ಇಲ್ಲೇ ಸುತ್ತಾಡಿದವನೂ ಅಲ್ಲ, ರೊಕ್ಕಾನರ ಎದಕೆದಕರ ಖಾಲಿ ಪುಗಶೆಟ್ಟಿ ಹಾಳ ಮಾಡವರ ಅಲ್ಲಾ ಆದ್ರೂ ಅವರ ಅವ್ವ, ಅವರ ಅಕ್ಕ, ಯಾಕ ಆ ಹುಡುಗುನ ಕೂಡ ಹಂಗ ಹರ್ಕಂಡ್ ಅದಾರನಪ , ನಿಂಗ್ ಏನರ ಗೊತ್ತೈತೇನಪಾ ಮಾರ್ಖಂಡಿ ?


ಮಾರ್ಖಂಡಿ : ಇಲ್ಲ ಬಿಡೋ ಮಾವಾ, ಅವರ ಮನಿ ಸುದ್ದಿ ಹೆಂಗ ಗೊತ್ತಾಗ ಬೆಕ್ ಹೇಳು, ಅವರೇನು ಯಾರು ಜೋರಾಗೇರ ಮಾತಾಡಲ್ಲ ಏನಿಲ್ಲ, ನಂಗಂತರ್ಕಿ ಎನ್ ಗೊತ್ತಿಲಬಿಡ ಮಾವಾ.


ಶಿದ್ಧಪ್ಪ: ಹೋಗ್ಲಿ ಬಿಡ ಮಾರ್ಖಂಡಿ , ಎನ್ ಒಂತರಾ ಮುಸುಕಿನ ಗುದ್ದಾಟ ಇದ್ದಂಗ ಐತಿ , ಇರ್ಲಿ ಬಿಡು, ನಾನು ಟಾಯಂ ಬಂದಾಗ ರಾಜಾನ್ನ ಕೇಳ್ತೀನಿ ಬಿಡು, ಪಾಪಾ ತಾಯಿಲ್ಲದ ಮಗ, ಸಂಪನ್ನ ಅದಾನ ಅಂತಾ ಆಟ ನಡಸ್ಯಾರ , ಪಾಪ ಆ ಸಮುದು ಹುಡುಗಿ ಬ್ಯಾರೆ ಸಿಕ್ಕಾಳ, ಚೋಲೋತ್ನಗ ದುಡಸ್ಕೆಂತ ಭಾರಿ ಆಟ ನಡೆಸ್ಯಾರ..



ಆತಪಾ ಮಾವ,ನಾ ಹೊಂಡತನಿ, ಕೆಲಸರ ಬಿಗದತಿ, ಕುಂತ ಮಂದಿ ಮನಿ ಆಚಾರ ಹೇಳಿದರ ನನ್ನ ಕೆಲಸ ಅಲ್ಲೇ ಕುಂದರತತಿ ,ನಾ ಬರ್ತನಪಾ ..


ಸರಿ ಹೋಗಲೇ ಮಾರ್ಖಂಡಿ , ನಾನು ಒಂದೀಟ ಹೊಲದ ಕಡಿ ನಡೀತನಿ.


(ಹೊಲದ ಹತ್ರ ಹೋಗ ಮುಂದ ರಾಜಪ್ಪ ಸಿಕ್ಕೇ ಬಿಟ್ಟ ಈ ಶಿದ್ಧಪ್ಪಗ)


ಅಯ್ಯ ಅವಾ ನಮ್ಮ ಏರಿಮನಿ ರಾಜಾ ಇದ್ದಂಗ ಅದಾನಲ್ಲ, ತಡಿ ವದರೆ ಬಿಡ್ತನಿ...


ರಾಜಾ,,,,,


ರಾಜಾ,,,,, ಲೇ ರಾಜಾ,,,

ನಾ ಲೇ ನಿಮ್ಮ ಶಿದ್ಧಪ್ಪ ದೊಡಪ್ಪ, ಮ್ಯಾಗೇರಿ ಶಿದ್ಧಪ್ಪಲೇ ...


ದೊಡಪ್ಪಾ ಬಂದೆ ತಡಿಪಾ,,

ಎನ್ ದೊಡಪ್ಪಾ ಈ ಕಡೆ ಹೊಂಟಬಿಟ್ಟಿ, ಏನರ ಕೆಲಸ ಇತ್ತನು ,,, ನನ್ನ ಯಾಕ ಕರದಿಪ ಶಿದ್ಧಪ್ಪ ದೊಡಪ್ಪಾ?


ಎನ್ ಇಲ್ಲಲೇಪ, ಯಾಕ್ ನಿನ್ನ ಲಗ್ನಾ ಆಗಿಂದ ನಿಮ್ಮ ಅವ್ವ ಅಲ್ಲ ಅಲ್ಲ, ನಿಮ್ಮ ಚಿಗವ್ವ ಎನ್ ಗತ್ತ ಕಲ್ತಂಗ ನಾಟಾಕ ನಡಸ್ಯಾಳ ಹೌದಲ್ಲ.... ಅಕಿ ತಾಳಕ ಕುಣ್ಯಾಕಿ ನಿಮ್ಮ ಅಕ್ಕವ್ವ .. ಎಲ್ಲ ಕಾಣಸ್ತತಿ ನನಗೇನು ನಿಮ್ಮನಿಗ ಬಂದ ಮಾತಾಡಕ ಹೆದರಿಕೆ ಇಲ್ಲ, ನಿನ್ನ ಜೋಡಿ ಮಾತಾಡಿ ಮುಂದವರಿಯೊನು ಅಂತ...


ಅಯ್ಯಯ್ಯೋ ಬ್ಯಾಡಪಾ ದೊಡಪ್ಪ, ಏನು ಆಗಿಲ್ಲ , ಜಗಳನೂ ಇಲ್ಲ ಎಂತಾದೂ ಇಲ್ಲ ಸುಮ್ ಸುಮ್ಮನ ಮಾತ ಬಿಟ್ಟಾರ, ಕೇಳಿದ್ರ ಕೊಂಕ್ ಮಾತಾಡ್ತಾರ ಅದಕ ನಾನು ಸುಮ್ನಾಗಿನಿ, ನನ್ನ ಹೆಂಡತಿ ಗೀತಾನ ಕೂಡ ಹಂಗ ನಡಸ್ಯಾರ, ನೋಡಿನೂ ಸುಮ್ಮನ ಅದನಿ, ಇನ್ನ ಹೆಂಡತಿ ಬಂದ್ ಮ್ಯಾಲೆ ಬದ್ಲಾಗ್ಯಾನ ಅನ್ನಬಾರದಲ್ವಾ ದೊಡಪ್ಪ ಅದಕ ಸುಮ್ಮನ ಅದನಿ ಬಿಡಪಾ..


ಅಲ್ಲಲೇ ನಿಂಗ ಗೊತ್ತಾಗವಲ್ದು, ಈ ಮುಸುಕಿನ ಗುದ್ದಾಟ ಯಾಕ ಮಾಡಾಕುಂತರ ಅಂತ..


ಯಾಕ್ ದೊಡಪ್ಪ?


ಲೇ ನಿಮ್ಮ ಅಪ್ಪ ಸಾಯ ಮುಂದ ಓಟು ಆಸ್ತಿ ನಿನ್ನ ಹೆಸರ್ನ್ಯಾಗ ಹಚ್ಯಾನಲ್ಲ ಅದಕ.


ಹಂಗಿಲ್ಲಬಿಡಪೋ...


ಇನ್ನೆಂಗ ನಿನ ಹೇಳಲೇ...


ಅಲ್ಲಪಾ ದೊಡಪ್ಪ, ಚಿಗವ್ವನ ಬಗ್ಗೆ ಅಂದ್ರ ಸರಿ,ಇಕಿ ನಮ್ಮ ಅಕ್ಕವ್ವ ಅದಾಳಲ್ಲ ,ಇಕಿ ಯಾಕ್ ಅಂತದ್ದ ವಿಚಾರ ಮಾಡ್ತಾಳ ಹೇಳು..


ಅಲ್ಲೇ ಇರದು, ಮದಲ್ ಒಂದ್ ಕಾಲು ಪೋಲಿಯೋ ಆಗೇತಿ, ನೀನು ನಿನ್ನ ಹೆಂಡತಿ ಕರ್ಕಂಡು ಸಿಟಿಗೆ ಹೋದ್ರ ಅಂತ ಚಿಗವ್ವನ ತಾಳಕ್ಕ ಕುನ್ಯಾಕತ್ತಾಳ..

ಸಲ್ಪ ಹುಷಾರಾಗಿ ಕೆಲಸ ಮಾಡು. ಎಲ್ಲಾರ ಮ್ಯಾಲು ಕಣ್ಣಿಡು. ಪಾಪ ನಿನ್ನ ಹೆಂಡತಿ ಗೀತಾಗ ಇದು ಹೊಸಾದು. ದೊಡ್ಡ ಮನಿಂದ ಬಂದ ಹುಡುಗಿ ಅದಾಳ, ದೊಡ್ಡ ಮನಸೂ ಐತಿ. ಇಬ್ಬರೂ ಚೆಂದಗ ಜೀವನ ಮಾಡ್ರಿ..


ಆತ ದೊಡಪ್ಪಾ ನಿ ಹೇಳದಂಗ ಆಗ್ಲಿಪಾ. ನಾನು ಶ್ಯಾನ್ಯಾ ಆಗಿ , ಅವರ ಕೂಡ ಮಾತಾಡಿ ಈ ಹೊಲಸ ಮುಸುಕಿನ ಗುದ್ದಾಟಕ್ಕ ಅಂತ್ಯ ಹಾಡ್ತೀನಿ.


ಆಯ್ತು ಹುಷಾರ್ ಲೇ ಪಾ, ನಿಮ್ನ ಚಿಗವ್ವ ಭಾರಿ ಅದಾಳ, ಯಾವದಕ್ಕೂ ಹುಷಾರು.ಬರ್ಲಾ ನಾನು.


ಆತಪಾ ದೊಡಪ್ಪಾ, ನಾನೂ ನಡೀತನಿ ಮನಿಗೆ..


( ರಾಜು ಅದನ್ನೇ ಯೋಚಿಸುತ್ತಾ ಮನೆಗೆ ಬಂದವನೇ ಅಕ್ಕ ಮತ್ತು ಚಿಗವ್ವನನ್ನು ಕೂರಿಸಿಕೊಂಡು, ಆಸ್ತಿಯನ್ನು ಮೂರು ಭಾಗ ಮಾಡುವುದಾಗಿ ಹೇಳಿ, ತಾನು ಗೀತಾ ಈ ಮನೆ ಅವರಿಗೇ ಬಿಟ್ಟು ಹೋಗುತ್ತಿರುವುದನ್ನು ಹೇಳಿ ಆ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದನು)..



Rate this content
Log in

Similar kannada story from Classics