ವಯಸ್ಸು
ವಯಸ್ಸು
"ಯಾಕೆ ಕುಸುಮಾ ಇವತ್ತು ಎರೋಬಿಕ್ಸ ಕ್ಲಾಸ್ಗೆ ಹೋಗಲ್ವಾ..? ಸಂಜೆ ಶಾಪಿಂಗ್ಗೆ ಹೋಗೊಣಾ ಅಂದಿದ್ದೆ ಅಲ್ವಾ.., ಅದೇ.. ಕೆಂಪು ಸೀರೆ ಉಟ್ಕೊಂಡು ನಾನು ಕೊಡಸಿದ ಕೆಂಪುಹರಳಿನ ಜುಮಕಿ ಹಾಕೊಂಡು ರೆಡಿಯಾಗು. ಹಂಗೆ ಊಟಾ ಮಾಡ್ಕೊಂಡು ಬರೋಣಾ". ಅಂತ ಗಂಡ ಹೇಳಿದ. ಅದ್ಕೆ ಹೆಂಡತಿ "ಬೇಡಾರೀ...,". ಅಂದ್ಳು. ಗಂಡ ಕೇಳಿದ "ಯಾಕೆ ಏನಾಯ್ತು..? ಹೇಳಿದ್ರೆ ತಾನೇ ಗೊತ್ತಾಗೋದು". ಅಂತ. "ನಮಗೆ ಇವಾಗ ಇದೆಲ್ಲ ಯಾಕೆ..? ಸುಮ್ನೆ ಇರೋದು ಒಳ್ಳೆಯದು ಇವಯಸ್ಸಿಗೆ ಇದೆಲ್ಲಾ ಬೇಡಾ"ಅಂತ ಹೆಂಡ್ತಿ. " ಸುಮ್ನೆ ಏನಾಯ್ತು ಅಂತ ಹೇಳಬಾರದೆ. ಯಾಕೆ ಸಪ್ಪಗಿದ್ದಿಯಾ... ಏನಾಯ್ತು ಯಾರಾದ್ರು ಏನಾದ್ರು ಅಂದ್ರೆ..? ".
"ಅದೇರಿ... ನಿನ್ನೆ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಹೋದಾಗ ನಮ್ಮ ಬೀದಿ ಹೆಂಗಸರು ಬಂದಿದ್ರೂ..." ಓಹೋ ಏನಂದ್ರು..?" "ಕುಸುಮಾ ವಯಸ್ಸು ಐವತ್ತಾಯ್ತು, ಇವಾಗ್ಯಾಕ್ರಿ ನಿಮಗೆ ಎರೋಬಿಕ್ಸು, ಡ್ರೆಸ್ ಹಾಕೋಳೊದು, ಶಾಪಿಂಗ್ ಅಲ್ರಿ ಮ್ಯಾಚಿಂಗ್ ಬಳೆ, ಸ್ಟಿಕ್ಕರ್ ಇದು ಬೇಕಾ?? ಮೊಮ್ಮಕ್ಳು ಕಾಣೋವಯಸ್ಸು. ಅಂದು ಎಲ್ರೂ ಮುಖ ತಿರುಗಿಸಿಕೊಂಡು ಹೋದ್ರು. ಅದಕ್ಕೆ ರೀ ಅದೆಲ್ಲಾ ಬೇಡಾ ಸುಮ್ನೆ ದೇವರ ಧ್ಯಾನ ಮಾಡ್ತಾ ಕಾಲಾ ಕಳೆಯೋಣ".
ಅದ್ಕೆ ಗಂಡ ನಕ್ಕು "ಅಯ್ಯೋ ನೀನು ಹುಚ್ಚಿಕಣೆ ಅವರಿಗೆ ನಿನ್ನ ನೋಡಿ ಹೊಟ್ಟೆ ಉರಿ..., ಇಷ್ಟುವರ್ಷ ನಮ್ಮ ಸಲುವಾಗಿ ನೀನು ಏನೇನೆಲ್ಲಾ ಮಾಡಿದ್ದಿಯಾ..ನಿನ್ನ ಸಲುವಾಗಿ ನಿನಗೆ ಸಮಯಾ ಇರುತ್ತಿರಲಿಲ್ಲ...ಇವಾಗ ಸರಿಯಾದಸಮಯಾ... ವಯಸ್ಸು ಬರಿ ಸಂಖ್ಯೆ..ಅಷ್ಟೆ ಸಮಯ ಹೋಗಿದ್ದು ತೋರಿಸತ್ತೆ...! ನಮ್ಮ ಉತ್ಸಾಹ..! ಮತ್ತು ಆಸೆಗಳಿಗೆ ಕಡಿವಾಣ ಹಾಕುವ ಸಾಧನವಲ್ಲಾ. ನಾವಿಬ್ರೂ ಇನ್ನೂ ಟೀನೆಜರ್ಸ...! ಜೀವನವನ್ನ ನಮಗೆ ಬೇಕಾದಂಗೆ ಖುಷಿಯಿಂದ ಅನುಭವಿಸೋಣಾ. ಜನರು ಯಾವಾಗ ಏನೇ ಮಾಡಿದರು ಒಂದು ಕೊಂಕು ಮಾತನಾಡುತ್ತಾರೆ. ನಾವು ನಮಗಾಗಿ ಜೀವಿಸಬೇಕು. ಮನಸ್ಸಿಗೆ ವಯಸ್ಸಿಲ್ಲಾ ಕಣೆ...! ನಡಿ ನಡಿ ಬೇಗ ರೆಡಿ ಆಗು". ಅಂದು ಗಂಡ ಹೆಂಡ್ತಿ ಹೊರಟರು.
ನಿಜ ಅಲ್ವೇ ಮನಸ್ಸಿಗೆ ವಯಸ್ಸಿಲ್ಲ..! ನೀವೆನಂತೀರಿ..?
