ವಾಸ್ತವ
ವಾಸ್ತವ
ಕವಿತಾ ಆಗ ತಾನೆ ಕಣ್ಣು ಬಿಟ್ಟಳು. ಮತ್ತೆ ಕಣ್ಣು ಮುಚ್ಚಿದಳು ನಿದ್ರೆ ಬರಲಿಲ್ಲ ಮಾಯವಾಗಿತ್ತು. ಮುಗುಳ್ನಗೆಯೊಂದಿಗೆ ಎದ್ದು ದೇವರ ಪಟವನ್ನು ನೋಡಿದಳು.
ಭೂಮಿಯಲ್ಲಿ ಎಲ್ಲಾ ಕ್ಷಣಭಂಗುರ. ಈ ಜೀವ ನೀರಮೇಲಿನ ಗುಳ್ಳೆಯಂತೆ ಎಂದು ತಿರುಕನ ಕನಸನ್ನು ನೆನಪಿಸಿಕೊಂಡಳು. ಮತ್ತೆ ಕೆಲಸಕ್ಕೆ ಹೊರಡುವ ಧಾವಂತ. ಪತಿರಾಯ ಬಿಸಿನೆಸ್ ಎಂದು ಮಂಗಳೂರಿಗೆ ಹೋದವನು
ಇನ್ನೂ ಬಂದಿಲ್ಲ. ಅತ್ತೆ- ಮಾವ ಎಂಬ ಹಿರಿಯರ ಕಡೆ ಗಮನ ಕೊಡುವುದು ಮತ್ತೊಂದು ವಿಷಯ. ಆದರೆ ಎಲ್ಲವನ್ನೂ ಸಂಬಾಳಿಸಬ
ೇಕು. ಹಿರಿಯರ ಪ್ರೋತ್ಸಾಹ ಮಾತ್ರ ಅವಳ ಪಾಲಿಗೆ ಧನಾತ್ಮಕ. ಕೆಲಸ ಮಾಡುವ ಸಂಸ್ಥೆಯಲ್ಲಿ ಬೆನ್ನ ಹಿಂದೆ ಮಾತನಾಡುವ ಜನರೇ ಹೆಚ್ಚು. ಆದರೂ ನಗುನಗುತ್ತಾ ಹೊಂದಿಕೊಂಡು ಹೋಗುವ ಸ್ವಭಾವ ಅವಳಿಗೆ ಕರಗತ. ಅಧಿಕಾರಿಯ ಅಧಿಕಾರದ ಮದಕ್ಕೆ ಇವಳು ತಿರುಗುಬಾಣ. ಪ್ರತಿಶತ 90 ರಷ್ಟು ಎಲ್ಲರಿಗೂ
ಇಷ್ಟಪಾತ್ರಳು. ಜವಾಬ್ದಾರಿ ಹೆಚ್ಚಾಗಿರುವಾಗ ಸಾಧನೆಗೆ ತೊಡಕು. ಆದರೂ ಅವಳು ಕನಸು ಕಾಣುತ್ತಲೇ ಇದ್ದಾಳೆ, ಕೊನೆಯಿಲ್ಲದ ತೀರಕೆ ಸಾಗುತ್ತಲೇ ಇದ್ದಾಳೆ. ಎಷ್ಟೋ ಅಕ್ಕ ತಂಗಿಯರ ಬದುಕು ಹೀಗೆಯೇ ಅಲ್ಲವೇ ನೀವೆನಂತೀರಾ?