Vijaya Bharathi.A.S.

Abstract Children Stories Others

3  

Vijaya Bharathi.A.S.

Abstract Children Stories Others

ತುಂಟ ಕೋತಿ

ತುಂಟ ಕೋತಿ

2 mins
192


ಮಕ್ಕಳ ಕಥೆ 


ಒಂದು ದಿನ ಒಂದು ಕೋತಿಮರಿ, ತನ್ನ ಅಪ್ಪ ಅಮ್ಮ ಮತ್ತು ಮನೆಯವರಿಂದ ತಪ್ಪಿಸಿಕೊಂಡು, ಬಾಳೆಯ ತೋಟದಿಂದ ಪಕ್ಕದ ಊರಿಗೆ ಬಂದು ಬಿಟ್ಟಿತ್ತು. ತನ್ನ ಗುಂಪಿನವರನ್ನು ಹುಡುಕುತ್ತಾ ಅತ್ತಿತ್ತ ನೋಡುತ್ತಾ, ಅತ್ತಿಂದಿತ್ತ ಇತ್ತಿಂದತ್ತ ಬೀದಿಯೆಲ್ಲಾ ಸುತ್ತಾಡಿ ಸಾಕಾದ ಆ ಕೋತಿಮರಿ, ಅಲ್ಲೇ ಇದ್ದ ಒಂದು ಚಿಕ್ಕ ತೆಂಗಿನ ಮರವೇರಿ ಕುಳಿತು, ಪಿಳ ಪಿಳನೆ ಕಣ್ಣು ಹೊರಳಿಸುತ್ತಾ, ಆಹಾರಕ್ಕಾಗಿ ಪರದಾಡುತ್ತಿತ್ತು.


 ಅದೇ ಸಮಯಕ್ಕೆ ಸರಿಯಾಗಿ , ಆ ಬೀದಿಯಲ್ಲಿ ಒಬ್ಬ ಹಣ್ಣಿನ ವ್ಯಾಪಾರಿ, ಒಂದು ದೊಡ್ಡ ಬಿದಿರಿನ ಬುಟ್ಟಿಯಲ್ಲಿ ಮಾವಿನ ಹಣ್ಣು, ಸೀಬೆ ಹಣ್ಣು ,ಬಾಳೆಹಣ್ಣು, ಪರಂಗಿ ಹಣ್ಣು, ದ್ರಾಕ್ಷಿ ಮೊದಲಾ ದ ಹಣ್ಣುಗಳನ್ನು ತುಂಬಿಕೊಂಡು ವ್ಯಾಪರಕ್ಕಾಗಿ ಬರುತ್ತಿರುವುದನ್ನು ನೋಡಿತು. ಆ ಕೂಡಲೇ ಮರದಿಂದ ಚಂಗನೆ ನೆಗೆದು, ಕೆಳಕ್ಕಿಳಿಯಿತು. ಆ ವ್ಯಾಪಾರಿ, ಆ ಬುಟ್ಟಿಯ ಬಾಗಿಲನ್ನು ತೆಗೆದು ಒಂದು ಮನೆಯೊಳಗೆ ಹೋಗುವುದನ್ನೇ ಗಮನಿಸುತ್ತಿದ್ದ ಈ ಕೋತಿಮರಿ, ಥಟ್ ಅಂತ ಆ ಹಣ್ಣಿನ ಬುಟ್ಟಿಯೊಳಗೆ ಹೋಗಿ ಒಂದು ಕಡೆ ಅಡಗಿ ಕುಳಿತುಕೊಂಡಿತು. ವ್ಯಾಪಾರ ಮುಗಿಸಿ ಹೊರಬಂದ ಆ ಹಣ್ಣು ಮಾರುವವನು ಬುಟ್ಟಿಯ ಬಾಗಿಲನ್ನು ಭದ್ರಪಡಿಸಿ, ತನ್ನ ಸೈಕಲ್ ಏರಿ, ಮುಂದೆ ಹೊರಟಾಗ, ಕೋತಿಗೆ ಭಯವಾಗತೊಡಗಿತು. ’ನಾನು ಈ ಹಣ್ಣಿನ ಬುಟ್ಟಿಯೊಳಗೆ ಉಳಿದು ಬಿಟ್ಟರೆ ಏನು ಮಾಡುವುದು? ನನ್ನ ಅಪ್ಪ ಅಮ್ಮನ ಬಳಿಗೆ ಹೋಗಿ ಸೇರಿಕೊಳ್ಳುವುದು ಹೇಗೆ? ಎಂದು ಯೋಚಿಸಿದ ಆ ಕೋತಿಮರಿ, ಒಳಗಡೆ ಪರಪರನೆ ಸದ್ದು ಮಾಡುತ್ತಾ, ಸಿಕ್ಕಿದ ಹಣ್ಣುಗಳನ್ನು ತಿಂದು ಲೂಟಿ ಮಾಡುತ್ತಾ,  ಮೇಲೆ ಮೇಲಕ್ಕೆ ಜಿಗಿಯುತ್ತಿತ್ತು. ಇದಾವುದನ್ನೂ ಗಮನಿಸದ ಆ ವ್ಯಾಪಾರಿ ಸುಮಾರು ದೂರ ಸೈಕಲ್ ತುಳಿದು ಸುಸ್ತಾಗಿ, ಒಂದು ಮರದ ನೆರಳಿನಲ್ಲಿ ಸೈಕಲ್ ನಿಲ್ಲಿಸಿ ಕೂತಾಗ, ಅವನ ಹಣ್ಣಿನ ಬುಟ್ಟಿ ಒಂದೇ ಸಮನೆ ಅಲ್ಲಾಡುತ್ತಿರುವುದನ್ನು ನೋಡಿ, "ಅಯ್ಯೊ, ಈ ನನ್ನ ಬುಟ್ಟಿ ಹೀಗೇಕೆ ಅಲ್ಲಾಡುತ್ತಿದೆ? ಒಳಗಡೆ ಏನಿದೆ?" ಎಂದುಕೊಳ್ಳುತ್ತ, ಆ ಬಿದಿರಿನ ಬುಟ್ಟಿಯ ಬಾಗಿಲನ್ನು ತೆಗೆದಾಗ, ಅದರೊಳಗಿನಿಂದ ಜಿಗಿದ ಕೋತಿಮರಿಯನ್ನು ಕಂಡು, ಅವನಿಗೆ ಆಶ್ಚರ್ಯವಾಯಿತು ಜೊತೆಗೆ ತುಂಬಾ ಸಿಟ್ಟೂ ಸಹ ಬಂದು, ಅಲ್ಲಿಯೇ ಬಿದ್ದಿದ್ದ ಕೋಲೊಂದನ್ನು ಹಿಡಿದುಕೊಂಡು, ಆ ಕೋತಿಮರಿಯನ್ನು ಹೊಡೆಯಲು ಮುಂದಾದಾಗ, ಅದು ಅವನನ್ನೇ ದಿಟ್ಟಿಸಿ ನೋಡಿ, ’ಗುರ್ ಗುರ್’ ಎಂದು ಶಬ್ದ ಮಾಡಿ, ಇವನ ಕೈಗೆ ಸಿಗದೆ ಚಂಗನೆ ಹಾರಿ ಮರದ ಮೇಲೇರಿದಾಗ, "ಎಲಾ ಮಂಗ, ನನ್ನ ಹಣ್ಣುಗಳನ್ನೆಲ್ಲಾ ನುಂಗಿ, ನನ್ನನ್ನೇ ಹೆದರಿಸಿ, ಈಗ ನನ್ನ ಕೈಯಿಂದ ಏಟನ್ನು ತಪ್ಪಿಸಿಕೊಂಡು ಹೀಗೆ ಹಾರಿ ಹೋದೆಯ? ಅಬ್ಬ ನೀನೊಂದು ಅದ್ಭುತವಾದ ಪ್ರಾಣಿ." ಎಂದುಕೊಳ್ಳುತ್ತಾ

ಅಲ್ಲೇ ಮರದ ಕೆಳಗೆ ಸ್ವಲ್ಪ ಹೊತ್ತು ಕುಳಿತು ವಿಶ್ರಮಿಸಿಕೊಂಡು, ಮುಂದೆ ಸಾಗಿದನು. ಅಂದು ಅವನ ನೂರಾರು ರೂಪಾಯಿಗಳ ವ್ಯಾಪಾರ ಆ ತುಂಟಕೋತಿಯಿಂದ ನಷ್ಟವಾಗಿತ್ತು. 





Rate this content
Log in

Similar kannada story from Abstract