kaveri p u

Classics Others Children

4  

kaveri p u

Classics Others Children

ಸೂಪರ್ ಹೀರೋ

ಸೂಪರ್ ಹೀರೋ

1 min
718


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್ 


ಕವನಾಳಿಗೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೆತ್ತಳು.


ಅತಿಯಾಗಿ ಪ್ರೀತಿಸುವ ಗಂಡ ಜೊತೆಗಿದ್ದರೂ, ಅವಳಿಗೆ ಅವನ ಅಪ್ಪನೇ ಸೂಪರ್ ಹೀರೋ. ಅವರ ಅಪ್ಪನೆ ಎಲ್ಲಾ. ಅವಳ ಪುಟ್ಟ ಪ್ರಪಂಚ ಅಂದ್ರೆ ಅವರ ಅಪ್ಪ ಮತ್ತು ಅವಳ ಮನೆ. ಕವನಾಳಿಗೆ ತಾಯಿ ಇರುವುದಿಲ್ಲಾ ಹಾಗಾಗಿ ಅವಳು ಅಪ್ಪನಿಂದಲೇ ಎಲ್ಲವನ್ನು ಕಲಿತಿದ್ದಳು. ಮನೆ ಜಾವಬ್ಧಾರಿ ಹಿರಿಯರಿಗೆ ಗೌರವ ನೀಡುವುದು ಅದೆಲ್ಲವು ಅವಳಪ್ಪನ ಕಡೆಯಿಂದ ಬಂದ ಗುಣಗಳು ಹಾಗಾಗಿ ಕವನಾಳಿಗೆ ಅವಳ ಅಪ್ಪನೇ ಸೂಪರ್ ಹೀರೊ. ಹೀಗೆ ಕವನಾ ಮದುವೆಯಾಗಿ ಅಪ್ಪನ ಮನೆ ತೊರೆದು ಹೋಗುವಾಗ ಅಪ್ಪನ ಮನಸ್ಸು ಎಂದಿಗಿಂತಲೂ ಭಾರವಾಗಿತ್ತು. ಮಗಳನ್ನು ಬಿಟ್ಟು ಇರುವುದು ಅಪ್ಪನಿಗೂ ಕಷ್ಟವೇ ಆಗಿತ್ತು. ಅಳಿಯ ಉತ್ತಮ ಗುಣದವನೆಸಿದರೂ, ತಾಯಿಯಿಲ್ಲದ ಮಗಳನ್ನು ತಾನೇಷ್ಟು ಪ್ರೀತಿಸಿ, ಬೆಳೆಸಿದ್ದೇನೆ, ಅದೇ ಅಕ್ಕರೆ, ಮಮತೆ ಗಂಡನ ಮನೆಯಲ್ಲೂ ಸಿಕ್ಕೀತೇ ಎನ್ನುವ ಯೋಚನೆ ಅಪ್ಪನದು.

ಇತ್ತ ಮಗಳಿಗೂ ಅಪ್ಪನ ಬಗ್ಗೆ ಅದೇ ಯೋಚನೆ, ತಾನಾದರೆ ಅಪ್ಪನ ಆರೈಕೆ ಮಾಡುತ್ತಿದ್ದೆ, ಇನ್ನು ಮುಂದೆ ಆ ಆರೈಕೆ, ಕಾಳಜಿ ಇನ್ಯಾರು ಮಾಡಬಹುದು, ಅಪ್ಪ ಮೊದಲೇ ಸ್ವಾಭಿಮಾನಿ, ಅಲ್ಪ ಆಸರೆಯನ್ನೂ ಯಾರಿಂದಲೂ ಬಯಸದ ತನ್ನಪ್ಪ ಮುಂದೆ ಹೇಗೆ ಒಂಟಿಯಾಗಿ ಇರುತ್ತಾನೆ? ಎಂದು ಯೋಚಿಸಿದಳು. ಅಪ್ಪ-ಮಗಳ ವಿದಾಯವಾಗಲೇ ಬೇಕಿತ್ತು. 


ಗಂಡನ ಮನೆ ಸೇರಿದ ಮೇಲೂ ಪ್ರತೀ ಕೆಲಸದಲ್ಲೂ ಕವನಾ, ತನ್ನ ಸೂಪರ್ ಹೀರೊನಂತಿದ್ದ ಅಪ್ಪನನ್ನೇ ಕಾಣುತ್ತಿದ್ದಳು. 

ಅಪ್ಪ-ಮಗಳ ಸಂಬಂಧವೇ ಹಾಗಲ್ಲವೇ, ಅನನ್ಯವಾದುದು.


Rate this content
Log in

Similar kannada story from Classics