ಸ್ನೇಹಿತ
ಸ್ನೇಹಿತ
ಮನೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನೆಲ್ಲ ಮಾರನೇ ದಿನ ಸೋಮಣ್ಣನ ಕೈಗೆ ಕೊಟ್ಟು, ಹೆಂಡತಿ ಮಕ್ಕಳ ಜೊತೆ ಊರು ತೊರೆಯಲು ಸಿದ್ದನಾದ ರಾಮಣ್ಣ . ಈ ಒಂದು ಕೊನೆ ರಾತ್ರಿ ಮಾತ್ರ ತನ್ನ ಮನೆ ತನ್ನದಾಗಿರುವುದು, ನಾಳೆಗೆ ಇದು ಇನ್ಯಾರದ್ದೋ! ಕಷ್ಟಪಟ್ಟು ಪೈಸೆಗೆ ಪೈಸೆ ಕೂಡಿಸಿ, ದುಡ್ಡಿಗಿಂತ ಬೆವರನ್ನೇ ಜಾಸ್ತಿ ಹರಿಸಿ ಕಟ್ಟಿಸಿದ ತನ್ನದೇ ಮನೆಯಲ್ಲಿ ಎರಡು ವರ್ಷವೂ ಪೂರ್ತಿಯಾಗಿ ಬಾಳದ ತನ್ನ ಹಣೆಬರಹಕ್ಕೆ, ತನಗೀಡಾದ ಸಂಕಷ್ಟಕ್ಕೆ ನೊಂದುಕೊಂಡ.
ಮಾರನೇ ದಿನ ಮನೆ ಮುಂದೆ ಸೋಮಣ್ಣ ಬಂದಿದ್ದನ್ನು ನೋಡಿ ರಾಮಣ್ಣ, ಮನೆಬಿಡಲು ತನ್ನ ಹೆಂಡತಿ ಮಕ್ಕಳಿಗೆ ಹೇಳಲೆಂದು ಕೂಗುವಷ್ಟರಲ್ಲಿ ಸೋಮಣ್ಣ ಬಂದು ರಾಮಣ್ಣನ ಕೈಗೆ ಮನೆಯ ಕಾಗದ ಪತ್ರಗಳನ್ನೆಲ್ಲ ಕೊಟ್ಟ. ರಾಮಣ್ಣ ಏನೊಂದು ಅರ್ಥವಾಗದೆ ಸೋಮಣ್ಣನನ್ನು ನೋಡುತ್ತಿರಲು ಸೋಮಣ್ಣ ನಡೆದ ಕಥೆ ಹೇಳಿದ. ರಾಮಣ್ಣನ ಗೆಳೆಯ ರಮಾಕಾಂತ್ ರಾಮಣ್ಣನ ಸಾಲವನ್ನೆಲ್ಲ ತೀರಿಸಿ, ಗೆಳೆಯನ ಮನೆಯನ್ನು ಅವನಿಗೆ ಬಿಡಿಸಿ ಕೊಟ್ಟಿದ್ದ.
ನಿಜವಾದ ಗೆಳೆತನ, ಗೆಳೆಯನ ಸಹಾಯವನ್ನು ನೆನೆದು ರಾಮಣ್ಣ ಕಣ್ಣೀರಾದ. ರಮಾಕಾಂತ್ ಮುಂದಿನ ವರ್ಷ ಅಮೇರಿಕದಿಂದ ಬರುವುದು ಎಂದು ತಿಳಿದು ಅವನ ದಾರಿಗಾಗಿ ಎದುರು ನೋಡತೊಡಗಿದ.