Jayashree Kishore

Classics Inspirational Others

4  

Jayashree Kishore

Classics Inspirational Others

ಸಾಫಲ್ಯ....

ಸಾಫಲ್ಯ....

2 mins
345



ನೀಲು..... ನೀಲು ಎಂದು ಮಡದಿಯ ಹುಡುಕುತ್ತಾ ಬಂದವನೇ.... ಇನ್ನೂ ಮಲಗಿದ್ದ ಮಡದಿಯ ಕಂಡು ಗಾಬರಿಯಾದ....


ಬೇಬಿ...... ಬೇಬಿ ಎಂದು ಎಬ್ಬಿಸಿದ ....ಗಂಡ ಶಶಿಯ ಕೂಗಿಗೆ..... ಕಣ್ಣು ಬಿಟ್ಟು ಗುಡ್ ಮಾರ್ನಿಂಗ್.... ಅಯ್ಯೋ ಇದೇನು ಇಷ್ಟು ಲೇಟಾಗಿದೆ‌ ಇವತ್ತು...

ಸ್ಸಾರಿ ಎಂದು ದೇವರಿಗೆ ನಮಸ್ಕಾರ ಮಾಡಿ.


ಕಾಫಿ ಡಿಕಾಕ್ಷನ್ ಹಾಕಲು ಹೊರಟವಳಿಗೆ.... ಯಾಕೋ ಮೈಯಲ್ಲಿನ ರಕ್ತವೆಲ್ಲಾ ಸೋರಿಹೋದ ಭಾವನೆ....

ವಿಪರೀತ ಸುಸ್ತು..... ದೇವರೇ ಎಂದು....



ರೀ ತೊಗೋಳೀ ಕಾಫಿ ಎಂದಾಗ.... ಯಾಕೋ ಎಂದು ಮಡದಿಯ ಕೈ ಹಿಡಿದು ಪಕ್ಕದಲ್ಲಿ ಕೂರಿಸಿಕೊಂಡು ಕಾಫಿ ಕೈಗಿತ್ತು ಕುಡಿ.... ಎಂದು ಇನ್ನೂ ಒಂದು ಕಪ್ ಕಾಫಿ ಬೆರೆಸಿಕೊಂಡು ಬಂದು ಕೂತವನು ಅವಳ ಮುಖವನ್ನು ಒಮ್ಮೆ ನೋಡಿದ.... ಕಣ್ಣು ಕೆಳಗೆ ಕಪ್ಪು......


ಐದು ವರ್ಷದ ಸುಖ ದಾಂಪತ್ಯ ಅವರದು...ಬಹಳ ಕಷ್ಟದಿಂದ ಮುಂದೆ ಬಂದಿದ್ದ ಶಶಿಗೆ ನೀಲಾ...ಅವನ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದ್ದಳು.


ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದರೂ... ಶಶಿಯ ಕಷ್ಟ ಸುಖಗಳಲ್ಲಿ ಸಮಪಾಲು ವಹಿಸಿದ್ದಳು.


ಅವರಿಗಿದ್ದ ಒಂದೇ ಕೊರಗು ಸಂತಾನ.... ಮೂರು ವರ್ಷ ಬೇಡವೆಂದು ಇದ್ದವರು.... ಬೇಕೆಂದಾಗ ಆಗದಿದ್ದಾಗ ಬಹಳ‌ ಕೊರಗಿದಳು ನೀಲಾ.


ತೋರಿಸದ ಆಸ್ಪತ್ರೆಗಳಿಲ್ಲ...ಕೈ ಮುಗಿಯದ ದೇವರಿಲ್ಲ..

ತಂದೆ ತಾಯಿ, ಅತ್ತೆ ಮಾವ ಎಲ್ಲರೂ ಒಂದು ಒಂದು ರೀತಿಯ ಸಲಹೆ ನೀಡಿದರು.


ಹೀಗಿರುವಾಗ ಮಡದಿಯ ಮುಖ ಯಾಕೋ ಅವನಲ್ಲಿ.... ಆತಂಕ ಮೂಡಿಸಿತು.


ಅಂದು ಆಫೀಸಿಗೆ ರಜೆ ಹಾಕಿದವನೇ ತಮ್ಮ ಫ್ಯಾಮಿಲಿ ಡಾಕ್ಟರ್ ಸುಂದರ್ ಹತ್ತಿರ ಕರೆದುಕೊಂಡು ಹೋದ.


ಅವರು ನೀಲಾಳನ್ನು ಪರೀಕ್ಷಿಸಿ ಕೆಲವೊಂದು ರಕ್ತ ಪರೀಕ್ಷೆ ಮಾಡಿಸಿದರು.


ಒಂದೆರಡು ವಾರ ಬಿಟ್ಟು ಬರಲು ಹೇಳಿ ಕೆಲವೊಂದು ಮಾತ್ರೆಗಳನ್ನು ಬರೆದುಕೊಟ್ಟರು.


ಎಂದಿನಂತೆ ಲವಲವಿಕೆ ಯಿಂದ ಇದ್ದಳು ನೀಲಾ....


ಹದಿನೈದು ದಿನ ಕಳೆದಂತೆ..... ತೀರಾ ಉಸಿರಾಡಲು ಕಷ್ಟ ಪಡುವಂತಾಯಿತು....ತಕ್ಷಣ ಆಸ್ಪತ್ರೆಗೆ ದಾಖಲಿಸಿದ.


ಶಶಿಗೆ ಏನು ಮಾಡಬೇಕು ಎಂದು ತೋಚದಾಯಿತು...

ಅಮ್ಮ ಅಪ್ಪ, ಅತ್ತೆ ಮಾವ ಎಲ್ಲರೂ ಮರಗುವವರೇ...

ಡಾಕ್ಟರ್ ಸುಂದರ್... ಶಶಿಯನ್ನು ಕರೆದು....

ನೀಲಾಗೆ ಮಲ್ಟಿಪಲ್ ಮೈಲೋಮಾ ಎಂದರು.


ಅಂದರೆ ಡಾಕ್ಟರ್...... ಹೌದು ನೀಲಾ ದೇಹದಲ್ಲಿ ಪ್ಲೇಟ್ಲೆಟ್ ಗಳ ಕೊರತೆಯುಂಟಾಗುತ್ತದೆ... ಎಂದರು


ಡಾಕ್ಟರ್ ನಾನು ರಕ್ತ ಕೊಡ್ತೀನಿ...ಎಂದ.....


ನಮ್ಮ ಕೈಲಾದ ಪ್ರಯತ್ನ ನಾವು ಮಾಡುತ್ತೇವೆ.... ಇಷ್ಟು ಬೇಗ ಯಾವುದೇ ನಿರ್ಧಾರ ಬೇಡ ಎಂದರು ಸುಂದರ್.....


ಮನೆಗೆ ಬಂದ ನೀಲಾ.... ತನ್ನ ಪರಿಸ್ಥಿತಿಗೆ ಬಿಕ್ಕಿ ಬಿಕ್ಕಿ ಅತ್ತಳು.....ಶಶಿಯಂತೂ ಮೌನದ ಮೊರೆ ಹೋದ.


ವಾರ ಕಳೆಯಿತು....ನೀಲಾ ಶಶಿಯ ಹತ್ತಿರ ಬಂದು....ರೀ....ರೀ..... ಎಂದಳು.....ಅವಳ ತಲೆ ಸವರಿ ಎನೋ ಎಂದ....


ಒಂದು ಮಾತು ನಡೆಸಿಕೊಡ್ತೀರಾ ಎಂದಳು.....


ಹೇಳೋ ಎಂದನು....


ನಮ್ಮ ಕೆಲಸದವಳು ಪಾರು ಇದ್ದಾಳಲ್ಲ... ಎಂದಳು...ಹೂ ಏನಂತೆ ಮತ್ತೆ ದುಡ್ಡು ಗಿಡ್ಡು ಅಂದಳಾ..

ಎಂದು ರೇಗಿದ.


ರೀ.... ಸಮಾಧಾನ ನನ್ನ ಮಾತು ಕೇಳಿ....ಪಾಪ ಅವಳ ಕಷ್ಟ ಅವಳಿಗೆ.... ಹೌದು ನಾವು ಭಾರಿ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದೀವಿ ಅಲ್ಲವೇ???


ಬಿಡಿ ಅವರಿವರ ಭಾರ ಅವರವರಿಗೆ.....ಎಂದಳು.


ಮತ್ತೆ ಏನಂತೆ ಎಂದ....



ನೋಡಿ ನೀವು ಗದರುವ ಹಾಗಿಲ್ಲ... ಪಾಪ ಪಾರು ಇಬ್ಬರು ಮಕ್ಕಳ‌ ಸಾಕಬೇಕು....ಗಂಡ ಬೇರೆ ಇಲ್ಲ...

ತೀರಿಕೊಂಡು ವರ್ಷವಾಯಿತು...



ಅಲ್ಲೇ ಸಡನ್ ಆಗಿ ಪಾರು ಬಗ್ಗೆ ಚಿಂತೆ.... ನೋಡು ನೀನು ಇರುವ ಪರಿಸ್ಥಿತಿಯಲ್ಲಿ ಚಿಂತೆ ಮಾಡಬಾರದು ಎಂದ.


ನೋಡಿ ನಾವು ಅವಳ ಚಿಕ್ಕ ಮಗುವನ್ನು ದತ್ತು ತೆಗೆದುಕೊಳ್ಳೋಣಾ.... ಎಂದಳು.


ನೀಲು.... ನೀನು ಏನು ಹೇಳ್ತಾ ಇದ್ದೀಯಾ.... ನಿನಗೆ ಆರೋಗ್ಯ ಸರಿಯಲ್ಲ..... ಹೌದು ರೀ ಗೊತ್ತು ನಾನು ಸಾಯೋದ್ರೊಳಗೆ ಇದು ಆಗಬೇಕು ಎಂದಳು.


ಅಪ್ಪ ಅಮ್ಮ, ಅತ್ತೆ ಮಾವ.....ಒಪ್ಪುತ್ತಾರಾ.....


ನಾನು ಒಪ್ಪಿಸುತ್ತಾನೆ ಎಂದಳು.


ಅವಳ ಆಸೆಗೆ ಯಾರು ನೀರೆರಚಲಿಲ್ಲಾ.....

ಪಾರುವನ್ನು ಒಪ್ಪಿಸಿ ಚಿಕ್ಕ ಮಗಳು ಮೀನಾಳನ್ನು ದತ್ತು ಪಡೆದರು.


ನೀಲುವಿನ ಸಂತಸಕ್ಕೆ ಪಾರವೇ ಇರಲಿಲ್ಲ....

ಶಶಿ....ಆಯಾಸ ಮಾಡ್ಕಬೇಡ ಎಂದ.


ಹೂ ಹೂ ಎಂದಳು.... ರಾತ್ರಿ ....ಶಶಿಯ ಹತ್ತಿರ ಬಂದು...ರೀ ನನಗೆ ಏನಾದರೂ ಆದರೆ ಮಗನಾ ಚೆನ್ನಾಗಿ ನೋಡಿಕೊಳ್ಳಿ....ಆ ಮಗುಗೇ‌ ಇನ್ನೊಂದು ಅಮ್ಮನ ತರಬೇಕು ಎಂದು ಕಣ್ಣು ಮುಚ್ಚಿದಳು.


ತನ್ನ ಜೀವನದ ಸಾಫಲ್ಯದ ಕಡೆಗೆ ನಡೆದಳು ನೀಲೂ.


Rate this content
Log in

Similar kannada story from Classics