ಸಾಮ್ರಾಜ್ಯ
ಸಾಮ್ರಾಜ್ಯ
ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್
ಒಂದು ಚಿಕ್ಕ ಹಳ್ಳಿ. ಹೆಚ್ಚು ಕಡಿಮೆ 300 ಜನ ಇರುವಂತಹ ಊರು, ಅಲ್ಲೊಬ್ಬ ರಾಜನಿದ್ದನು. ಅವನು ಕೆಲವರಿಗೆ ವರವಾಗಿದ್ದರೆ, ಮತ್ತೊಬ್ಬರಿಗೆ ಶಾಪವಾಗಿದ್ದನು. ಅದು ಸಂಪೂರ್ಣ ಅವನದ್ದೇ ಸಾಮ್ರಾಜ್ಯವಾಗಿತ್ತು. ಅಲ್ಲಿ ಯಾರ ಮಾತಿಗೂ ಬೆಲೆ ಇರಲಿಲ್ಲ. ಅವನ ಮಾತುಗಳನ್ನು ತಪ್ಪದೆ ಪಾಲಿಸಲೇಬೇಕಿತ್ತು. ಮಾತಿಗೆ ತಪ್ಪಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಎಲ್ಲಾ ವಿಷಯದಲ್ಲಿ ಅವನು ಒಳ್ಳೆಯ ರಾಜನಾಗಿದ್ದರೂ, ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ನೋಡಿದರೆ ಅವನು ಅವನಾಗುತ್ತಿರಲಿಲ್ಲಾ. ಮನುಷ್ಯ ಜನ್ಮವನ್ನೇ ಮರೆಯುತ್ತಿದ್ದ. ಅವನು ಆ ಹೆಣ್ಣು ಮಕ್ಕಳನ್ನು ಒಂದು ದಿನವಾದರೂ ತನ್ನ ಜೊತೆ ೈರುವಂತೆ ಮಾಡುತ್ತಿದ್ದ. ಅವರ ಅನುಮತಿಗೆ ಅವನು ಕಾಯುತ್ತಿರಲಿಲ್ಲಾ. ತನ್ನ ಆಸೆಗಳನ್ನು ತೀರಿಸಿಕೊಂಡಿ ಕೈ ಬಿಡುತ್ತಿದ್ದ.
ಇಂತಹ ಸಾಮ್ರಾಜ್ಯದಲ್ಲಿ ಬದುಕಲು ಸ್ಫೂರ್ತಿಗೆ ಮನಸ್ಸು ಇರಲಿಲ್ಲ. ಅವನ ಕಣ್ಣಿಗೆ ಈ ಹೆಣ್ಣು ಕೂಡ ಬಿದ್ದಳು. ಬೇರೆ ಹುಡುಗಿಯರಂತೆ ಇವಳನ್ನು ಕಾಮದಾಸೆಗೆ ಬಯಸದ ರಾಜ, ಶಾಶ್ವತ ಪಟ್ಟದರಸಿಯನ್ನಾಗಿ ಮಾಡಿಕೊಳ್ಳುತ್ತೇನೆಂದ. ಒಲ್ಲದ ಮನಸ್ಸಿನಿಂದ ಅವನ ಸಾಮ್ರಾಜ್ಯಕ್ಕೆ ಹೆಜ್ಜೆ ಇಟ್ಟಳು. ಆ ರಾಜನ ತಲೆಯನ್ನು ಅಷ್ಟಾಗಿ ಕೆಡಿಸಿದ ಮೊದಲ ಹುಡುಗಿ ಈ ಸ್ಫೂರ್ತಿ. ಪ್ರೀತಿಯಿಂದಲೇ ಅವನ ಸಾಮ್ರಾಜ್ಯದ ಒಡತಿಯಾಗಿ. ಆ ಊರಿನ ಎಲ್ಲಾ ಹೆಣ್ಣುಮಕ್ಕಳ ಕಷ್ಟ ಸುಖಗಳ ಜೊತೆಯಾಗಿ ನಿಂತಳು.
ಅವರಿಬ್ಬರಿಗೂ ಒಂದು ಹೆಣ್ಣು ಮಗು ಜನಿಸಿತು.
ಆಗ ಆ ರಾಜನಿಗೆ ಗೊತ್ತಾಗಿದ್ದು ಹೆಣ್ಣಿನ ಬೆಲೆ ಏನು ಎಂಬುದು.
ಇಷ್ಟು ದಿನ ಮಾಡಿದ ತಪ್ಪಿಗೆ ಜನರ ಮುಂದೆ ಕ್ಷಮೆ ಕೋರಿದನು.
ಆಮೇಲೆ ಎಲ್ಲರಿಗೂ ತನ್ನಾ ಸಾಮ್ರಾಜ್ಯದಲ್ಲಿ ತಮಗೆ ಇಷ್ಟ ಬಂದಹಾಗೆ ಇರುವ ಸ್ವಾತಂತ್ರ್ಯ ನೀಡಿದನು
