Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ರಾಜನ ರಾಜಧಾನಿ

ರಾಜನ ರಾಜಧಾನಿ

1 min
138


ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಯಾವಾಗಲೂ ತನ್ನ ರಾಜ್ಯ ವಿಸ್ತರಣೆ ಬಗ್ಗೆಯೇ ಚಿಂತೆ. ಪ್ರತಿಬಾರಿ ಶತ್ರುವಿನೊಡನೆ ಹೋರಾಡಿ ತನ್ನ ರಾಜ್ಯ ವನ್ನು ಹಿಗ್ಗಿಸುತ್ತಾ ಹೋದ. 

ಅವನಿಗೆ ಆಡಳಿತ ನಿರ್ವಹಣೆಯ ಸಮಸ್ಯೆ ಎದುರಾಗಿ,ತನ್ನ ವಿಶಾಲವಾದ ಭೂಭಾಗವನ್ನು ಹಲವು ಭಾಗಗಳಾಗಿ ವಿಂಗಡಿಸಿ , ಒಂದೊಂದು ಭಾಗಕ್ಕೆ ಒಬ್ಬೊಬ್ಬ ತನ್ನ ಕೈಕೆಳಗಿನ ಸಾಮಂತರನ್ನು ನೇಮಿಸಿ, ಅವರಿಗೆ ಆಡಳಿತದ ಅಧಿಕಾರವನ್ನು ಹೊಂದಿದೆ ವರ್ಗಾವಣೆ ಮಾಡುತ್ತಾ ಹೋದ. 

ಹೀಗೆ ವಿಭಾಗ ಮಾಡಿದ ನಂತರ ,ಆಯಾ ವಿಭಾಗದ ಕೇಂದ್ರದಲ್ಲಿರುವ ಮುಖ್ಯ ನಗರವನ್ನು ರಾಜಧಾನಿಯನ್ನಾಗಿಸಿದ.

ಹೀಗೆ ಮಾಡಿದ ನಂತರ, ತಾನು ತನ್ನ ಮನಸೋ ಇಚ್ಛೆಯಂತೆ, ರಾಜಧಾನಿಯನ್ನು ತನಗೆ ಬೇಕಾದ ಹಾಗೆ ಬದಲಾಯಿಸುತ್ತಾ ಹೋದ. ಇದನ್ನು ಸಹಿಸದ ಅವನ ರಾಜ್ಯದ ಪ್ರಜೆಗಳು ಧಂಗೆ ಎದ್ದರು.

ಆ ರಾಜನನ್ನು ಕೆಳಗಿಳಿಸಿ, ಪ್ರಜೆಗಳೇ ಪ್ರಭುಗಳು ಆದರು.


Rate this content
Log in

Similar kannada story from Abstract