STORYMIRROR

JAISHREE HALLUR

Abstract Classics Others

4  

JAISHREE HALLUR

Abstract Classics Others

ಪ್ರೀತಿಯ ಅಪ್ಪನ ನೆನಪಲ್ಲಿ ಇಂದು...

ಪ್ರೀತಿಯ ಅಪ್ಪನ ನೆನಪಲ್ಲಿ ಇಂದು...

2 mins
237


   ಮನಸ್ಸು ಯಾಕೋ ವರ್ಷಗಳ ಹಿಂದೋಡಿತ್ತು. ನನಗಾಗ ಹದಿನಾರರ ವಯಸ್ಸು. ಎಸ್ಎಸ್ಎಲ್ಸಿ ತರಗತಿಯಲ್ಲಿ ಓದುತ್ತಿದ್ದೆ. ಮನೆಯಲ್ಲಿ ಹೇಳಿಕೊಳ್ಳಲಾಗದ ಬಡತನದ ಪರಿಸ್ಥಿತಿ. ಅಜ್ಜಿಯ ವಾಸಿಯಾಗದ ಕಾಯಿಲೆ, ತಮ್ಮ ತಂಗಿಯರ ಓದಿನ ಖರ್ಚು, ಅವ್ವನ ಕೆಮ್ಮಿನಿಂದಾಗಿ ದವಾಖಾನೆಯ ಖರ್ಚಿನಿಂದಾಗಿ ಸೋತು ಕಂಗಾಲಾದ ಅಪ್ಪನ ನಿಶ್ಯಕ್ತಿಯ ಅರಿವು ನನಗೆ ಅಲ್ಪಸ್ವಲ್ಪ ಅರಿವಾಗಿತ್ತು. 

ಬದುಕಿನ ನೋವುಗಳ ನಡುವೆ, ಹೋರಾಟವೂ ನಡೆದಿತ್ತು ಮನಸ್ಸಿನೊಳಗೆ. ಎಲ್ಲದಕ್ಕೂ ಮೂಕಸಾಕ್ಷಿಯಾಗಿಸಿತ್ತು ನನ್ನ ಇರುವಿಕೆ. 

ಮೌನದ ಜೊತೆಗೆ, ಆಧ್ಯಾತ್ಮಿಕತೆಯನ್ನೂ ಬಿತ್ತುತ್ತಿದ್ದ ಅಪ್ಪನಲ್ಲಿ ನನಗೆ ಅಪಾರ ಪ್ರೀತಿಯಿತ್ತು. ಆಗಲೆ , ನಾನು ಆಧ್ಯಾತ್ಮ ವಿಚಾರಗಳಲ್ಲಿ ತಲ್ಲೀನಳಾದದ್ದು. ವಿವೇಕಾನಂದರ, ಪರಮಹಂಸರ, ಅಂಬೇಡ್ಕರ್ ಅವರ ಸಾಹಿತ್ಯಗಳ ಕಡೆ ಗಮನ ಹರಿದಿತ್ತು. ಜೊತೆಗೆ, Bertrand Russel ಅವರ ಪ್ರೆರೇಪಿತ ಲೇಖನಗಳೂ ನನ್ನ ಓದಿನಲ್ಲಿ ಸೇರ್ಪಡೆಯಾಗಿದ್ದವು. 

ಹಲವು ಸಲ, ಮಹಾಭಾರತ ಹಾಗೂ ರಾಮಾಯಣಗಳು ಬಾರಿ ಬಾರಿ ಓದುವಂತೆ ಮಾಡಿದ್ದವು. ಇವುಗಳ ನಡುವೆ, ಹಸಿವು, ನೀರಡಿಕೆಗಳತ್ತ ಅಸಡ್ಡೆಯೂ ಉಂಟಾಗಿದ್ದು ನಿಜ. ಭಾವನೆಗಳು ಕೆಲವೊಮ್ಮೆ ನಿಜದ ಬದುಕನ್ನು ಬದಿಗೊತ್ತಿ, ಕನಸಿಗೂ ಅವಕಾಶ ಕೊಟ್ಟಿತ್ತು. ಆಗ, ಅಪ್ಪನದೊಂದು ಕೋರಿಕೆಯಿತ್ತು. ವಿಮಾನದಲ್ಲೊಮ್ಮೆ ಪಯಣಿಸುವ ಆಶಯ. ಅದೊಂದು ಮರೀಚಿಕೆಯಾಗಿತ್ತು ಆಗಿನ ದಿನಗಳಲ್ಲಿ. 

ನಾನು ಬಹಳಷ್ಟು ಓದಿದ ನಂತರ, ಐಎಎಸ್ ಪಾಸಾಗಿ, ನೌಕರಿ ಗಿಟ್ಟಿಸಿಕೊಂಡ ನಂತರ ಅಪ್ಪನ ಆಸೆಯನ್ನು ಪೂರೈಸುವ ಕನಸಂತೂ ಇತ್ತು. 

ಆದರೆ, ಆದರೆ, ಅದಾವುದೂ ಆಗಲೇ ಇಲ್ಲ. ಕನಸು ಕನಸಾಗಿಯೇ ಉಳಿಯಿತು. ನನಸಾಗುವಷ್ಟರಲ್ಲಿ ಅಪ್ಪನೇ ಇಲ್ಲವಾದ ಸನ್ನಿವೇಷ ಈಗ. 

ಇಷ್ಟು ದಿನಗಳಲ್ಲಿ, ಒಮ್ಮೆಯೂ ಅವರ ಆಸೆಯನ್ನು ನೇರವೇರಿಸುವ ಪ್ರಯತ್ನವನ್ನು ನಾನು ಮಾಡಲು ಯತ್ನಿಸಿದರೂ ಅದಕೊಂದರಂತೆ ಹಲವಾರು ಬಾರಿ ತೊಡಕುಗಳೇ ಹೆಚ್ಚಾಗಿದ್ದವು. ಅನಾರೋಗ್ಯದ ಕಾರಣ ಒಂದಾದರೆ, ಸಮಯದ ಅಭಾವ ಇನ್ನೊಂದೆಡೆಗೆ.

ಅಜ್ಜಿಯು ಹಾಸಿಗೆ ಹಿಡಿದ ದಿನಗಳಲ್ಲಿ, ಹತ್ತಿರ ಕುಳಿತು ಭಾಗವತ ಓದಿಸುತ್ತಿದ್ದರು ನನ್ನಿಂದ. ನಾನೂ ಆಸಕ್ತಿಯಿಂದ ಓದುತ್ತಿದ್ದೆ. ಅಜ್ಜಿಗೆ ಅರ್ಥವಾಗುತ್ತಿತ್ತೋ ಇಲ್ಲವೋ, ಗೊತ್ತಿಲ್ಲ. ಅಂತೂ ಅಪ್ಪ ಹೇಳಿದ್ದನ್ನು ಮಾಡಿದ ಸಮಾಧಾನ .

ಅವ್ವ ಬಿಡುವಿಲ್ಲದೇ ದುಡಿದು ಮಲಗಿದಾಗ, ನನ್ನದೂ ಅಳಿಲು ಸೇವೆ ಅಡಿಗೆ ಮನೆಯಲ್ಲಿರುತ್ತಿತ್ತು. ಅವಳು ಆಸ್ಪತ್ರೆ ಸೇರಿದಾಗಲೆಲ್ಲಾ, ನನ್ನ ಪಾಡು ಹೇಳತೀರದು. 

ಹಣದ ಅಭಾವ ಒಂದೆಡೆಯಾದರೆ, ಶಾಲೆಯ ಓದು ಹಿಂದೆಬೀಳುವ ಆತಂಕ ಇನ್ನೊಂದೆಡೆ. ಪುಟ್ಟ ತಮ್ಮ ತಂಗಿಯರ ಪಾಲನೆಯ ಜವಾಬ್ಧಾರಿ ಇನ್ನೊಂದೆಡೆಯಿತ್ತು. 

ಇಂತಹ ಪರಿಸ್ಥಿತಿಯಲ್ಲಿ, ನನಗೆ ಇಂಜಿನೀಯರಿಂಗ್ ಪದವಿ ಕಾಲೇಜಿನಲ್ಲಿ ಸೀಟು ದೊರೆತದ್ದು, ಹಾಗೂ ಹಾಸ್ಟೆಲ್ ನಲ್ಲಿರಬೇಕಾದ ಸನ್ನಿವೇಶ ಮತ್ತಷ್ಟು ಆತಂಕವುಂಟುಮಾಡಿತ್ತು.

ಆದರೆ, ಅಪ್ಪನ ಧೈರ್ಯ ತುಂಬುವ ಮಾತು, ನನ್ನ ಸ್ಥೈರ್ಯವನ್ನು ಹೆಚ್ಚಿಸಿತ್ತು.

ವ್ಯಾಸಂಗದ ಶುರುವಿನಲ್ಲಿ, ಮನೆಯವರನ್ನು ನೆನೆದು ಕಣ್ಣೀರಿಡದ ದಿನವಿರಲಿಲ್ಲ. ಇದರ ಜೊತೆಗೆ, ನನ್ನೊಳಗಿದ್ದ ಹಟದ ಸ್ವಭಾವ, ಓದನ್ನು ಅತಿಯಾಗಿ ಹಚ್ಚಿಕೊಂಡಿತು. ಊಟದ ಅಭಾವ, ಹಣದ ಅಭಾವ, ಎಲ್ಲವೂ ನನ್ನೊಳಗನ್ನು ಗಟ್ಟಿಯಾಗಿಸುತ್ತಾ ಹೋದದ್ದು ಗಮನಕ್ಕೆ ಬರಲೇಇಲ್ಲ. ಆಧ್ಯಾತ್ಮ ತನ್ನೊಳಗೇ ಮನೆಮಾಡಿತ್ತು.

ನಾಲ್ಕು ವರ್ಷಗಳ ಕೊನೆಗೆ, ಸರಕಾರೀ ನೌಕರಿ ಖಾಯಂ ಆಗಿದ್ದ ಕ್ಷಣ, ಅಪ್ಪನ ನಿವೃತ್ತಿ ತಟ್ಟನೆ ಎದುರಾಗಿ ಗಾಭರಿಯೂ ಆಗಿತ್ತು. ಮನೆಯ ಸಂಪೂರ್ಣ ಹೊಣೆ ನನ್ನ ಮೇಲಿತ್ತು. ಇದು ನನ್ನ ಕನಸೂ ಆಗಿತ್ತು..

ಅಪ್ಪನಿಗೆ ಇನ್ನು ನಿರಾಳತನ. ಆರಾಮ ಬೇಕಿತ್ತು. 

ಮೊದಲ ಸಂಬಳದಲ್ಲಿ ಟೀವಿ ಖರೀದಿ, ಹೊಸಬಟ್ಟೆಬರೆಗಳು, ಸಿಹಿತಿನಿಸುಗಳಿದ್ದವು. ಸಂತಸದ ಹೊಳೆ. ಸುಖದ ದಿನಗಳ ಆಗಮನವಿತ್ತು.

ನಂತರ , ಯಾಂತ್ರಿಕ ಬದುಕು, ಮನೆ, ಆಫೀಸು, ಸಂಸಾರ, ತಾಪತ್ರಯಗಳ ನಡುವೆ ಎದುರಾದವರ ಗಮನಿಸದೇ ಮುನ್ನಡೆದ ದಿನಗಳು..

ಈಗ್ಗೆ ಅಪ್ಪ ನಿರ್ಗಮಿಸಿ ಮೂರು ವರ್ಷಗಳಾದರೂ, ಅದೇ ನೆನಪುಗಳು ಹಸಿಯಾಗಿವೆ. 

ಮುಪ್ಪಿನಕಾಲದಲ್ಲೂ ಧೈರ್ಯ ತುಂಬುವ ಮನೋಭಾವದೊಂದಿಗೆ ಬದುಕಿದ ಶ್ರೇಷ್ಟ ಜೀವವದು. ಕಷ್ಟಗಳನ್ನು ಮೌನವಾಗಿ ಸಹಿಸಿದ ಅಪ್ಪನಿಗೆ ನನ್ನದೊಂದು ಹೃತ್ಪೂರ್ವಕ ವಂದನೆಗಳು. ನಾನಿಲ್ಲಿ, ಇಂದು ಬದುಕಿರಲು ಕಾರಣ ಅಪ್ಪ. ಅಮ್ಮನ ಜೊತೆಗಿನ ಉತ್ಸಾಹ ಈಗಿಲ್ಲ. ಎಲ್ಲವೂ ಶೂನ್ಯದತ್ತ ಬೊಟ್ಟು ಮಾಡಿವೆ. 

ಮಕ್ಕಳ ಸಂಸಾರಗಳು ಎಗ್ಗಿಲ್ಲದೆ ಸಾಗಿವೆಯಾದರೂ, ಅಮ್ಮನ ಹೃದಯ ವಿಲವಿಲನೆ ತುಡಿದಿದೆ.

ತನ್ನತನವನ್ನು ಕಳೆದುಕೊಂಡು , ಸ್ವಾವಲಂಭಿಯಾಗಿ ಬದುಕುವ ಹಿಂಸೆಗೆ ಗುರಿಯಾಗಿದೆ. 

ಯಾರ ಬೆಂಬಲವೂ ಇಲ್ಲದೆ ಜೀವಿಸುವ ಆಸೆಯಿದ್ದರೂ ಪರಿಸ್ಥಿತಯ ಕೈಗೊಂಬೆಯಾದಂತಿದೆ.

ಮಕ್ಕಳ , ಸೊಸೆಯಂದಿರ, ಮೊಮ್ಮಕ್ಕಳ ನಡುವೆ ತಾನೇನೆಂಬ ಪ್ರಶ್ನೆಗೆ ಉತ್ತರ ಸಿಗದೇ ಒದ್ದಾಡುತ್ತಿದೆ ಅವಳ ಮನಸ್ನು.

ಅವಹೇಳನೆ, ಅವಮಾನಗಳನ್ನು ಸಹಿಸುತ್ತ, ನೋವು ನುಂಗಿ, ನಗಲು ಪ್ರಯತ್ನಿಸುತ್ತಿರುವ ಅಮ್ಮನ ಕಂಡು ನನಗೆ ಮರುಕದೊಂದಿಗೆ, ಕರುಣೆಯೂ ಬರುತ್ತದೆ. 

ಎಂತಹ ಮಹಾನ್ ತಾಯಿಗೆ ಎಂತಹ ಬದುಕು?

ನಾನಿನ್ನೂ ಇದನ್ನು ನೋಡುತ್ತಾ , ಕೈಲಾಗದೇ ಸುಮ್ಮನಿದ್ದೇನಲ್ಲಾ ಎಂಬ ಕೊರಗು ಕಾಡುತ್ತಿದೆ. ಅಪ್ಪನ ಆಸೆಯನ್ನಂತೂ ತೀರಿಸಲಾಗಲಿಲ್ಲ. ಅವ್ವನನ್ನಾದರೂ, ಸುಖವಾಗಿ ನೋಡಿಕೊಳ್ಳುವ ಬಯಕೆಯುಂಟು. 

ಆ ದೇವರು ನನಗೆ ಆ ಅವಕಾಶವನ್ನು ಕೊಡಲಿ ಎಂದು ಆಶಿಸುತ್ತೇನೆ.

ಅವಳ ಇನ್ನುಳಿದ ದಿನಗಳಾದರೂ ಆರಾಮವಾಗಿ ರದು ಪ್ರಾರ್ಥಿಸುತ್ತೇನೆ. 


Rate this content
Log in

Similar kannada story from Abstract