ಪ್ರೀತಿ
ಪ್ರೀತಿ
ಪ್ರೀತಿ ಎಂದರೆ ಒಂದು ಬಂಧ ಒಬ್ಬರನ್ನೊಬ್ಬರು ಅರ್ಥೈಸಿಕೋಳ್ಳಲು ಸಾಮರ್ಥ್ಯವಿರುವ ಬಾಂಧವ್ಯ
ನಮಗೆ ಒಬ್ಬ ವ್ಯಕ್ತಿಯ ಮೇಲೆ ಇರುವ ಒಲವು . ಪ್ರೀತಿ ಎಂದರೆ ಪವಿತ್ರ .ಸೌಂದರ್ಯ ರೂಪ ಆಸ್ತಿ ವಯಸ್ಸು ಐಶ್ವರ್ಯವನ್ನು ನೋಡಿ ಬರುವ ವ್ಯಾಮೋಹಕ್ಕಲ್ಲದ ಒಬ್ಬ ವ್ಯಕ್ತಿಯ ಮೇಲೆ ಇರುವ ಕಾಳಜಿ.
ನಾವು ನಮ್ಮ ಕುಟುಂಬವನ್ನು ಪ್ರೀತಿಸುತ್ತೇವೆ ನಮ್ಮ ಸ್ನೇಹಿತರನ್ನು ಪ್ರೀತಿಸುತ್ತೇವೆ ನಮ್ಮ ಸಂಭಂದಿಕರನ್ನು ಪ್ರೀತಿಸುತ್ತೇವೆ ನಮ್ಮ ನೆರೆಹೊರೆಯವರನ್ನು ಪ್ರೀತಿಸುತ್ತೇವೆ ನಮ್ಮ ರಾಜ್ಯವನ್ನು ಪ್ರೀತಿಸುತ್ತೇವೆ ಹಾಗೂ ನಮ್ಮ ದೇಶವನ್ನು ಪ್ರೀತಿಸುತ್ತೇವೆ ಅಲ್ಲದೆ ಜಗತ್ತನ್ನೇ ಪ್ರೀತಿಸುತ್ತೇವೆ.
ಪ್ರೀತಿಯು ಅಮರ, ಪ್ರೀತಿ ಎಂದರೆ ಕೆಟ್ಟ ಅರ್ಥ ಇಲ್ಲ
ಪ್ರೀತಿ ಅನ್ನೋದು ಸ್ವಂತಿಕೆ. ನನ್ನವಳು, ನನ್ನವನು, ನನ್ನದು, ನನ್ನವರು,ನನ್ನ ರಾಜ್ಯ, ನನ್ನ ದೇಶ, ನನ್ನ ಜಗತ್ತು ಹೀಗೆ ನಮ್ಮಲ್ಲಿ ಅವರನ್ನು ಅರ್ಧಭಾಗವಾಗಿ ಜೋಡಿಸಿಕೋಳ್ಳುವುದು ಪ್ರೀತಿ
ಎಲ್ಲರೂ ಪ್ರೀತಿಯಿಂದ ಇರಬೇಕು ಎಂದು ಹೇಳುತ್ತಾರೆ ಅದರರ್ಥ ಅನ್ಯೋನ್ಯತೆಯಿಂದ ಇರಬೇಕು.
ಪ್ರೀತಿ ಎಂದರೆ ಒಂದು ಹುಡುಗ ಮತ್ತು ಒಂದು ಹುಡುಗಿಯ ಮಧ್ಯ ಇರುವ ಸಂಬಂಧ ಅಷ್ಟೇ ಅಲ್ಲ. ಪ್ರೀತಿ ಅನ್ನೋದು ಎಲ್ಲಾ ಬಂಧಗಳಲ್ಲಿ ತುಂಬಿರುತ್ತದೆ ಆದರೆ ಆಯಾ ಸಂಬಂಧದ ಜೋತೆಗಿನ ಒಡನಾಟದ ರೀತಿ ಬೇರೆಯಾಗಿರುತ್ತದೆ ಉದಾಹರಣೆಗೆ ಅಮ್ಮನ ಮೇಲಿನ ಪ್ರೀತಿ, ಅಪ್ಪನ ಮೇಲಿನ ಪ್ರೀತಿ, ಅಕ್ಕನ ಮೇಲಿನ ಪ್ರೀತಿ, ಅಣ್ಣನ ಮೇಲಿನ ಪ್ರೀತಿ, ಗುರುವಿನ ಮೇಲಿನ ಪ್ರೀತಿ ಮತ್ತು ಸ್ನೇಹಿತನ ಮೇಲಿನ ಪ್ರೀತಿ ಇತ್ಯಾದಿ
ಪ್ರಯಾಣಕ್ಕೆ ಹೋಗಿದ್ದ ಒಂದು ಹುಡುಗ ಮತ್ತು ಹುಡುಗಿಯ ಮಧ್ಯ ಪರಿಚಯದಿಂದ ಪ್ರೀತಿ ಆಗಿದ್ದು ಒಂದು ಪ್ರೇಮ ಕಥೆ
ರಾತ್ರಿ ಹನ್ನೊಂದು ಗಂಟೆ ಆಗಿತ್ತು ಬಸ್ ಹೋರಡುವ ಸಮಯ ಹುಡುಗಿಯರ ಗುಂಪು ಆಗಲೇ ಬಸ್ ಒಳಗಡೆ ಕುತಾಗಿತ್ತು ಆದರೆ ಹುಡುಗರ ಗುಂಪು ಒಬ್ಬ ಸ್ನೇಹಿತನು ಇನ್ನು ಬರದ ಕಾರಣ ಅವನಿಗಾಗಿ ಕಾಯುತ್ತ ಬಸ್ ಹೊರಗಡೆ ಕಾಯುತ್ತಿದ್ದರು ಹುಡುಗಿಯರು ಒಳಗಡೆ ಗೊಣಗುತ್ತಿದ್ದರು ವಿಷ್ಣು ಯಾರಿಗೋಸ್ಕರ ಕಾಯುತ್ತಿದ್ದಿರಾ?
ಎಲ್ಲಾ ಇಲ್ಲೆ ಇದ್ದಿವಲ್ಲ ತುಂಬಾ ಸಮಯ ಆಯ್ತು ಇಷ್ಟೋತ್ತಿಗಾಗಲೆ ಹೊರಡಬೇಕಿತ್ತು. ಸಂಕೇತ್ ನನ್ನ ಆಪ್ತ ಗೆಳೆಯ, ನಿತಿನ್ ಗಾಗಿ ಕಾಯ್ತಿದಿನಿ ಅವನು ಬರ್ತಿನಂತ ಹೇಳಿದ್ದ. ನಮ್ಮನೆ ಪಕ್ಕ ಇರ್ತಾನೆ. ಒಳ್ಳೆ ಹುಡುಗ ಟೈಂಪಾಸ್ ಆಗುತ್ತೆ, ತುಂಬಾ ಹಾಸ್ಯ ಮಾಡ್ತಾನೆ.
ಕೆಂಪು ಜಾಕೆಟ್ ಹಾಕಿಕೊಂಡು ಬರ್ತಿದ್ದಾನಲ್ಲಾ ಅವ್ನೆ ಏನು ನೋಡೊ ನಿನ್ ಸ್ನೇಹಿತ ಲೋಹಿತ್ ಕೇಳಿದ.
ನಿತಿನ್ ಬಸ್ ಹತ್ತಿರ ಬಂದ ಸಂಕೇತ್ ಹೂಂ ಕಣ್ರೋ ಇವ್ನೆ ನನ್ ಗೆಳೆಯ ಅಂತ ಎಲ್ರಿಗೂ ಪರಿಚಯ ಮಾಡಿಸಿಕ್ಕೊಟ್ಟ ಎಲ್ಲರು ಬಸ್ ಹತ್ತಿದ್ದರು ಬಸ್ ಸಾಗಿತು. ನಿತಿನ್ ಗುಂಪು ಬಸ್ ನ ಮುಂದಿನ ಭಾಗದಲ್ಲಿ ಕುಳಿತಿತ್ತು. ಶ್ರಾವ್ಯ ಇವಳು ಕೂಡ ಸಿನಿಯರ್ ಹುಡುಗಿಯರ ಜೊತೆ ಬಂದಿದ್ದಳು. ಬಸ್ ನ ಹಿಂದಿನ ಭಾಗದಲ್ಲಿ ಕುಳಿತಿದ್ದಳು. ಹಾಗೆ ಹುಡುಗರು ಮತ್ತು ಹುಡುಗಿಯರು ಬೇರೆ ಬೇರೆ ಭಾಗದಲ್ಲಿ ಕೂತಿದ್ದರು.ನಿತಿನ್ ದಿನದಲ್ಲಿ ಪ್ರಯಾಣ ಮಾಡಿದರೆ ಚೆನ್ನಾಗಿರ್ತಿತ್ತು ರಾತ್ರಿ ಪ್ರಯಾಣ ಬರಿ ನಿದ್ದೆ ಮಾಡಬೇಕಷ್ಟೆ.
ನಮ್ದು ಅದೆ ಪ್ಲಾನ್ ಇತ್ತು. ಕೆಲವು ಜನ ಪ್ರವಾಸಕ್ಕೆ ಹೋಗಲು ತಯಾರಾಗುವುದಕ್ಕೆ ಸಮಯ ಇಷ್ಟು ತೆಗೆದುಕೊಂಡ್ರು ಸಂಕೇತ್. ಈ ಬಾರಿಯ ಪ್ರವಾಸ ಮನೋರಂಜಿತವಾಗಿದ್ದರೆ ಇನ್ನೊಂದು ಬಾರಿ ಇಟ್ಟರಾಯಿತು.
ಹೇಳೊದೆ ಬೇಡ ಅವರೆ ತಯಾರಾಗಿ ಕೂತಿರ್ತಾರೆ ಹ್ಹ ಹ್ಹ ಎಲ್ಲರು ಜೋರಾಗಿ ನಗತೋಡಗಿದರು.
ಹೀಗೆ ಮಾತಿನ ಚಕಮಕಿ ನಡೆಯಿತು ಒಂದಾದ ನಂತರ ಒಂದು ವಿಷಯಗಳ ಬಗ್ಗೆ ಚರ್ಚೆ ಒಮ್ಮೆ ರಾಜಕೀಯದ ಕುರಿತು ಇನ್ನೊಮ್ಮೆ ಕಾಲೇಜಿನ ಕುರಿತು ಸಂಭಾಷಣೆ ನಡೆಯಿತು.ಆದರೆ ಇತ್ತ ಹುಡುಗಿಯರು ಎಲ್ಲಾ ಮಲಗಿದ್ದರು ನಾಲ್ಕು ಜನ ಎಚ್ಚರಿದ್ದರಷ್ಟ್ಟೆ.
ಸೌಮ್ಯಳ ಗುಂಪೊಂದು ಇವಾಗ್ಲೆ ಕಾಲು ನೋವು ಬೆಳಿಗ್ಗೆ ಆಗುವಷ್ಟರಲ್ಲಿ ಏನು ಗತಿ ನಂಬ್ದು! ಇವರದ್ದೊಂದು ಗುಸುಪಿಸು ಮಾತುಗಳು ಸ್ವಲ್ಪ ಮುಂದೆ ಸುಮಾರು 3 ಗಂಟೆ ಆಗಿತ್ತು ಬಸ್ಸನ್ನು ನಿಲ್ಲಿಸಿದರು.ರಿಸಸ್ ಹೋಗುವವರು ಹೋಗಲಿ ಅಂತ ಆದರೆ ಅರ್ಧಕ್ಕಿಂತ ಹೆಚ್ಚು ಜನ ಕಾಲುನೋವಿಂದ ಸ್ವಲ್ಪ ಆರಾಮ ಸಿಗಲಿ ಅಂತ ಬಸ್ಸು ಇಳಿದಿದ್ದರು ಶ್ರಾವ್ಯ ಕೂಡ ಕೆಳಗಿಳಿದಿದ್ದಳು ಹೊರಗೆ ಕತ್ತಲು ಹಾಗೂ ತುಂಬಾ ಚಳಿಯನ್ನು ಕಂಡು ಅಬ್ಬಾ ನಾನ್ ಸ್ವೆಟರ್ ಧರಿಸುವೆ ತುಂಬಾ ಚಳಿ ಇದೆ ಎಂದು ಬಸ್ ಒಳಗಡೆ ಹೋದಳು.
ನವ್ಯ ನನ್ನ ಬ್ಯಾಗ್ ನಲ್ಲಿ ಸ್ಟೋಲ್ ಇದೆ ಹಾಗೆ ನನ್ನದು ತೆಗೆದುಕೊಂಡು ಬಾ. ಶ್ರಾವ್ಯ ಧರಿಸಿ ಬಸ್ಸಿಂದ ಇಳಿದಳು. ಇತ್ತ ನಿತಿನ್ ಬಸ್ಸಿಂದ ಇಳಿಯುವಾಗ ಕಾಲಲ್ಲಿ ಬಿದ್ದಿದ್ದ ಸ್ಟೋಲ್ ನ್ನು ಎತ್ತಿ ಹೊರಗಡೆ ಹೆಲೋ ಗಯ್ಸ್ ಯಾರದ್ದು ಇದು ತಗೊಳ್ಳಿಪಾ.
ನವ್ಯ ಶ್ರಾವ್ಯ ಹಿಂತಿರುಗಿದ್ದರು ನವ್ಯ ಅಯ್ಯೋ ನಂದು ಅದು. ಊಪ್ಸ್ ಕ್ಷಮಿಸು ಕಣೆ ಸ್ವೆಟರ್ ಧರಿಸುತ್ತಾ ಬರುವಾಗ ಬಿದ್ದಿರಬೇಕು. ನಿತಿನ್ ಹತ್ತಿರ ಬಂದಳು. ನಿತಿನ್ ಅಷ್ಟು ಚಳಿ ಆಗ್ತಿದಿಯಾ ಸ್ವೆಟರ್ ಹಾಕಿದ್ದಿರಾ ಇದು ಹೊಚ್ಕೋಳ್ತಿರಾ?
ಶ್ರಾವ್ಯ ಅರ್ರೆ ಇದು ನಂದಲ್ಲ ಕಣ್ರಿ ನನ್ನ ಗೆಳತಿಯದ್ದು ನಿತಿನ್ ನಗುತ್ತಾ ಗೊತ್ತು ಸುಮ್ನೇ ತಮಾಷೆ ಮಾಡಿದೆ ಆವಾಗ್ಲೇ ಕೈ ಮಾಡಿದ್ರಲ ನಿಮ್ ಗೆಳತಿ ಅರ್ಧಗಂಟೆ ಬಿಟ್ಟು ಮತ್ತೆ ಎಲ್ಲಾ ಬಸ್ಸು ಹತ್ತಿದ್ದರು.ಎಲ್ಲಾ ನಿದ್ರೆಗೆ ಜಾರಿದರು ಅವರು ಹೋಗಿರುವ ತಾಣ ಬಂತು ಬೆಳಗಾಯಿತು ಒಂದು ವಸತಿಗೃಹದಲ್ಲಿ ಇಳಿದು ಫ್ರೇಶ್ ಆದರು ಮೋದಲಿಗೆ ಒಂದು ಗಾರ್ಡನ್ ಗೆ ಹೋದರು ಅಲ್ಲಿ ಒಂದು ಮೂರ್ತಿಯ ಮುಂದೆ ಇದ್ದ ಡೋಲನ್ನು ಕಂಡು ಶ್ರಾವ್ಯ ಶೋಗೋಸ್ಕರ ಇಟ್ಟಿದ್ದಾರಾ ಅಥವಾ ಬಾರಿಸಬಹುದಾ ಬಾರಿಸಿದರೆ ಶಬ್ದ ಬರುತ್ತಾ ನವ್ಯಳನ್ನು ಕೇಳುತಿದ್ದಳು ಹಿಂದೆ ಇದ್ದ ನಿತಿನ್ ಅದು ಶೋಗೋಸ್ಕರನೆ ಇಟ್ಟಿದ್ದು ಆದರೆ ನೀವು ಬಾರಿಸಿದರೆ ಶಬ್ದ ಬರುತ್ತೆ ರೀ ಹಿಂತಿರುಗಿ ನೋಡಿದ ಶ್ರಾವ್ಯ ಸುಮ್ಮನಾದಳು ಗಾರ್ಡನ್ ಸುತ್ತಿ ಕೆಲವರು ಪೋಟೋ ತೇಗೆದುಕೋಳ್ಳುವಲ್ಲಿ ನಿರತರಾಗಿದ್ದರು ನಿತಿನ್ ಗುಂಪು ಸುತ್ತು ಹಾಕುವದರಲ್ಲೆ ಇದ್ದರು ವಿಷ್ಣು ಜಾಗ ಚೇನ್ನಾಗಿದೆ ಇಲ್ಲೆ ಊಟ ಪಾರ್ಸಲ್ ತಂದರಾಯಿತು ತನ್ನ ಗೆಳೆಯರಿಗೆ ಕೇಳಿದ ಎಲ್ಲರೂ ಸರಿ ಅಂದ್ರು ನಿತಿನ್ ಕೇಲವರಿಗೆ ಏನಾದರೂ ತಿನ್ನಲು ಬೇಕಿದ್ರೆ ಹೇಳಬಹುದು ತೇಗೆದುಕೊಂಡು ಬರ್ತಿವಿ ಶ್ರಾವ್ಯಳತ್ತ ನೋಡಿದ ಏನು ಹೇಳಲಿಲ್ಲ ಬೇಡ ಅಂತ ಸನ್ನೆ ಮಾಡಿದಳು ಇನ್ನು ಮಧ್ಯಾಹ್ನ ಆಯಿತು ಇನ್ನೋಂದು ಜಾಗ ನೋಡಲು ಸಜ್ಜಾದರು ಮತ್ತೆ ಬಸ್ ಹತ್ತಿದರು ಈ ಭಾರಿ ನಿತಿನ್ ಬಸ್ ಹಿಂದಿನ ಭಾಗದಲ್ಲಿ ಕುಳಿತಿದ್ದ ಯಾಕೆಂದರೆ ಶ್ರಾವ್ಯ ಹಿಂದಿನ ಭಾಗದಲ್ಲಿ ಕುಳಿತಿದ್ದಳು ಎಡ ಪಕ್ಕ ಹುಡುಗಿಯರು ಮತ್ತು ಬಲಪಕ್ಕ ಹುಡುಗರು ಕುಳಿತಿದ್ದರು ನೀರು ನೆಪದಲ್ಲಿ ಸ್ನ್ಯಾಕ್ಸ್ ನೆಪದಲ್ಲಿ ನಿತಿನ್ ಶ್ರಾವ್ಯಳನ್ನು ಮಾತಾಡಿಸುತಿದ್ದ ಬಸ್ಸಿನಲ್ಲಿ ಮಾತು ಹರಟೆ ಜೋರಾಗಿ ನಡೆದಿತ್ತು ಮತ್ತೋಂದು ತಾಣ ಬಂದೆ ಬಿಟ್ಟಿತು ನೋಡಲು ಹೋದ ಜಾಗದಲ್ಲಿ ತುಂಬಾ ಕಲ್ಲುಗಳಿದ್ದವು ದೇವಸ್ಥಾನ ಮೇಲ್ಗಡೆ ಇತ್ತು ನಿಧಾನವಾಗಿ ಹತ್ತುತ್ತಿದ್ದರು ಶ್ರಾವ್ಯಳನ್ನು ತುಂಬಾ ಕಾಳಜಿ ವಹಿಸುತ್ತಿದ್ದ ನಿತಿನ್ ಗೆ ಅವನ ಸ್ನೇಹಿತರು ಹಿಯ್ಯಾಳಿಸುತಿದ್ದರು ಸುಮ್ನೆ ನೀನೆ ಎತ್ಕೊಂಡು ಹೋದರೆ ಚೆನ್ನಾಗಿರ್ತಿತಪ್ಪ ನಿತಿನ್ ಮುಗುಳ್ನಕ್ಕ ದೇವಸ್ಥಾನದ ಒಳಗೆ ಹೋದರು ಎಲ್ಲರು ನಮಸ್ಕಾರ ಮಾಡಿ ಕುಳಿತಿದ್ದರು ಇತ್ತ ನಿತಿನ್ ಶ್ರಾವ್ಯ ಇಬ್ಬರು ಮಾತಿನಲಿ ಮಗ್ನರಾಗಿದ್ದರು ಅತ್ತ ಲೋಹಿತ್ ಇನ್ನೂ ನೋಡುವುದಕ್ಕೆ ತುಂಬಾ ತಾಣಗಳಿವೆ ಅವೆಲ್ಲಾವನ್ನು ನೋಡುತ್ತಾ ಮಾತಾಡಬಹುದು ಅಂತ ಬೇಕಂತಲೆ ಜೋರಾಗಿ ಎಲ್ಲರಿಗೂ ಕೇಳುವ ಹಾಗೆ ಹೇಳಿದ ಶ್ರಾವ್ಯಳ ಪಕ್ಕ ಕೂತಿದ್ದ ನಿತಿನ್ ಎದ್ದು ತನ್ನ ಸ್ನೇಹಿತರ ಬಳಿ ಬಂದ ವಿಷ್ಣು ನಿತಿನ್ ನನ್ನು ನೋಡಿ ಸಂಕೇತಕಡೆ ಮುಖಮಾಡಿ ಯಾರೋ ನಿನ್ ಗೆಳೆಯನಿಂದ ತುಂಬಾ ಟೈಂಪಾಸ್ ಆಗುತ್ತೆ ಅಂತ ಹೇಳಿದಿಯಲಾ ನಿಜ ಕಣೊ ಆಗ್ತಿದೆ ನಮ್ಗಲ್ಲಾ ಬೇರೆಯವರಿಗೆ ಹುಡುಗಿಯರ ಗುಂಪಿನ ಒಂದ್ಸಲ ನೋಡಿ ನಿತಿನ್ ಗೆ ಹಿಯ್ಯಾಳಿಸಿದ ನಿತಿನ್ ಹಾಗೆನು ಇಲ್ಲ ಕಣ್ರೋ ಜಸ್ಟ್ ಮಾತಾಡಸ್ತಿದ್ದೆ ಅಷ್ಟೆ ! ಎಲ್ಲರೂ ಒಬ್ಬರಿಗೊಬ್ಬರ ಮುಖ ನೋಡ ತೋಡಗಿದರು.ದೇವಸ್ಥಾನದಿಂದ ಕೆಳಗಡೆ ಇಳಿಯುವಾಗ ಶ್ರಾವ್ಯಾಗೆ ಕಲ್ಲು ತಾಕಿತ್ತು ಚೂಜಕಿರುವ ಕಲ್ಲು ಅವಳ ಕಾಲಿಗೆ ನೆಟ್ಟಿತ್ತು ಕಿರುಚುತ್ತಾ ಕೂತಿದ್ದಳು ನವ್ಯ ಅವಳಿಗೆ ತನ್ನ ಸ್ಟೋಲ್ ನಿಂದ ಗಾಯ ಆಗಿರುವ ಜಾಗಕ್ಕೆ ಕಟ್ಟಿದಳು ಹುಡುಗರ ಗುಂಪು ಆಗಲೆ ಇಳಿದಾಗಿತ್ತು ಹಾಗೂ ಕೆಲವು ಹುಡುಗಿಯರು ಕೂಡ ಸೌಮ್ಯ ಅಷ್ಟೆ ಇವರೊಂದಿಗೆ ಇದ್ದಳು ಶ್ರಾವ್ಯಗೆ ನೀರು ಕೊಡಲು ಇಬ್ಬರು ಬಳಿ ನೀರು ಇರಲಿಲ್ಲ ನವ್ಯ ಸೌಮ್ಯಳಿಗೆ ಬೇಗ ಕೆಳಗೆ ಇಳಿದು ನೀರು ತರಲು ಹೇಳಿದಳು ಕೆಳಗಡೆ ಎಲ್ಲರು ಇವರಿಗೋಸ್ಕರ ಕಾಯುತ್ತಿದ್ದರು.ಸೌಮ್ಯ ಕೆಳಗಡೆ ಹೋಗಿ ಎಲ್ಲರಿಗೂ ವಿಷಯ ತಿಳಿಸಿದಳು ನೀರ್ ಬಾಟಲ್ ತೆಗೆದುಕೊಂಡು ಹೋಗುತ್ತಿದ್ದಳು ಅವಳನ್ನು ನಿಲ್ಲಿಸಿದ ವಿಷ್ಣು ನಾನು ನಿತಿನ್ ಹೋಗುತ್ತೇವೆ ಅವರನ್ನು ಕರೆದುಕೊಂಡು ಬರುತ್ತೇವೆ ಎಲ್ಲಾ ಇಲ್ಲೆ ಇರಿ ಅಂತ ಇಬ್ಬರು ಬಾಟಲ್ ತೆಗೆದುಕೊಂಡು ಹೋದರು.ಜಾಸ್ತಿ ಗಾಯಗೊಂಡ ಶ್ರಾವ್ಯ ತೀವ್ರ ರಕ್ತಸ್ರಾವದಿಂದ ಅಳುತ್ತಾ ಕುಳಿತಿದ್ದಳು ನವ್ಯ ಅವಳಿಗೆ ನೀರು ಕೂಡಿಸಿದಳು ನಿತಿನ್ ಅವಳ ಗಾಯಕಂಡು ಗಾಬರಿಯಾದ ವಿಷ್ಣು ಮತ್ತು ನಿತಿನ್ ಅವಳನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು ಬೇಗ ಆಸ್ಪತ್ರೆಗೆ ಹೋಗೊಣ ರಕ್ತಸ್ರಾವ ಜಾಸ್ತಿ ಆಗ್ತಿದೆ ನಿತಿನ್ ಸೌಮ್ಯಳಿಗೆ ಹೇಳಿದ ಎದ್ದೆಳಕ್ಕಾಗುತ್ತಾ ಇಲ್ಲ ನಾನು ಎತ್ಕೋಳ್ತಿನಿ ಕೇಳು ಶ್ರಾವ್ಯಗೆ ನವ್ಯ ಶ್ರಾವ್ಯಳನ್ನು ಕೇಳಿದಳು ಇಲ್ಲ ಬೇಡ ಆಗುತ್ತೆ ಅಂತ ನಿಲ್ಲಲು ಪ್ರಯತ್ನಿಸುತಿದ್ದಳು ಆದರೆ ಆಗುತ್ತಿರಲಿಲ್ಲ ಮತ್ತೆ ಪ್ರಯತ್ನಿಸಿದಳು ನವ್ಯಳನ್ನು ಹಿಡಿದುಕೊಂಡು ಎದ್ದಳು ನಾಲ್ಕು ಹೆಜ್ಜೆ ಇಡೋದಕ್ಕೂ ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದಳು ರಕ್ತಸ್ರಾವ ಕಡಿಮೆನೆ ಆಗಿರಲಿಲ್ಲ ಅದನ್ನು ಕಂಡು ನಿತಿನ್ ನಿಂಗೆ ನನ್ನಿಂದ ಅಭ್ಯಂತರ ಇದ್ದರೆ ವಿಷ್ಣು ಅಣ್ಣ ಎತ್ಕೋಳ್ಳತ್ತಾರೆ ಸರಿ ನಾ ಬೇಗ ಆಸ್ಪತ್ರೆಗೆ ಹೋಗುವಾ ಶ್ರಾವ್ಯ ಹಾಗೆನಿಲ್ಲ ನಿತಿನ್ ಎತ್ಕೋಳ್ಳುವುದಕ್ಕೆ ಸನ್ನೆ ಮಾಡಿದಳು.ಕೆಳಗಿಳಿದು ನಾಲ್ಕು ಸ್ನೇಹಿತರು ಸೇರಿ ಆಸ್ಪತ್ರೆಗೆ ಹೋದರು.
ಅಡ್ಮಿಟ್ ಮಾಡಿಕ್ಕೊಂಡ ಅವಳ ಕಾಲಿಗೆ ಬ್ಯಾಂಡೆಜ್ ಸುತ್ತಿದ್ದರು ಅವಳ ದೇಹದಲ್ಲಿ ರಕ್ತ ಕಡಿಮೆ ಆಗಿದ್ದರಿಂದ ರಕ್ತ ಏರಿಸುವದಕ್ಕಾಗಿ ಬೇರೆ ಆಸ್ಪತ್ರೆಗಳಿಗಳಲ್ಲಿ ಹುಡುಕಿದರು ಆದರೆ ಎಲ್ಲೂ ಸಿಗದಾಗಿತ್ತು ಕೋನೆಗೆ ನಿತಿನ್ ತನ್ನ ರಕ್ತ ತೆಗೆದು ಶ್ರಾವ್ಯಳಿಗೆ ಏರಿಸಲು ವೈದ್ಯರಿಗೆ ಹೇಳಿದ ನಿತಿನ್ ರಕ್ತದ ಸಹಾಯದಿಂದ ಅವಳು ಚೇತರಿಸಿಕೊಂಡಳು
"ಪ್ರವಾಸಕ್ಕೆ ಹೋದ ಇಬ್ಬರು ಅಪರಿಚಿತರು ನಿತಿನ್ ಮತ್ತು ಶ್ರಾವ್ಯ ಪ್ರೇಮಿಗಳಾದರು "
ಬುಕ್ ಸ್ಟಾಲ್ ಅಂಕಲ್ ಗೆ ಒಂದು ಬಡ ಹುಡುಗನ ಮೇಲಿರುವ ಒಂದು ಪ್ರೀತಿಯ ಕಥೆ
ಪವನ್ ಪ್ರೌಢ ಶಾಲೆಯ ವಿದ್ಯಾರ್ಥಿ ಬಡವ ಓದುವುದೆಂದರೆ ತುಂಬಾ ಇಷ್ಟ ತನ್ನ ಕಕ್ಷೆಯ ಪುಸ್ತಕಗಳ ಜೊತೆ ವಿಧವಿಧದ ಪುಸ್ತಕಗಳನ್ನು ತಂದು ಓದುವುದೆಂದರೆ ಅವನಿಗೆ ಇಷ್ಟ ಆ ಹವ್ಯಾಸ ಅವನಿಗೆ ಬಂದಿದ್ದು ಓದುವುದರಲ್ಲಿ ಮುಂದೆ ಇದ್ದ ಕೆಲವೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತನಾದಗ ಪ್ರಶಸ್ತಿ ಮುಖಾಂತರ ಬಂದಿದ್ದ ಪುಸ್ತಕಗಳನ್ನು ಓದಿ ಅಭ್ಯಾಸ ಆಗಿತ್ತು.
ಅವನ ಮನೆಯ ಹತ್ತಿರದಲ್ಲಿ ಒಂದು ಬುಕ್ ಸ್ಟಾಲ್ ಇತ್ತು ಮಾಲಿಕನ ಜೊತೆ ಪವನ್ ನ ಒಡನಾಟ ಚೆನ್ನಾಗಿತ್ತು ಒಂದು ದಿನ ಬುಕ್ ಸ್ಟಾಲ್ ಅಂಕಲ್ ಗೆ ಕೇಳಿಯೆ ಬಿಟ್ಟ ಅಂಕಲ್ ನಿಮ್ಮ ಬಳಿ ಎಲ್ಲಾ ತರಹದ ಪುಸ್ತಕಗಳಿವೆ ನಾನು ಒಂದು ಪುಸ್ತಕವನ್ನು ನಾಲ್ಕು ದಿನದ ಮಟ್ಟಿಗೆ ಕೋಡುವಿರಾ ಓದಿ ಮತ್ತೆ ತಂದು ಕೋಡುವೆ
ಬುಕ್ ಸ್ಟಾಲ್ ಅಂಕಲ್ ಗೆ ಪವನ್ ಬಗ್ಗೆ ಗೋತ್ತಿತ್ತು ಓದುವುದರಲ್ಲಿ ಜಾಣ ಸ್ವಲ್ಪ ದುಡ್ಡಿನ ಸಮಸ್ಯೆ ಇದೆ ಒಳ್ಳೆಯ ಹುಡುಗ ಅಂತ ಆಯ್ತು ಸರಿ ಕಣಪ್ಪಾ ನಿಂಗೆ ಯಾವ ಪುಸ್ತಕ ಬೇಕು ಕೇಳು ಕೋಡುವೆ
ಪವನ್ ಒಂದು ಬಾರಿ ಕ್ರಿಡೆಯ ಬಗ್ಗೆ ಮಹಾತ್ಮರ ಬಗ್ಗೆ ಸಾಮಾನ್ಯ ಜ್ಞಾನದ ಬಗ್ಗೆ ವಿಧವಿಧದ ಪುಸ್ತಕಗಳನ್ನು ತೆಗೆದುಕೊಂಡು ಮನೆಗೆ ಹೋಗಿ ಓದುತ್ತಿದ್ದ
ಒಂದು ಸಲ ಪುಸ್ತಕ ತರಲು ಹೋಗಿದ್ದ ಪವನ್ ಗೆ ಬುಕ್ ಸ್ಟಾಲ್ ಅಂಕಲ್ ಮಗಾ ಪುಸ್ತಕದ ಸ್ಕಿಮ್ ಬಂದಿದೆ ಸರ್ಕಾರ ಕಡೆಯಿಂದ ಒಂದು ಪ್ರಬಂಧ ಬರಿಬೇಕು ಮೋದಲು ಬಂದವರಿಗೆ ಹದಿನೈದು ದಿನಕ್ಕೊಂದು ಬೇರೆ ಪುಸ್ತಕ ಉಚಿತವಾಗಿ ಸಿಗುತ್ತದೆ.
ಹೌದಾ ಒಪ್ಪಿಕ್ಕೊಂಡ ಪವನ್ ಎಲ್ಲಿ ಬರಿಬೇಕು ಹೇಗೆ ಎಂದು ಕೇಳಿದ ಅದಕ್ಕೆ ಅಂಕಲ್ ಒಂದು ವಿಷಯ ಅವರೆ ಕೋಡುತ್ತಾರೆ ನಾನು ಹೇಳುವೆ ನನಗೆ ಬರೆದು ಕೋಡು ನಾನು ಕಳುಹಿಸುವೆ.
ಸರಿ ಅಂಕಲ್ ಅಂತ ಅಲ್ಲಿಂದ ಪವನ್ ತನ್ನ ಮನೆಗೆ ಹೋದ.ಮರುದಿನ ಅಂಕಲ್ ಪವನ್ ನನ್ನು ಕರೆಸಿ ಪ್ರಬಂಧದ ವಿಷಯ ಕೋಟ್ಟ ಬರೆಯಲು ಪವನ್ ಇಡಿ ರಾತ್ರಿ ಕೋಟ್ಟಿರುವ ವಿಷಯದ ಬಗ್ಗೆ ಬರೆದನು.ಮತ್ತೆ ಮರುದಿನ ಸಾಯಂಕಾಲ ಅಂಕಲ್ ಗೆ ತನ್ನ ಪ್ರಬಂಧ ಒಪ್ಪಿಸಿದ.
ಮೂರು ದಿನ ಕಳೆಯಿತು ಅಂಕಲ್ ಬಳಿ ಹೋಗಿ ಕೇಳಿದ ಫಲಿತಾಂಶ ಏನಾಯ್ತು ಅಂತ ಅಯ್ಯೋ ಮರ್ತೋದೆ ಕಣಪ್ಪಾ ಬೆಳಿಗ್ಗೆನೆ ಫಲಿತಾಂಶ ಬಂದಿದೆ ನಿನೆ ಮೋದಲು ಬಂದಿದಿಯಾ ಒಂದು ಪುಸ್ತಕವನ್ನು ಕಳುಹಿಸಿದ್ದಾರೆ ಎಂದು ಪುಸ್ತಕವನ್ನು ಪವನ್ ಗೆ ಕೋಟ್ಟ ಖುಷಿಯಿಂದ ಪವನ್ ಅಂಕಲ್ ಗೆ ಧನ್ಯವಾದ ತಿಳಿಸಿ ಮನೆಗೆ ಹೋದೆ.
ಹೀಗೆ ಒಂದು ವರ್ಷ ಕಳೆಯಿತು ಹದಿನೈದು ದಿನಕ್ಕೊಂದು ಬೇರೆ ಬೇರೆ ವಿಷಯದ ಪುಸ್ತಕ ಪವನ್ ಸಿಗತೋಡಗಿತು.ಆದರೆ ಒಂದು ದಿನ ಸಾಯಂಕಾಲ ಬುಕ್ ಸ್ಟಾಲ್ ಗೆ ಹೋದಾಗ ಅಂಕಲ್ ತಮ್ಮ ಸ್ವಂತ ಊರಿಗೆ ತೇರಳುತ್ತಿರುವುದರ ಬಗ್ಗೆ ಪವನ್ ಗೆ ತಿಳಿಸಿದರು ವ್ಯಾಪಾರಕ್ಕಾಗಿ ಬಂದಿದ್ದೆ ಈಗ ನಾನು ನಮ್ಮ ಊರಿಗೆ ಹೋಗಬೇಕಾಗಿ ಬಂದಿದೆ.
ಚಿಗುಪ್ಸೆಗೋಂಡ ಪವನ್ ಏನು ಹೇಳಲಿಲ್ಲ ಮುಖ ಕೆಳಗಡೆ ಹಾಕಿ ಮನೆಯತ್ತ ನಡೆದ ಇಪ್ಪತ್ತು ದಿನ ಮೇಲಾದರು ಹೊಸ ಪುಸ್ತಕ ಬರದ ಬೇಸರ ಮತ್ತು ಅಂಕಲ್ ಊರಿಗೆ ಹೋದ ಬೇಸರ ಅವನ ಜೀವನ ಜಿಗುಪ್ಸೆಯಿಂದ ಕೂಡಿತ್ತು
ಮರುದಿನ ಬೆಳಿಗ್ಗೆ ಶಾಲೆಗೆ ತಯಾರಾಗುತ್ತಿದ್ದ ಪೋಸ್ಟ್ ಮ್ಯಾನ್ ಪವನ್ ನ ಮನೆ ಬಳಿ ಬಂದು ಅವನಿಗೆ ಬಂದಿರುವ ಪಾರ್ಸಲ್ ಕೊಟ್ಟು ಹೋದನು ಒಂದು ಪತ್ರದ ಜೊತೆ ಪುಸ್ತಕ ಬಂದಿತ್ತು.
ಪತ್ರ ಬುಕ್ ಸ್ಟಾಲ್ ಅಂಕಲ್ ನದಾಗಿತ್ತು ಅದೆನಂದರೆ ನಿನ್ನ ಪುಸ್ತಕ ನನ್ನ ಬಳಿ ಕಳುಹಿಸಿದ್ದಾರೆ ಅದಕ್ಕೆ ನಾನು ಇವಾಗ ನಿನ್ನ ಮನೆಯ ವಿಳಾಸ ಕೊಟ್ಟಿರುವೆ ಮುಂದೆ ಪುಸ್ತಕಗಳು ನಿನ್ನ ವಿಳಾಸಕ್ಕೆ ಬರುವುದು ಚೆನ್ನಾಗಿ ಓದಿ ಒಂದು ಮಟ್ಟಕ್ಕೆ ತಲುಪಿದ ಮೇಲೆ ನನಗೊಂದು ಪತ್ರ ಕಳುಹಿಸು ನನಗೆ ಖುಷಿಯಾಗುತ್ತೆ ನನ್ನ ವಿಳಾಸ ಕಳಿಸಿರುವೆ.ಆನಂದದ ಕಣ್ಣೀರು ಪವನ್ ನ ಕಣ್ಣಲ್ಲಿ ಬರತೋಡಗಿದವು.
ಹೀಗೆ ಪುಸ್ತಕಗಳನ್ನು ಓದುತ್ತಾ ವರ್ಷಗಳು ಕಳೆದವು ಪ್ರೌಢ ಶಿಕ್ಷಣದಿಂದ ,ಕಾಲೇಜ್ ಕಾಲೇಜ್ ನಿಂದ ,ಪದವಿ ಪೂರ್ವ ಕಾಲೇಜ್ ಶಿಕ್ಷಣ ಮುಗಿಯಿತು
ಐ ಎ ಎಸ್ ಅಧಿಕಾರಿಯಾದ ಪವನ್ ಗೆ ಮೋದಲು ನೇನಪು ಬಂದಿದ್ದು ಬುಕ್ ಸ್ಟಾಲ್ ಅಂಕಲ್ ಅವರಿಗೊಂದು ಪತ್ರ ಬರೆದು ಕಳುಹಿಸಿದ ತನ್ನ ಕುರಿತು ಮತ್ತು ತಾನು ಐ ಎ ಎಸ್ ಅಧಿಕಾರಿಯಾಗಿರುವ ಬಗ್ಗೆ ಇದಕ್ಕೆಲ್ಲ ಕಾರಣ ನೀವು ಎಂದು ಸಂತೋಷವನ್ನು ಪಾತ್ರದಲ್ಲಿ ವ್ಯಕ್ತಪಡಿಸಿದ.
ಪೋಸ್ಟ ಮ್ಯಾನ್ ನಿಂದ ಅಂಕಲ್ ನ ಉತ್ತರ ಬಂದಿತ್ತು ಪೋಸ್ಟ್ ಮ್ಯಾನ್ ಪತ್ರ ಪವನ್ ಗೆ ಕೊಟ್ಟು ನಿಮಗೊಂದು ವಿಷಯ ಹೇಳಬೇಕಿತ್ತು ಸರ್ ಮೋದಲು ಕೆಲಸ ಮಾಡಿರುವ ನಮ್ ಸರ್ ರಿಟಾಯರ್ಡ ಆಗಿದ್ದಾರೆ ಅವರು ಹೇಳಿದ್ದರು ಸಮಯ ನೋಡಿ ಈ ವಿಷಯದ ಕುರಿತು ಆ ಹುಡುಗನಿಗೆ ಹೇಳು ಅಂತ ನೀವು ಓದುವಾಗ ಬರುತ್ತಿದ್ದ ಪುಸ್ತಕ ಸರ್ಕಾರದಿಂದ ಅಲ್ಲ ಬುಕ್ ಸ್ಟಾಲ್ ಅಂಕಲ್ ನಿಮಗೆ ಸಹಾಯ ಆಗಲಿ ಅಂತ ಅವರೆ ಕಳುಹಿಸುತ್ತಿದ್ದರು ಆ ವಿಷಯ ನಮ್ಮ ಸರ್ ಗೆ ಗೊತ್ತಾದಾಗ ಒಮ್ಮೆ ಬುಕ್ ಸ್ಟಾಲ್ ಅಂಕಲ್ ಜೊತೆ ಮಾತಾಡಿದ್ದರು.ಆದರೆ ಅಂಕಲ್ ಈ ವಿಷಯದ ಕುರಿತು ಏನೂ ಹೇಳಬೇಡ ಆ ಮಗಾಗೆ ಓದುವ ಇಚ್ಚೆ ತುಂಬಾ ಇದೆ ಅಂತ ಹೇಳಿದ್ರಂತೆ ಎಂದು ಹೇಳಿ ಅಲ್ಲಿಂದ ಪೋಸ್ಟ್ ಮ್ಯಾನ್ ಹೋದ.
ಪತ್ರದಲ್ಲಿ ಅಂಕಲ್ ನ ಉತ್ತರ ಹೀಗಿತ್ತು ನನ್ನ ಜನ್ಮ ಸಾರ್ಥಕ ಆಯಿತು ಒಳ್ಳೆಯದಾಗಲಿ ಮಗಾ
ಈ ವಿಷಯ ತಿಳಿದ ಪವನ್ ದೇಹದಲ್ಲಿನ ರೋಮಗಳು ನಿಂತಂತಾಯಿತು ಬೇಲೆ ಕಟ್ಟಲಾಗದ ಉಪಕಾರವಿದು ನಾನು ಅಂಕಲ್ ನನ್ನು ಭೇಟಿಯಾಗಿ ಕೃತಜ್ಞತೆ ತಿಳಿಸುವೆ ಎಂದು ಅಂಕಲ್ ಊರಿಗೆ ಹೋಗಲು ಸಿದ್ದನಾದ.
"ಪ್ರೀತಿ ಇದ್ದರು ಅದು ಅರ್ಥಪೂರ್ಣವಾಗಿರಬೇಕು "
"ಹೆಚ್ಚು ಪ್ರೀತಿನಾ ಹುಚ್ಚು ಪ್ರೀತಿಯನ್ನಾಗಿ ಮಾಡಬಾರದು"
