Gireesh pm Giree

Abstract

4.0  

Gireesh pm Giree

Abstract

ಪ್ರೀತಿ

ಪ್ರೀತಿ

2 mins
188


ಮುಂಜಾನೆಯ ಹೊಂಬಿಸಿಲಿಗೆ ಬದಿಯಲ್ಲಿನ ತೆಂಗಿನಮರಗಳು ಮೈಯೊಡ್ಡಿ ನಿಂತಿದ್ದವು. ತಂಗಾಳಿಯು ಮಲ್ಲಗೆ ಬೀಸುತ್ತಿತ್ತು. ಅದೊಂದು ಸಮುದ್ರತೀರ. ಮಕ್ಕಳ ಕಿಲಕಿಲ ನಾದವು ಮನತುಂಬಿತ್ತು. ಮನೆಯ ಯಜಮಾನ ಓರ್ವ ಬೆಸ್ತನಾಗಿದ್ದನು. ಅವನು, ಅವನ ಹೆಂಡತಿ ಹಾಗೂ ಮೂವರು ಮಕ್ಕಳು ಸಂತೋಷದಿಂದ ಆ ಮನೆಯಲ್ಲಿ ವಾಸಿಸುತ್ತಿದ್ದರು. ಮಕ್ಕಳಲ್ಲಿ ಹಿರಿಯವನು ಆದೇಶ ಎರಡನೆಯವನು ಸಂಬಂಧ ಹಾಗೂ ಮೂರನೆಯವಳು ಮುಂಜಲ


ಭಾನುವಾರದ ದಿನ ಆಗಸವು ಮೋಡಗಳಿಲ್ಲದ ಶುಭ್ರವಾಗಿತ್ತು. ಗುಂಪು ಗುಂಪಾಗಿ ಹಕ್ಕಿಗಳು ಹಾರುತ್ತಿದ್ದುವು. ಸಮುದ್ರದ ತೀರದಲ್ಲಿ ಮನೆಯಿದ್ದ ಕಾರಣ ಬೆಳ್ಳನೆಯ ಮರಳಿನಲ್ಲಿ ಆಟವಾಡುವ ಸೌಭಾಗ್ಯವನ್ನು ಮಕ್ಕಳು ಪಡೆದಿದ್ದರು. ಮಕ್ಕಳು ಆಟವಾಡುತ್ತಿದ್ದಂತೆಯೇ, ಎತ್ತರೆತ್ತರದ ಭೀಮಕಾಯದ ಅಲೆಗಳೆದ್ದು ದಡಕ್ಕೆ ಬಂದಪ್ಪಳಿಸಿದುವು. ತಕ್ಷಣ ಶುಭ್ರವಾಗಿದ್ದ ಆಕಾಶವು ಕಪ್ಪು ಮೋಡಗಳಿಂದ ತುಂಬಿಹೋಯಿತು. ಪ್ರಶಾಂತವಾಗಿದ್ದ ವಾತಾವರಣವು ರೌದ್ರರೂಪವನ್ನು ತಾಳಿತು. ಗಾಳಿಯು ರೊಯ್ಯನೆ ಬೀಸಿತು. ಅಲೆಗಳು ಹುಚ್ಚೆದ್ದು ಕುಣಿದುವು: ತಾಂಡವ ನೃತ್ಯವನ್ನಾಡಿದವು. ಬೆಸ್ತನು ಅದಾಗಲೇ ಮೀನು ಹಿಡಿಯಲು ಹೋಗಿದ್ದನು. ದೂರದಲ್ಲಿ ಹುಚ್ಚೆದ್ದು ಕುಣಿಯುವ ಅಲೆಗಳ ಮಧ್ಯದಲ್ಲಿ ಅವನ ದೋಣಿ ಮುಳುಗಿ ಹೋಯಿತು.


ಪೆಡಂಭೂತದಂತಿರುವ ಆಲೆಯು ಅವರ ಮೇಲೆ ಬಿದ್ದು ಅವರು ನಾಲ್ವರನ್ನೂ ಎಳೆಯಿತು. ಈಜಲು ಬರುತ್ತಿದ್ದುದು ಆದೇಶ ಮಾತ್ರ, ಅವನಿಗಾದರೋ ಹತ್ತು ವರುಷವಾಗಿತ್ತು. ಸಂಬಂಧಗೆ ಏಳು ವರ್ಷ, ಸಂಜನಾಗೆ ಐದು ವರ್ಷವಾಗಿತ್ತಷ್ಟೆ. ಮಂಜುಳಾ ಹಾಗೂ ಆಮ್ಮ ಕಾಣುತ್ತಿರಲಿಲ್ಲ. ಈಜುತ್ತಾ ಹೇಗೋ ಪ್ರಯಾಸಪಟ್ಟು ದಡ ತಲುಪಿದನು. ಕಣ್ಣುಕತ್ತಲೆ ಬಂತು. ಮಂಜು ಮಂಜಾಯಿತು. ಪ್ರಜ್ಞೆ ತಪ್ಪಿ ಬಿದ್ದನು.

ಯಾರೂ ಮುಟ್ಟಿದ ಹಾಗಾಗಿ ಸಂದೇಶ್‌ಗೆ ಒಮ್ಮೆಲೇ ಎಚ್ಚರವಾಯಿತು, ಪ್ರಯಾಸಪಟ್ಟು ಕಣ್ಣು ತೆರೆದಾಗ ಎದುರು ಇದ್ದದ್ದು ವೈದ್ಯರು. ದಡದಲ್ಲಿ ಬಿದ್ದಮೇಲೆ ನಂತರ ಏನಾಯಿತೆಂದು ಅವನಿಗೆ ಗೊತ್ತೇ ಇರಲಿಲ್ಲ. ಆದರೂ ಅವನಿಗೆ ಎಚ್ಚರವಾದಾಗ ಹದಿನೈದು ದಿನ ಕಳೆದಿತ್ತು, ಎಂದು ಕ್ಯಾಲೆಂಡರ್ ನೋಡಿ ತಿಳಿದನು. ಸಂಜನಾಳ ಬಗ್ಗೆ ಕೇಳಿದಾಗ ಅವಳನ್ನು ಯಾರೋ ದತ್ತು ತೆಗೆದುಕೊಂಡಿದ್ದಾರೆ ಎಂದಷ್ಟೇ ಹೇಳಿದರು. ಕೆಲವು ದಿವಸ ಕಳೆದಮೇಲೆ ಸಂದೇಶ್‌ನ್ನು ಯಾರೋ ಮಕ್ಕಳಿಲ್ಲದ ಶ್ರೀಮಂತ ದಂಪತಿಗಳು ದತ್ತು ಪಡೆದು ತಮ್ಮ ಮನೆಗೆ ಅವನನ್ನು ಕರೆದೊಯ್ದರು. ಅವನನ್ನು ಒಂದು ಉತ್ತಮ ಶಾಲೆಗೆ ಹಾಕಿ ಕಲಿಸಿ ಮುಂದೆ ಓರ್ವ ವೈದ್ಯನನ್ನಾಗಿ ಮಾಡಿದರು,


ಒಂದು ದಿನ ಅವನಿಗೆ


ಚಿಕ್ಕವನಾಗಿದ್ದಾಗ ವಾಸವಾಗಿದ್ದ ಜಾಗಕ್ಕೆ ಹೋಗಬೇಕೆಂಬ ಮನಸ್ಸಾಯಿತು. ಅಲ್ಲಿಗೆ ಹೋದಾಗ ಮನೆಯು ಮುರಿದು ಬಿದ್ದಿತ್ತು. ಓರ್ವ ಹುಡುಗಿ ಅಲ್ಲಿ ಕುಳಿತು ಹುಡುಕುತ್ತಿದ್ದವಳಿಗೆ ಏನೋ ದೊರಕಿತು. ಅದು ಒಂದು ಗ್ರೂಪ್ ಫೋಟೋ. ಆ ಹುಡುಗಿಯ ಕೈಗೆ ಅದು ಸಿಕ್ಕಿದ ಕೂಡಲೇ ಅವಳ ಕಣ್ಣುಗಳು ಹೊಳೆದುವು. ತಾನೂ ಅದರಲ್ಲಿ ಇದ್ದೇನೆ ಎಂಬಂತೆ ಹುಡುಕಿದಳು. ಅವಳು ಕೊನೆಗೆ ಸಂಜನಾಳ ಭಾವಚಿತ್ರದ ಮೇಲೆ ಕೈಯಿಟ್ಟು ಸಿಕ್ಕಿತು' ಎಂದಳು. ನಂತರ ಆದೇಶ್ಶ್ ನ ಭಾವಚಿತ್ರವನ್ನು ನೋಡಿ 'ಅಣ್ಣಾ' ಎಂದು ಕರೆದಳು. ದೂರದಲ್ಲಿ ನಿಂತು ಇದನ್ನೆಲ್ಲಾ ನೋಡುತ್ತಿದ್ದ ಸಂದೇಶ್ ಕೂಡಲೇ ಓಡಿಬಂದು 'ಮಂಜುಳಾನನ್ನ ತಂಗಿ!' ಎಂದನು. ಕೂಡಲೇ ಆಕೆ ಅವನನ್ನು ಗುರುತಿಸಿದಳು. ಇಬ್ಬರೂ ಕಣ್ಣೀರು ಸುರಿಸಿದರು. ಆದೇಶ್ ಆಕೆಯನ್ನು ತನ್ನ ಮನೆಗೆ ಕರೆದೊಯ್ದನು. ಕೆಲವು ತಿಂಗಳುಗಳ ನಂತರ ಅದೇ ಜಾಗದಲ್ಲಿ ಸಂದೇಶ್ ತನ್ನ ಹಿರಿಯರಿಗಾಗಿ ಸ್ಮಾರಕವನ್ನು ಕಟ್ಟಿಸಿದನು. ತನ್ನವರೆಂಬವರು ಯಾರೂ ಇಲ್ಲವೆಂಬ ಅದೇಶ್‌ನ ದುಃಖಕ್ಕೆ ತಂಗಿ ಮಂಜುಳಾ ಕೊನೆಗೆರೆಯೆಳೆದಳು.


79


Rate this content
Log in

Similar kannada story from Abstract