STORYMIRROR

Vijaya Bharathi.A.S.

Abstract Children Stories Others

4  

Vijaya Bharathi.A.S.

Abstract Children Stories Others

ಒಟ್ಟಿಗೆ ಸಾಗೋಣ.

ಒಟ್ಟಿಗೆ ಸಾಗೋಣ.

1 min
352

ಅಕ್ಕ ಪಕ್ಕದ ಮನೆಯವರಾಗಿದ್ದ ಸೋನು ಮತ್ತು ಮೋನು ಇಬ್ಬರೂ ಯಾವಾಗಲೂ ಜೊತೆಯಲ್ಲೇ ಆಡುತ್ತಿರುತ್ತಿದ್ದರು.ಸೋನು ಹೆಣ್ಣು ಮಗುವಾಗಿದ್ದರೂ, ಚಿಕ್ಕಂದಿನಿಂದಲೂ ಸೋನುವಿನ ಜೊತೆಗೆ ಆಟವಾಡಿಕೊಳ್ಳುತ್ತಿದ್ದಳು. ಇಬ್ಬರೂ ಒಟ್ಟಿಗೆ ಸ್ಕೂಲಿಗೆ ಹೋಗುತ್ತಿದ್ದರು.


ಯಾವುದಾದರೊಂದು ಕಾರಣ ತೆಗೆದು ಇದ್ದಕ್ಕಿದ್ದಂತೆ ಇಬ್ಬರೂ ಸಣ್ಣ ಪುಟ್ಟದ್ದಕ್ಕೆ ಜಗಳವಾಡುತ್ತಲೇ ಇದ್ದು, ಇಬ್ಬರೂ ಟೂ ಟೂ ಎನ್ನುತ್ತಾ ಸಿಂಗ್ ಬಿಟ್ಟು ದೂರವಾಗುತ್ತಿದ್ದರು. ಇವರಿಬ್ಬರ ಜಗಳ ಬಿಡಿಸುವ ವೇಳೆಗೆ ಅವರ ಅಮ್ಮಂದಿರಿಗೆ ಸಾಕು ಸಾಕಾಗುತ್ತಿತ್ತು.

 

ಒಂದು ದಿನ ಹೀಗೆ ಇಬ್ಬರೂ ಜಗಳವಾಡಿ ಕೊಂಡು ಸ್ಕೂಲ್ ಹೊರಗೆ ಬರುವ ವೇಳೆಗೆ ಸೋನುಗೆ ತುಂಬಾ ಸಿಟ್ಟು ಬಂದು ಮುಂದೆ ಮುಂದೆ ಹೋಗುತ್ತಿದ್ದಾಗ ಎದುರಿಗೆ ಬರುತ್ತಿದ್ದ ಆಟೋಗೆ ಸಿಕ್ಕಿ ಹಾಕಿಕೊಂಡು ಬಿದ್ದು ಬಿಟ್ಟಾಗ ಅವಳನ್ನು ಮೋನು ಎಬ್ಬಿಸಿ ದ. ಸ್ವಲ್ಪ ಕೈ ಚರಚಿ ಗಾಯವಾಗಿತ್ತು.  ಅಂದು ಇಬ್ಬರೂ ಮನೆಗೆ ಬಂದಾಗ, ಸೋನುವಿನ ಅಮ್ಮ ಗಾಬರಿಯಿಂದ ಏನಾಯಿತೆಂದು ಮೋನುವನ್ನು ಕೇಳಿದಾಗ, ಮೋನು ನಡೆದ ವಿಷಯವನ್ನು ತಿಳಿಸಿದ. ಕಡೆಗೆ ಇವರಿಬ್ಬರ ಅಮ್ಮಂದಿರೂ ಇಬ್ಬರಿಗೂ ಬುದ್ಧಿ ಹೇಳಿ, ಇನ್ನು ಮುಂದೆ ನೀವಿಬ್ಬರೂ ಜಗಳವಾಡದೆ, ಸ್ಕೂಲ್ ನಿಂದ ಬರುವಾಗ ಇಬ್ಬರೂ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ರಸ್ತೆ ದಾಟಬೇಕು ಎಂದು ಹೇಳಿದರು.


ಮುಂದೆ ಸೋನು ಮತ್ತು ಮೋನು ತಮ್ಮ ಅಮ್ಮಂದಿರು ಹೇಳಿದಂತೆ, ಒಬ್ಬರ ಕೈಯ್ಯನ್ನು ಮತ್ತೊಬ್ಬರು ಹಿಡಿದುಕೊಂಡು ರಸ್ತೆ ದಾಟಿ, ಮನೆಗೆ ಬರುತ್ತಿದ್ದ ರು. 


ಹೀಗೆ ಚಿಕ್ಕವಯಸ್ಸಿನಲ್ಲಿ ಹಿಡಿದುಕೊಂಡ ಸೋನುವಿನ ಕೈಯ್ಯನ್ನು ದೊಡ್ಡವನಾದ ಮೇಲೂ ಹಿಡಿದುಕೊಂಡೇ ಒಟ್ಟಿಗೆ ಸಾಗಿದ.



Rate this content
Log in

Similar kannada story from Abstract