Sulochana C.M.

Abstract Action Inspirational

2.8  

Sulochana C.M.

Abstract Action Inspirational

ನಿರಾಸೆ.

ನಿರಾಸೆ.

1 min
21


ನೋವು ನಿರಾಸೆಗಳಿರದ ಜೀವ ಜೀವನವುಂಟೇ?.ತಂದೆ ಶುದ್ಧೋದನ ಮಗ ಸಿದ್ದಾರ್ಥನನ್ನು ನೋವಿಂದಾಚೆ ನಿರಾಸೆಯ ಗಾಳಿ ಸೋಂಕದಂತೆ ರಕ್ಷಿಸಿಟ್ಟಿದ್ದ.ಆದರೆ ನೋವು ನಲಿವು,ಆಸೆನಿರಾಸೆಗಳ ತೊಗುಯ್ಯಾಲೆಯೇ ಈ ಬದುಕು ಎಂಬುದಕ್ಕೆ ಸಾಕ್ಷೀಭೂತವಾಗಿ ಘಟನೆಗಳು ಜರುಗಿ ಬಿಟ್ಟವು.ಸಿದ್ದಾರ್ಥ ಬುದ್ದನೆನಿಸಿಬಿಟ್ಟ..

ಗೆಲುವನ್ನು ಯಾರು ಬೇಕಾದರೂ ಅರಗಿಸಿ ,ಆದರಿಸಿ ಸ್ವೀಕರಿಸುವರು.ಆದರೆ ನೋವು,ನಿರಾಸೆಗಳನ್ನು ಆದರಿಸಿ ಸ್ವೀಕರಿಸಿದವರುಂಟೇ! ?. ನಿರಾಸೆಯನ್ನು ಬಯಸುವ ಜನರೆಲ್ಲಿಹರು?!.ನಿರಾಸೆಯನ್ನು ಸ್ವಾಗತಿಸುವವರಿಲ್ಲ ಆದರೂ ಅದು ಬಿಡದೇ ಬರುವುದು.ನಮ್ಮ ಮನಸ್ಥಿತಿಯರಿತು ಅಲ್ಲಿ ತಾತ್ಕಾಲಿಕವೋ ಶಾಶ್ವತವೋ ಆಗಿ ಉಳಿಯಬಯಸುವುದು.

ನಿರಾಸೆಗೆ ನಿಶ್ಚಿತ ಕಾರಣವಿಲ್ಲಾ.ವ್ಯಕ್ತಿಯ ಮನೋಭಾವದಂತೆ ನಿರಾಸೆಯ ಸ್ವರೊಪವಿರುವುದು.ಎಲ್ಲಿ ವಿರಾಶಾವಾದಿ ಮುಗ್ಗರಿಸುವನೇ ಅಲ್ಲಿ ಆಶಾವಾದಿಯ ಗೆಲುವಿದೆ.

ಇದೊಂದು ಹತ್ತುವರ್ಷ ಹಿಂದಿನ ಮಾತು. ನಮ್ಮಪರಿಚಿತರೊಬ್ಬರು ಒಂದು ಜಮೀನನ್ನು ಕೊಂಡರು. ಅದೂ ಸಾಲಮಾಡಿ ಆ ಜಮೀನಿನ ಒಡೆಯರಾದರು.ನೋಡಿದವರೆಲ್ಲಾ ನಗುವವರೆ. ಕಾರಣ ಆಗ ಆ ಸ್ಥಳದಲ್ಲಿ ಭೂಮಿಯನ್ನು ಕೇಳುವವರೇ ಇರಲಿಲ್ಲಾ. ಮುಖ್ಯವಾಗಿ ಅಲ್ಲಿ ನೀರಿನ ಸೆಲೆಯೇ ಇರಲಿಲ್ಲಾ. ಅದೂ ನೀಲಗಿರಿ ಮರಗಳಿದ್ದ ಭೂಮಿ. ಅದನ್ನು ಸಾಗುವಳಿ ಮಾಡಲು ಸಾಧ್ಯವಾಗುತ್ತಿರಲಿಲ್ಲಾ. ಹೀಗಿರುವಾಗ ಅಲ್ಲಿಜಮೀನು ಕೊಂಡ ವ್ಯಕ್ತಿಯನ್ನು ಎಲ್ಲರೂ ಅಪಹಾಸ್ಯ ಮಾಡಿದರು.ಈಗ ಅದೇ ಭೂಮಿಯನ್ನು ಕಾಗದದ ಫ್ಯಾಕ್ಟರಿಯವರು ಉಚಿತವಾಗಿ ಮರಕಡಿದು ಭೂಮಿ ಹದಮಾಡಿಕೊಟ್ಟು , ಮರವನ್ನು ಮಾತ್ರ ತೆಗೆದುಕೊಂಡುಹೋದರು. ಈಗ ಭೂ ಮಾಲೀಕರು ಮಳೆ ಆಶ್ರಿತ ಬೆಳೆಯಿಂದ ಅದ್ಧೂರಿ ಬೆಳೆತೆಗೆದರು. ಮುಖ್ಯ ರಸ್ತೆ ಪಕ್ಕದಲ್ಲಿದ್ದ ಕಾರಣ ಭೂಪರಿವರ್ತಕರು ಭಾರೀ ಬೆಲೆಗೆ ಭೂಮಿಯನ್ನು ಕೊಂಡ ರು.ಆದಕಾರಣ ಆತನಿಂದು ಕೋಟ್ಯಾಧೀಶನಾಗಿರುವನು. ಆದ್ದರಿಂದ ನಿರಾಶೆಯು ಮಾನವನಬುದ್ದಿ ಮತ್ತೆಯಂತೆ ಪರಿವರ್ತನೀಯ. ಒಬ್ಬರ ನಿರಾಶೆ, ಇನ್ನೊಬ್ಬರ ಅವಕಾಶವಾಗಿ ಕಂಡು ,ಆಶೆಯ ಚಿಲುಮೆಯೇ ಆಗಬಹುದು. ಈಮಾತು ಕನ್ಯಾಪರೀಕ್ಷಾ ಕಾಲದಲ್ಲಿ ಸಾಮಾನ್ಯ ಅವುಭವಕ್ಕೆ ಬರುವಂಥಾದ್ದು. ಅದೆಷ್ಟೋ ಜನರು ಕೆಲ ವಧು ವರ ರನ್ನು ತಿರಸ್ಕರಿಸಿರುತ್ತಾರೆ. ಆದರೆ ಎಲ್ಲರಿಗೂ ಕುರೂಪಿಯಂತೆ ಕಾಣುವ ವ್ಯಕ್ತಿ ದೈವಯೋಗವಿದ್ದವರ ಕಣ್ಣಿಗೆ ರತಿ/ಮನ್ಮಥ ರಂತೆ ಕಾಣುವರಂತೆ. ಹಾಗಾಗಿ ಎಷ್ಟೋ ವರ ಸಾಮ್ಯದಲ್ಲಿ ಗಂಡ ಸುಂದರನಿದ್ದರೆ ಹಂಡತಿ ಕುರೂಪಿಯಾಗಿರುತ್ತಾಳೆ. ಅಷ್ಟಾವಕ್ರನೆಂಬ ಮಾವುತನಿಗೆ ಸಾಕ್ಷಾತ್ ರಾಣಿ ಒಲಿಯುವಳಂತೆ. ಹಾಗಾಗಿ ನೋಡುವವರ ದೃಷ್ಟಿಯಂತೆ ಸೃಷ್ಟಿಯೇ  ಆಸೆ-ನಿರಾಸೆಯ ಕಾರಣವಾದೀತು.ಸಿಎಂಸು.


Rate this content
Log in

Similar kannada story from Abstract