ಪ್ರಯತ್ನ.
ಪ್ರಯತ್ನ.
ಗ್ರಾಮ್ಯ ಬದುಕೆಂದರೆ ಮೊದಲು ಕೃಷಿಪ್ರಧಾನ ವ್ಯವಸ್ಥೆಯಾಗಿತ್ತು.ಗ್ರಾಮಗಳಲ್ಲಿ ಹಣದ ಬದಲಿಗೆ ವಸ್ತು ವಿನಿಮಯ ವ್ಯವಸ್ಥೆ ಇರುತ್ತಿತ್ತು.ಕುಲ ಹದಿನೆಂಟು ಜಾತಿಯ ಜನ ವಾಸವಿರುತ್ತಿದ್ದರು.ಕುಂಬಾರ,ಕಮ್ಮಾರ,ನೇಕಾರ,ಮಡಿವಾಳ,ಚಿಪ್ಪಿಗ,ಚಿನಿವಾರ,ಕಂಚುಗಾರ,ಬಳೆಗಾರ,ತರಗಾರ,ಶೆಟ್ಟಿ,ಗಾಣಿಗ,ಬಡಗಿ,ಹೀಗೆ ತರಹೇವಾರಿ ಕಸುಬುಗಳು ನಡೆದಿರುತ್ತಿದ್ದವು ಪ್ರತೀ ಗ್ರಾಮವೂ ಸ್ವಯಂಪೂರ್ಣವಾಗಿರುತ್ತಿತ್ತು..ಯಾವ ಯಾವ ಕಸುಬಿನ ಜನರಿದ್ದರೋ ಅವರ ಮಕ್ಕಳಿಗೂ ಆಯಾ ಕಸುಬು ಕುಲ ಕಸುಬಾಗಿ ಒಲಿದು ಬರುವುದು ಸಹಜವಾಗಿತ್ತು.ಮಕ್ಕಳು,ನೋಡುತ್ತಾ,ಆಡುತ್ತಾ ಮಾಡುತ್ತಾ ಕಸುಬುದಾರರಾಗಿಬಿಡುತ್ತಿದ್ದರು. ಅದು ಅಂದಿನ ದಿನಮಾನದಲ್ಲಿನ ಪಾರಂಪರಿಕ ಪ್ರಯತ್ನಶೀಲತೆ ಬದುಕನ್ನು ಕಟ್ಟಿಕೊಡುತ್ತಿದ್ದ ರೀತಿ.
ಆದರಿಂದು ಯಾವ ಗ್ರಾಮಗಳೂ ಸ್ವಯಂಪೂರ್ಣವಾಗಿಲ್ಲಾ. ಕಾರಣ ಕುಲಕಸುಬುಗಳೇ ಮಾಯವಾಗಿಬಿಟ್ಟಿವೆಯಲ್ಲಾ.ಎಲ್ಲ ವಸ್ತುಗಳೂ ಚೈನಾ, ಜಪಾನ್ಮ ತ್ತಿತರ ದೇಶಗಳಿಂದ ಅಗ್ಗ ಸು ಗ್ಗಿಯಾಗಿ ಸಿಗುತ್ತಿರುವಾಗ ನಮ್ಮ ಕೈಮಗ್ಗಗಳಾಗಲೀ ಕುಸುರಿ ಕಲೆಗಾರಿಕೆಯ ಕೆಲಸಗಳಿಗಾಗಲಿ ಬೆಲೆ ಎಲ್ಲಿದೆ.?.ಹಾಗಾಗಿ ಕುಲ ಕಸುಬುಗಳು ನೆಲೆ ಕಳೆದುಕೊಂಡವಾಗಿ ಗ್ರಾಮಸ್ಥರು ನಗರಗಳತ್ತ ವಲಸೆ ಹೋದರು.ಅಲ್ಲಿ ಹೊಸ ಹೊಸಬಗೆಯ ಜೀವನ ಕ್ರಮಕ್ಕೆ ಒಗ್ಗಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಬಿಟ್ಟರು. ಸಾಧಿಸಿದರೆ ಸಬಳವನ್ನಾದರೂ ನುಂಗಬಹುದಂತೆ . ಅಂದಬಳಿಕ ಪ್ರಯತ್ನಕ್ಕೆ ದಕ್ಕದ ವಿದ್ಯೆಯಾಗಲೀ ಉದ್ಯೋಗವಾಗಲೀ ಎಲ್ಲಿದೆ.ಹಾಗೀಗಿಯೇ ಜನರಿಂದು ತಮ್ಮ ಕುಲ ನೆಲೆಗಳನ್ನು ಮರೆತು ಯಾವ ಉದ್ಯೋ ಗ,ಉತ್ಪನ್ನ ಲಾಭದಾಯಕವೋ ಅಂಥಾ ಕ್ಷೇತ್ರದಲ್ಲಿ ಪ್ರಯತ್ನಿಸಿ ಬದುಕನ್ನು ರೂಢಿಸಿಕೊಳ್ಳುತ್ತಿರುವರು.ಪ್ರಯತ್ನಕ್ಕೆಫಲ ನಿಶ್ಚಿತ ಎಂಬುದಕ್ಕೆ ಮೊಬೈಲ್ ಬಳಕೆಯೇ ಸಾಕ್ಷಿ.ಸುಮಾರಾಗಿ ಇಸವಿ 2000ದ ಹೊತ್ತಿಗೆ ಮೊಬೈಲುಗಳು ಭಾರತದಾದ್ಯಂತ ಅಗ್ಗವಾಗಿ ದೊರೆಯತೊಡಗಿದವು.ಬಳಕೆಯನ್ನು ಪ್ರಚೋದಿಸುವ ವಾತಾವರಣವೂ ನಡೆಯಿತು.ತಂತ್ರಜ್ಞಾನ ಬೆಳೆದಂತೆ ಇಂದು ಪ್ರತಿಯೊಬ್ಬರೂ ಮೊಬೈಲ್ ಬಳಕೆಯ ಪರಿಣಿತಿ ಹೊಂದಿರುವರು.ಕಾರಣ ಅದರ ಬಳಕೆಯ ಬಗ್ಗೆ ನಡೆದಿರುವ ಪ್ರಯತ್ನ.ಬೀದಿ ಬದಿಯ ವ್ಯಾಪಾರಿಗಳೂ ಫೋನ್ಪೇ,ಗೂಗಲ್ ಪೇ ವ್ಯವಸ್ಥೆಯನ್ನು ಸೊಗಸಾಗಿ ಬಳಸುವರೆಂದರೆ ಇದು ಪ್ರಯತ್ನಶೀಲತೆಯ ಪ್ರತಿಫಲವೇ ಅಲ್ಲವೇ.?.
ರಾಧಾ ತನ್ನ ಡಾಕ್ಟರು ಮಗನಿಗೆ ಕನ್ಯೆ ನೋಡುವ ಪ್ರಯತ್ನವನ್ನೇ ಮಾಡಲಿಲ್ಲಾ. ಕಾರಣ, ತಮ್ಮ ಮೊಮ್ಜಗಳು. ಆಕೆಯೂ ವೈದ್ಯಳೇ ಆಗಿದ್ದ ಕಾರಣ , ಕಣ್ಣುಮುಚ್ಚಿಕೊಂಡು ಮಗನಿಗೆ ಧಾರೆ ಎರೆದುಕೊಂಡರು. ನಂತರ ರಾಧಾಮ್ಮವಿಗೆ ಫಜೀತಿ ಶುರುವಾಯಿತು. ಸೊಸೆಯಾಗಿ ಬಂದ ಮೊಮ್ಮಗಳು ಓದಿನಲ್ಲಿ ಜಾಣೆಯೇ ಹೊರತು, ಮನೆಗೆಲಸದಲ್ಲಲ್ವಾ ಎಂದು ಜ್ಞಾನೋದಯವಾಯ್ತು. ಆದರೆ ರಾಧಮ್ಮ ತಮ್ಮಪ್ರಯತ್ನವನ್ನು ಬಿಡಲಿಲ್ಲಾ. ಮೊಮ್ಮಗಳೆಂದು ಮುದ್ಜು ಮಾಡದೇ ಅವಳು ಕೆಲಸ ಕಲಿಯುವಂತೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಿದರು. ಮುಖ್ಯವಾಗಿ ಹುಡುಗಿಗೆ ರೊಟ್ಟಿ ಮಾಡಲು ಬರುತ್ತಿರಲಿಲ್ಲಾ.ಒಂದು ದಿನಸರಿಯಾಗಿ ಕ್ಲಾಸ್ ತೆಗೆದುಕೊಂಡುಬಿಟ್ಟರು. ಹುಡುಗಿ ಅಳುತ್ತಾ ಕೂತರೂ ಬಿಡಲಿಲ್ಲಾ.ಆಕೆಗೆ ಒಂದು ಮುಷ್ಟಿ ಹಿಟ್ಟು ಕೊಟ್ಟು ರೊಟ್ಟಿ ಮಾಡುವುದನ್ನಿಂದು ಕಲಿಯಲೇ ಬೇಕೆಮಂದು ತಾಕೀತು ಮಾಡಿ ಕುಳ್ಳಿರಿಸಿಬಿಟ್ಟರು. ಅಜ್ಜಿಯ ಕಾಟ ತಾಳಲಾರದೆ ಹುಡುಗಿ ಲಟ್ಟಿಸಿದ ರೊಟ್ಟಿಯನ್ನೇ ಮತ್ತೆ ಮತ್ತೆ ಮುರಿದು ಹೊಸೆಯುತ್ತಾ ಇಡೀ ದಿನ ರೊಟ್ಟಿ ತಾಲೀಮು ನಡೆಸಿ ಕೊನೆಗೂ ಯಶಸ್ವಿ ಯಾದಳು.ಇಂದು ಆಕೆಯ ವೈದ್ಯಕೀಯ ಖ್ಯಾತಿಯೊಂದಿಗೆ ಆಕೆಯ ಕೈರುಚಿಯೂ ಹೆಸರುವಾಸಿಯಾಗಿದೆ. ಸಂಪ್ರದಾಯ ಬದ್ದರಾದ ಆಕೆಯ ಅಜ್ಜಿ ಕಂ ಅತ್ತೆ ನೀಡಿದ ಕಟ್ಟು ನಿಟ್ಟಿನ ತರಬೇತಿ ಮತ್ತು ಆಕೆಯ ಪರಿಶ್ರಮ ಪ್ರಯತ್ನಗಳಿಂದ ಆಕೆ ಉತ್ತಮ ಗೃಹಿಣಿಯೂ ಆದಳು. ಆದ್ದರಿಂದ ವಿವೇಕ ವಾಣಿಯಂತೆ " ಏಳುಎದ್ದೇಳು ಗುರಿಮುಟ್ಟುವ ತನಕ ವಿೆಶ್ರಮಿಸದಿರು " ವಾಣಿಯಂತೆ ಅರ್ಜುನ ಅಂದಂದಿನ ಕಲಿಕೆ ಅಂದೇ ಕರಗತವಾಗದ ಹೊರತು ಊಟ ಆಟಪಾಠಗಳನ್ವು ತೊರೆದು ಪ್ರಯತ್ನಿಸುತ್ತಿದ್ದ ನಂತೆ . ಆದಕಾರಣ ಅವನು ವಿಶ್ವದ ಶ್ರೇಷ್ಟ ಬಿಲ್ಲುಗಾರನೆನಿಸಿದ. ಅವನು ಎರಡೂ ಕೈಗಳಲ್ಲೂ ಬಿಲ್ಲುಗಳನ್ನು ಬಿಡುವ ಚತುರನಾಗಿ ಸವ್ಯಸಾಚಿ ಎನಿಸಿಕೊಂಡಿದ್ಜನು. ಅಂತ ಪ್ರಯತ್ನಶೀಲರನ್ನು ಒಲಿಯದ ಸಾಧನವೇನಿದೆ.? ಪ್ರಯತ್ನದಿಂದ ಕಲ್ಲು ಶಿಲ್ಪಕಲೆಯಾಗುತ್ತದೆ, ಕಾಡು ನಾಡಾಗುತ್ತದೆ. ವನ್ಯ ಮೃಗವೂ ಸಾಕಿದವರ ಸಖನಾದೀತು. ಬಡವ ಬಲ್ಲಿದನಾಗುವನು. ಕುರಿಗಾಹಿ ಮಹಾಕವಿ ಕಾಳಿದಾಸನಾಗುವನು. ಮಾನವ ಸೌರಕಕ್ಷೆ ಕಡೆಗೆ ಸಾಗಬಲ್ಲನು. ಧುಮ್ಮಿಕ್ಕುವ ನದಿ ಅಣೆಕಟ್ಟೆಯಲ್ಲಿ ನೆಲೆಕಾಣುವುದು,. ಇದೆಲ್ಲಾ ಪ್ರಯತ್ನದ ಫಲ. ಕೈಲಾಗದೆಂದು ಸುಮ್ಮನೆ ಕುಳಿತರೆ ಏನೂ ಆಗದು. ಪ್ರಯತ್ನದಿಂದ ಪ್ರಗತಿ ನಿಶ್ಚಿತ.
