Sulochana C.M.

Action Classics Others

3  

Sulochana C.M.

Action Classics Others

ಪುನರ್ಮಿಲನ.

ಪುನರ್ಮಿಲನ.

3 mins
6


ಸೀತಾ ಸುಂದರಿ.ವಿದ್ಯಾವತಿ.ಬುದ್ದಿವಂತೆಯೂ ಹೌದು.ಇದೀಗ ಆಕೆಯ ಮಗಳು ಲಾವಣ್ಯ ನವವಧುವಾಗಿ ಗಂಡನ ಮನೆಗೆ ತೆರಳಲು ಸಿದ್ಧವಾಗಿ ನಿಂತಿಹಳು.ಸೀತಾಳಿಗೆ ಒಂದೆಡೆ ಸಂತಸ . ಮತ್ತೊಂದೆಡೆಗೆ ದುಃಖ ಉಮ್ಮಳಿಸಿ ಬರುತ್ತಿದೆ.ಇದೇಕೋ ಬೇಡ ಬೇಡವೆಂದರೂ ಆಕೆಗೆ ತನ್ನ ಗತ ಜೀವನ ಚಿತ್ರಪಟಲ ಕಣ್ಮುಂದೆ ಹಾದು ಹೋಗುತ್ತಿದೆ. ಕುಳಿತಲ್ಲೇ ಕಲ್ಲಾಗಿ ಚಿತ್ರ ವೀಕ್ಷಣೆಯಲ್ಲಿ ಮೈಮರೆತಳು ಸೀತಾ.

ಅಂದು ತನಗೆ ಕೆಲಸ ಸಿಕ್ಕಿದಂದು ಅದೇನು ಸಡಗರ ಸಂಭ್ರಮ ಮನೆಮಂದಿಗೆಲ್ಲಾ. ತಾನೋ ಅತ್ತ್ಯುತ್ಸಾಹಿ.ಪರಸ್ಥಳದಲ್ಲಿ ನೌಕರಿ ಹಿಡಿಯಲು ಏಕಾಂಗಿಯಾಗಿ ದೌಡಾಯಿಸಲಿಲ್ಲವೇ?.ಅಲ್ಲಿ ತನಗೆ ವೃತ್ತಿ ನಿರ್ವಹಣೆಯೇನೂ ತೊಡಕಾಗಲೇ ಇಲ್ಲವಲ್ಲಾ.ಕೆಲವೇ ದಿನಗಳಲ್ಲಿ ಸಹಾಯಕನಾಗಿ ಸಹೋದ್ಯೋಗಿ ಸನ್ಮಿತ್ರನಾಗಿ ರಾಮು ಧಾವಿಸಿದ.ಅವನೂ ಚೆಲುವನೇ.ಸಹಾಯಹಸ್ತ ಸದಾ ಸಿದ್ದವಿತ್ತಲ್ಲವೇ!. ಸರಿ ಸ್ನೇಹ ಪ್ರೇಮವಾಗಲು ಕಾಲಹಿಡಿಯಲೇ ಇಲ್ಲವಲ್ಲಾ. ನಮ್ಮಿಬ್ಬರ ಒಡನಾಟ ಮಧು ರ ಮಂದಾನಿಲವಾಗಿ ಮುದನೀಡುತ್ತಿತ್ತಲ್ಲವೇ.ಆದರೆ ಬದುಕು ಸರಳ ರೇಖೆಯಲ್ಲಾ ಎಂಬ ಅನುಭವ ವಿಲ್ಲದೇ ಏನು ಸ್ವಾದವಿದ್ದೀತು.?.

ಕೆಲಸ ಮುಗಿಸಿದ ನಂತರ ನಾವು ಹರಟೆ ಹೊಡೆಯುತ್ತಿದ್ದ ಕಾಲದಲ್ಲಿ ನಮ್ಮ ಮುಂದಿನ ಭವಿತವ್ಯವೂ ರೂಪುಗೊಳ್ಳ ತೊಡಗಿತ್ತು.ಆದರೆ ಮುಳ್ಳಿರದ ಗುಲಾಬಿಯುಂಟೇ?.ಹೀಗೇ ಮಾತಿನಲ್ಲೇ ಕಾಲ ದೂಡುತ್ತಿದ್ದ ನಮ್ಮನ್ನು ನಮ್ಮ ಸ್ನೇಹ ಬಾಂಧವ್ಯಕ್ಕೆ ಜೀವಂತ ಆತ್ಮ ಸಂಬಂಧ ಬೆಸುಗೆ ಯಾಗಿಸುವ ಕಸುವಿತ್ತು.ಸರಿ ಮುಂದುವರಿಯುತ್ತಾ ಸಾಗಿದ ನಮಗೆ ಜಾತಿ ಭೂತ ಕಾಡತೊಡಗಿತು.ನಮ್ಮ ಮನೆಗಳಲ್ಲಿ ವಿಷಯ ಪ್ರಸ್ತಾಪಿಸಲು ನಾವು ಹಿಂಜರಿಯುವಂತಾಯಿತು.ನಮ್ಮದು ಶುದ್ಧ ಸಂಪ್ರದಾಯ ಬದ್ದ ಕುಟುಂಬ.ಅನ್ಯಜಾತಿಯ ವಿವಾಹಕ್ಕೆ ಸರ್ವದಾ ಸಮ್ಮತಿ ಸಿಗಲಾರದೆಂದು ನನಗೆ ಖಚಿತವಿದ್ದ ಕಾರಣ ನಾವು ನಮ್ಮ ವಿವಾಹವನ್ನು ನೋಂದಾಯಿಸಿಕೊಂಡು ಸರಳವಾಗಿ ಮಾಲೆ ವಿನಿಮಯಮಾಡಿಕೊಂಡೆವು.ನಿಧಾನವಾಗಿ ವಿಷಯ ಮನೆಯವರಿಗೆ ತಲುಪಿ ನಮ್ಮನ್ನವರು ಸ್ವೀಕಾರ ಮಾಡಲು ಒಪ್ಪಲೇ ಇಲ್ಲಾ.ಕ್ರಮೇಣ ನನ್ನ ತವರು ನನ್ನ ಬಾಳಿನಲ್ಲಿ ತನ್ನ ಬಾಗಿಲು ಮುಚ್ಚಿಕೊಂಡಿತು. ಪ್ರೀತಿಯ ಕಡಲಲ್ಲಿ ತೇಲುತ್ತಿದ್ದ ನನಗೆ ತವರಿನ ಅಗತ್ಯವಾಗಲೀ ಮಹತ್ವವಾಗಲೀ ಕಾಣಲೇ ಇಲ್ಲಾ.ಇಚ್ಚಿಸುವ ವೃತ್ತಿ,ಬೆಚ್ಚನೆಯ ಮನೆ ಪ್ರೀತಿಸುವ ಸಂಗಾತಿ,ಸ್ವರ್ಗಕ್ಕೆ ಮೂರೇಗೇಣಿನಂತೆ ನನಗೆ ಭಾಸವಾಗುತ್ತಿತ್ತು.ಕಾಲಕ್ರಮದಲ್ಲಿ ಪ್ರೀತಿಯ ತೀವ್ರತೆ ಕರಗತೊಡಗಿತು.ಸಂಗಾತಿಯ ನಿಜರೂಪ ಬಯಲಾಗತೊಡಗಿತು.ನನ್ನಮೇಲಿನ ಅವನ ಗೌರವಾದರಗಳು ಕರಗ ತೊಡಗಿದವು.ಕೊನೆಕೊನೆಗೆ ಪ್ರೀತಿಯ ಒರತೆ ಬತ್ತಿರುವುದೂ ಅರಿವಾಯಿತು.ಅಷ್ಟರಲ್ಲಿ ನಾನು ತಾಯಾಗಿಬಿಟ್ಟಿದ್ದೆನಲ್ಲಾ.ಈಗ ನನ್ನ ಕುಟುಂಬದ ಹೊರೆ ಹೊಣೆ ಸಂಪೂರ್ಣ ಭಾರವಾದಂತೆ ನನಗೆ ತೋರತೊಡಗಿತು.ಆದರೆ ಉಪಾಯವಿಲ್ಲಾ.ಪರಿಶ್ರಮದಿಂದ ವೃತ್ತಿಯನ್ನು ಉಳಿಸಿಕೊಂಡೆ.ಸಂಗಾತಿಯ ಅತಿರೇಕಗಳು ಅಸಹನೀಯವೆನಿಸತೊಡಗಿದಂತೆ ಮನಸ್ಸು ಕಲ್ಲಾಗತೊಡಗಿತು.ಈಗ ತವರ ಹಂಬಲ ತೆರೆತೆರೆಯಾಗಿ ಮನವನ್ನು ಕಾಡತೊಡಗಿತಲ್ಲವೇ.ಆದರೆ ಮುಚ್ಚಿದ ಬಾಗಿಲ ಮುಂದೆ ನನ್ನದೇನಿದೆ ಕೆಲಸ?.ಸ್ವಚ್ಚವಾಗಿ ಸಂಗಾತಿಯೊಂದಿಗೆ ಮಾತನಾಡಿ ಬಿಡುಗಡೆ ಪಡೆಯುವ ವಿಚಾರ ಮಾಡಿದೆ.ಅವನೂ ಸುಲಭವಾಗಿ ಬಿಡುಗಡೆ ಮಾಡಿಬಿಟ್ಟಾ!.ಅಬ್ಹಾ ಗಂಡು ಜಾತಿಯೇ,ಎಷ್ಟು ಸುಲಭವಾಗಿ ಹೊಣೆಗಾರಿಕೆಯಿಂದ ಜಾರಿಕೊಂಡ ಮೋಸಗಾರ ಗಂಡು.ಎಲ್ಲಾ ನನ್ನದೇ ತಪ್ಪು.ಮನೆಯವರ ಸಮ್ಮತಿಯಂತೆ ಸಾಗಿದ್ದರೆ ನನಗಿಂದು ಈ ಪರಿ ಸಂಕಟ ಬರುತ್ತಿರಲಿಲ್ಲಾ. ನನ್ನ ಬಗ್ಗೆಯೇ ನನಗೆ ಜಿಗುಪ್ಸೆ ಬಂದಿತಲ್ಲಾ.

ಈಗ ನಡುನೀರದಾರಿಯಲ್ಲಿದೆ ಬದುಕು."ತೇಲಲೀಯದು ಗುಂಡು ಮುಳುಗಲೀಯದು ಬೆಂಡು "ಎಂಬಂತಾಯಿತು ನನ್ನ ಸಂಸಾರ ಸಾರ.ಗಂಡಿನಂತೆ ಹೆಣ್ಣು ಕೈಕೊಡವಲು ಬಾರದು.ಮುದ್ದಾದ ಮಗು ನನ್ನ ಜೀವಕ್ಕೆ ತಂಪೆರೆಯುತ್ತಿತ್ತು.ಹಾಗೂ ಹೀಗೂ ಏಕಾಂಗಿ ಬದುಕನ್ನು ರೂಢಿಸಿಕೊಂಡೆ.ಜೀವನಕ್ಕೇನೂ ತೊಂದರೆ ಇಲ್ಲ.ಆದರೆ ಒಂಟಿಯಾಗಿ ಬಾಳ ಪಯಣ...ಹಲಬಗೆಯ ಇರಿಸು ಮುರಿಸು,ಸಂಕಟಗಳ ಸರಮಾಲೆ ಕೊರಳ ಬಳಸಿತು.ಸಹಿಸಬೇಕಲ್ಲವೇ?.ಸಹಿಸದೇ ವಿಧಿಯಿಲ್ಲಾ. ಭಗವಂತನ ದಯೆ ಮಗಳು ಜಾಣೆ .ವಿದ್ಯಾಬುದ್ದಿಗಳಲ್ಲಿ ಚುರುಕು.ಇನ್ನೇನು ಬೇಕು.ಅವಳ ಆಟಪಾಟ ಕಾರ್ಯಕ್ರಮಗಳೇ ನನಗೆ ಸಾಕುಬೇಕೆನಿಸುವಷ್ಟಾದವು.ಹುಡುಗಿ ಎಲ್ಲೆಡೆ ತನ್ನ ಪ್ರಥಮ ಸ್ಥಾನವನ್ನು ಪ್ರತಿಷ್ಠಾಪಿಸಿಕೊಂಡು ಬಿಟ್ಟಿತು.ಎಲ್ಲೆಲ್ಲೂ ಅವಳ ಗಳಿಕೆಯ ಬಹುಮಾನಗಳ ಮಾಲಿಕೆ ಮನಕ್ಕೆ ಮುದನೀಡುವವು.ಆದರೂ ಒಮ್ಮೊಮ್ಮೆ ಮಗು ಕೇಳುವ ಪ್ರಶ್ನೆಗಳಿಗೆ ನಾನು ಉತ್ತರಿಸಲಾರದೇ ಒದ್ದಾಡುವುದಿತ್ತು.ಬೆಳೆಯುತ್ತಾ ಅವಳು ನನ್ನ ಇಕ್ಕಟ್ಟನ್ನು ಅರ್ಥ ಮಾಡಿಕೊಂಡಳು.ಮುಂದೆ ಎಲ್ಲಾ ಸರಾಗ ಸಮಾಧಾನ ವೇ,ಪ್ರಧಾನ.ಮಗಳು ಅಧ್ಯಯನ ಮುಗಿಸಿ ವೃತ್ತಿ ನಿರತಳಾದಳು.ಇನ್ನೇನು ನನ್ನದೂ ನಿವೃತ್ತಿಯ ಹಂತ.ಇನ್ನು ಕೊನೆಯದೊಂದು ಪರೀಕ್ಷೆಗೆ ನಾನು ಸಿಧ್ದಳಾಗಬೇಕು. ಅದು ಮಗಳಿಗೆ ವರಾನ್ವೇಷಣೆ.

ಅಂದು ನನ್ನ ಗೆಳತಿಯ ಮನೆಯ ವಿವಾಹ ಕಾರ್ಯಕ್ರಮ .ಬಹಳ ದಿನಗಳ ನಂತರ ಹುಡುಕಿಕೊಂಡು ಬಂದು ಮಗನ ಮದುವೆಗೆ ಆಹ್ವಾನ ನೀಡಿಹಳು ಗೆಳತಿ.ಅಂದು ಭಾನುವಾರ ರಜಾದಿನ.ಮಗಳೂ ಜೊತೆಗಿದ್ದಳು.ಇಬ್ಬರೂ ಮದುವೆ ಮಂಟಪ ತಲುಪಿದೆವು.ಕುಶಲೋಪರಿ,ಊಟೋಪಚಾರಗಳು ಮುಗಿದವು.ನಾವು ಹೊರಹೋಗಲು ಸಿದ್ಧರಾದೆವು .ಆಗ ಯಾರೋ ನಮ್ಮನ್ನು ಹಿಂಬಾಲಿಸಿ ಬರಹತ್ತಿದ್ದರು.ನಾವು ತಿರುಗಿ ನೋಡಿದೆವು.ಅಬ್ಬಾ ನನ್ನ ಕಣ್ಣು ನೋಡುತ್ತಿರುವುದೇನು?.ಮೈಚಿವುಟುಕೊಂಡೆನು.ನೋವಾಯಿತು.ಅಂದರೆ....,ಇವರು,ಅದೇ.... ಅವರೇ. ಮಗಳು ನೋಡಮ್ಮಾ ಯಾರೋ ಇವರು ನಮ್ಮನ್ನೇ ಆವಾಗಿನಿಂದ ಗುರಾಯಿಸುತ್ತಿದ್ದಾರೆ.ಒಂದು ಕೈ ನೋಡಿಬಿಡಲೇ ..,ಈತನ ಗ್ರಹಚಾರ ಬಿಡಿಸುವೆನು ನೋಡೀಗ ಎನ್ನಬೇಕೆ?. ಗರಬಡಿದುಹೋಗಿದ್ದ ನಾನೀಗ ಎಚ್ಚೆತ್ತುಕೊಂಡೆನು.ಏ ಬೇಡಮ್ಮಾ ಬೇಡಾ ಎನ್ನುವಷ್ಟರಲ್ಲಿ ಅವರು ಪಕ್ಕದಲ್ಲಿ ನಿಂತು ಮುಗುಳ್ನಗಬೇಕೆ?.ಮಗು ಏನಂದೆ ಮಾಡು ನೋಡೋಣ ನಿನಗೇನನ್ನಿಸುತ್ತದೋ ಹಾಗೇ ಮಾಡು ಮಗಳೇ ಎನ್ನಬೇಕೇ!.ಈ ಮಗಳು ಆ ಜೇನಿನಂತ ಮಾತಿನ ಮೋಡಿಗೆ ಕರಗಿಬಿಟ್ಟಳಲ್ಲಾ.ಇಲ್ಲಾ ಸಾರಿ ಅಂಕಲ್ ನನಗೆ ಗೊತ್ತಾಗಲಿಲ್ಲಾ..ಎಂದೇನೋ ಹೇಳುತ್ತಿರುವಾಗ ಮುಂದುವರೆದು ಅವಳ ಕೈಗಳನ್ನು ಹಿಡಿದು ಆತ್ಮೀಯತೆಯಿಂದ ತಲೆ ನೇವರಿಸಲು ಮಗಳೆಲ್ಲಿ...? ಅದೋ ಅಪ್ಪನ ಅಪ್ಪುಗೆಯಲ್ಲಿ.!!!!.ಮುಂದಿನದೆಲ್ಲಾ ಸಿನಿಮೀಯ.ಕಂಗಳು ತುಂಬಿ ಕಂಠ ಬಿಗಿದು ಮೂವರೂ ಮಾತು ಮರೆತು ....ದ್ವೇಷ ಕರಗಿ ಮಧುರ ಮಿಲನವೆಂದರೆ ಇದೆ ಅಲ್ಲವೇ ಎನ್ನಿಸಿತು.ಮೂರೂ ಜೀವಿಗಳ ಬಾಳಲ್ಲಿ ಈ ಪುನರ್ಮಿಲನ ಹೊಂಬೆಳಕ ತಂದಿತು.ಸಿಎಂಸು.


Rate this content
Log in

Similar kannada story from Action