ಭರವಸೆ.
ಭರವಸೆ.
ಬೆಳ್ಳಂಬೆಳಗ್ಯೆಯೇ ಮಗಳು ಫೋನಾಯಿಸಿದಳು.ಯಾಕಮ್ಮಾ ಏನ್ಸಮಾಚಾರ ಎಂದೆ ನಾನು.
ಅದೇ ವಿಷಯ ಹೇಳೋಣಾಂತ ಮಾಡಿದೆ.ಎದುರು ಮನೆ ರಾಧಮ್ಮ ರಾತ್ರಿ ಮಲಗಿದವರು ಬೆಳಗ್ಯೆ ಏಳಲಿಲ್ಲಾ.ಮಲಗಿದಲ್ಲೇ ಸುಖವಾಗಿ ಪ್ರಾಣ ಬಿಟ್ಟಿದ್ದಾರೆ., ನೋಡಮ್ಮಾ ಎಂದಳು ಮಗಳು .
ಸರಿ ಬಿಡಮ್ಮಾ ಪುಣ್ಯಾತ್ಗಿತ್ತಿ ಅವರು ಅಂಥಾ ಸಾವು ಒಂದು ಸಾಧನೆ ಕಣಮ್ಮಾ ಎಂದೇ ನಾನು.
ಏನಮ್ಮಾ ಸಾವಿನಲ್ಲೂ ಸಾಧನೇಂತ ಇದೆಯಾ!ಏನಮ್ಮಾ ನೀನು ಹೇಳೋದು !?.ಕೇಳಿದಳು ಮಗಳು. ಅಲ್ಲಮ್ಮಾ ಹೀಗೆ ಹೇಳದೆ ಕೇಳದೇ ಹೋದರೆ ಏನಮ್ಮಾ ಗತಿ.ರಾಧಮ್ಮನಂತೂ ವಯಸ್ಸಾದವರು.ಜವಾಬ್ದಾರಿಗಳಿರಲಿಲ್ಲಾ ಸರಿ.ಬೇರೆಯವರಿಗೆ ಹೀಗಾದರೆ ಏನಮ್ಮಾ ಮಾಡೋದು?.ಧ್ವನಿಯಲ್ಲಿ ಆತಂಕ ತುಂಬಿತ್ತು.
ನೋಡಮ್ಮಾ ಯಾವಕಾರಣಕ್ಕೂ ಭರವಸೆ ಕಳಕೊಳ್ಳಬಾರದು.ನೀನು ವಿದ್ಯಾವತಿ.ಜಗತ್ತನ್ನು ವಿಮರ್ಷಾತ್ಮಕವಾಗಿ ನೋಡಬಲ್ಲಾಕೆ ನೀನೆ ಹೀಗೆ ಗಾಬರಿಯಾದರೆ ಹೇಗೆ ಹೇಳು?. ನೋಡು. ಮಗಳೇ.,
ಪ್ರತಿ ಜೀವ ಜೀವನಕ್ಕೆ ಏನಾದರೂ ಜೀವಜಲವಿದ್ದರೆ ಅದೇ ಭರವಸೆ.ಪ್ರತಿದಿನ ಎದ್ದಾಗಿಂದ ಮಲಗುವ ತನಕ ಅದೆಷ್ಟೋ ಕಷ್ಟಸುಖದ ಪ್ರಸಂಗಗಳು,ಸಂಭ್ರಮ ,ವಿಷಮ ಪರಿಸ್ಥಿತಿಗಳು ಮನುಷ್ಯನನ್ನು ಕಾಡುತ್ತಲೇ ಇರುತ್ತವೆ.ಮುಂಜಾನೆ ಎದ್ದ ತಕ್ಷಣ ಒಂದು ಕ್ಷಣ ದೈವದ ಮೊರೆ ಹೋಗುವುದು ಮತ್ತು ಈ ದಿನದ ಕಾರ್ಯಕಲಾಪಗಳು ಸುರಳೀತ ಸಾಗಲೆಂದು ಬೇಡಿ ಮುನ್ನಡಿಯಿಡುವುದು.ಸಹಜ.ಅಂತೆಯೇ ದಿನದ ಅಂತ್ಯದಲ್ಲಿ ಅಂದಿನ ಎಲ್ಲ ಕಲಾಪಗಳೂ ಮುಗಿದು ವಿಶ್ರಾಂತಿಗೆ ತೆರಳುವ ಮುನ್ನ ಮತ್ತೊಮ್ಮ ಅದೇ ಭಗವಂತನ ಸ್ನರಿಸಿಕೊಂಡು ಅಂದಂದಿನ ಸಾಧನೆ ಸಂತಸ ವೈಫಲ್ಯತೆಗಳನ್ನು ಭಾಗವಚ್ಚರಣಕ್ಕೆ ಸಮರ್ಪಿಸಿಬಿಟ್ಟರೆ ,ಎಷ್ಟೋ ನಿರಾಳವಾಗುವುದು ಮನ.ಹಾಗೇ ಆ ಅಗೋಚರ ಪರಮ ಶಕ್ತಿಯನ್ನು ಧ್ಯಾನಿಸುತ್ತಾ ನಿದ್ದಂಗೆ ಜಾರುವುದು ಸಾಮಾನ್ಯ ಮತ್ತು ಉತ್ತಮ. ,ಅಲ್ಲವೇ? ನಿನಗೇನನಿಸುತ್ತದೆ?.
ಸರಿ ಕಣಮ್ಮಾ ನೀನು ಹೇಳುವುದು .ನಾನು ಹಾಗೇ ಮಾಡುವೆ.
ನೋಡಮ್ಮಾ, ನಿದ್ದೆಯನ್ನು ಸಾವಿಗೆ ಹೋಲಿಸಲಾಗಿದೆ.ಆದರೆ ಯಾರೂ ಸಾವನ್ನು ಸುಲಭವಾಗಿ ಸ್ವಾಗತಿಸುವುದಿಲ್ಲಾ.ಯಾರೂ ಬಯಸದ ಆದರೆ ಎಲ್ಲರೂ ಖಡ್ಡಾಯವಾಗಿ ಮುಖಾಮುಖಿಯಾಗಲೇ ಬೇಕಾದ ಸ್ಥಿತಿಯೆಂದರೆ ಸಾವುಮಾತ್ರ.ಯಾರು ಅಪೇಕ್ಷಿಸಲೀ ಬಿಡಲಿ ಅವರವರ ಕಾಲಾವಕಾಶ ಮುಗಿದ ಮರುಘಳಿಗೆಯೇ ಕಾಲರಾಯನ ಹಿಂದೆ ತೆರಳಲೇ ಬೇಕು.ಇದೊಂದು ಭರವಸೆಯೇ ಸಾಕು ಜಗತ್ತಿನ ನಿಯಂತ್ರಣಕ್ಕೆ.ಯಾರೂ ಇಲ್ಲಿ ಶಾಶ್ವತರಲ್ಲಾ.ಯಾವುದೂ ಶಾಶ್ವತವೂ ಅಲ್ಲಾ.ಯಾರಿಗೆ ಯಾರೂ ಇಲ್ಲಾ.ನಾವಿದ್ದೇವೆನ್ನುವವರಾರೂ ನಮಗೆ ಬೇಕಾದಾಗ ದೊರೆಯುವುದೂ ಇಲ್ಲಾ.ಇದೆಲ್ಲವನ್ನೂ ಕಾಲರಾಯನ ಚಕ್ರದ ಪರಿಕ್ರಮ ಮತ್ತು ಸಂದೇಶದಲ್ಲಿ ಎಲ್ಲರೂ ಅರಿಯಬೇಕಾಗಿದೆ.ಇದೇ ಶಾಶ್ವತ ಸತ್ಯ.ಇದೇ ಬದುಕಿನ ಮಹತ್ ಭರವಸೆ.
ಹೌದು ನೀನನ್ನುವುದು ನಿಜ. ಈಗ ರಾಧಮ್ಮನ ವಿಷಯದಲ್ಲಿ ನೀನು ಸತ್ಯವನ್ನೇ ಹೇಳುತ್ತಿರುವೆ ಕಣಮ್ಮಾ.
ಹೌದು ಮಗಳೇ ,ಈ ಸತ್ಯವರಿತ ನಂತರ ಸತ್ಯ ಧರ್ಮ ,ನೀತಿ ಭೀತಿ ಮಾರ್ಗಗಳು ಸರಳವೂ ನಿರರ್ಗಳವೂ ಆಗಬಲ್ಲದು. ಆಗ ಮಾನವ ತನ್ನ ತಾ ತಿದ್ದಿಕೊಂಡು ನಡೆಯುವ ಪ್ರಯತ್ನ ಮಾಡುವನು.ಅನ್ಯರ ಹಂಗು ಭಂಗಗಳ ಗೋಜಿಗೆ ಹೋಗಲಾರನು. ತನ್ನ ತಾನರಿವವನಿಗೆ ಜಗವೇ ಉತ್ತಮ ಪಾಠಶಾಲೆಯಾಗಬಲ್ಲದು.ಒಂದು ಸಣ್ಣ ಬೀಜ ಪರಿಸರದ ಸೌಲಭ್ಯಗಳನ್ನು ಬಳಸಿಕೊಂಡು,ಉಂಡು ಉಪಕಾರಿಯಾಗಿ ಬೆಳೆದು, ಬಾಳಿ, ಹೊವಾಗಿ,ಕಾಯಾಗಿ ಹಣ್ಣಾಗಿ ನೆರಳಾಗಿ ಸಾವಿರಾರು ಬಗೆಬಗೆಯ ಉಪಕಾರಮಾಡುತ್ತಲೇ ತನ್ನ ಜೀವನ ಯಾತ್ರೆಯನ್ನು ಮುಗಿಸುವುದು.ಆದರೆ ಮಾನವ ಎಲ್ಲವನ್ನು ನೋ ಡಿದರೂ ಏನನ್ನೂ ಗ್ರಹಿಸಿಕೊಳ್ಳದೇ ದುರಹಂಕಾರಿಯಾಗಿ ಪರಾವಲಂಬಿಯಾಗಿಯೇ ಬಾಳಿ ಜೀವ ಬಿಡುವನು.
ಮೂರು ವರುಷ ನೀರುಕೊಟ್ಟರೆಂದು ಕಲ್ವವೃ ಕ್ಷ ನೂರು ವರುಷ ಎಳನೀರು ಕೊಡುವುದು .ಆದರೆ ಮಾನವನೇನು ಮಾಡುವನು.ತನ್ನ ಪರಿಸರ ಮತ್ತು ಸಮಾಜಕ್ಕೆ ಕನಿಷ್ಟ ಒಂದು ಸಸ್ಯದಂತೆ,ಒಂದು ಗೋವಿನಂತಾದರೂ ಬಾಳಿ ಬದುಕುವಷ್ಟು ಜ್ಞಾನಿಯಾದರೆ ಜಗತ್ತೇ ಸುಂದರವಾದೀತೆಂಬ ಭರವಸೆ ನಿಸ್ಸಂಶಯ.
