Sulochana C.M.

Abstract Tragedy Classics

3  

Sulochana C.M.

Abstract Tragedy Classics

ಅನಿರೀಕ್ಷಿತ.

ಅನಿರೀಕ್ಷಿತ.

2 mins
11


  ಬದುಕೊಂದು ಅನಿರೀಕ್ಷಿತಗಳ ಸಂತೆ.ಇಲ್ಲಿ ಎಲ್ಲರೂ ಕೊಳ್ಳುವ ಮಾರುವ ವ್ಯವಹಾರಸ್ಥರೇ ಆದರೂ ಯಾರಿಗೂ ಯಾವುದೂ ಖಚಿತವಿಲ್ಲಾ. ಎಷ್ಟೇ ಬುದ್ದಿವಂತನೇ ಆದರೂ ಭವಿಷ್ಯವನ್ನು ಊಹಿಸಲಾರ.ಊಹಿಸಿದರೂ ಕರಾರುವಾಕ್ಕಾಗಿರುವುದಿಲ್ಲವಲ್ಲಾ. ಎಂಥಾ ಚಾಣಕ್ಷನೇ ಆಗಿದ್ದರೂ ತನ್ನ ಹುಟ್ಟು ಸಾವಿನ ಗುಟ್ಟನ್ನಂತೂ ಅರಿತಿರುವುದಿಲ್ಲಾ. ಇದೇ ಈ ಜಗತ್ತಿನ ಮಹತ್ವ.ಇಲ್ಲೇ ಇರುವುದು ಕಾಣದ ಕೈನ ಕರಾಮತ್ತು. ಇಲ್ಲಿ ಹೆಡ್ಡನೆನಿಸಿಕೊಂಡವನೂ ಅದೃಷ್ಟವಿದ್ದರೆ ಅಧಿಕಾರ ಹಿಡಿದಾನು. ಎಲ್ಲ ಬಲ್ಲವನಾದವನೂ ಎಲ್ಲೂ ಸಲ್ಲದವನೂ ಆಗಿಬಿಟ್ಟಾನು. ಅದೆಲ್ಲಾ ಮೇಲೆ ಕುಳಿತು ಸೂತ್ರ ಹಿಡಿದು ಕುಣಿಸುವಾತನ ಕೈಚಳಕ. ಅವನನ್ನು ಯಾರೂ ಪ್ರಶ್ನಿಸಲಾರರು. ಪ್ರ ಶ್ನಿಸಲು ಇವನು ಯಾರ ಕಣ್ಣುಗೂ ಕಾಣಲಾರ.ಕೈಗಳಿಗೂ ಸಿಗುವವನಲ್ಲಾ. ಎಲ್ಲೆಡೆ ಇದ್ದರೂ ಇಲ್ಲದಂತಿರುವುದೇ ಅವನ ವಿಶೇಷ.ಒಂದರೆಕ್ಷಣದಲ್ಲಿ ನಗುವವರನ್ನು ಅಳಿಸುವನು. ಅಳುವವರನ್ನು ಫಕಫಕನೆ ನಗಿಸುವನು. ಅದೆಲ್ಲಾ ಅವನ ಚಮತ್ಕಾರ.ಯಾರೂ ಅರಿಯಲಾರದ್ದು.

ಬೆಂಗಳೂರಿನ ಗಂಗಾರಾಮ್ ಕಟ್ಟಡಕ್ಕೆ ಸುಮಾ ಪುಸ್ತಕ ತರಲೆಂದು ಹೋದಳು. ಆಕೆ ಶಾಲಾ ಶಿಕ್ಷಕಿ.ಅದು ಎಂಭತ್ತರ ದಶಕದ ಕಥೆ. ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಪುಸ್ತಕಗಳನ್ನು ಕೊಂಡು ಹಣ ಸಂದಾಯ ಮಾಡಿ ಪುಸ್ತಕ ಪಾರ್ಸಲ್ ಪಾಕೇಟನ್ನು ಹಿಡಿದು ಹೊರಬಂದಳು.ಯಾರೋ ಪರಿಚಿತರು ಕರೆದಂತಾಯಿತು. ಸರಸರನೆ ಅವರ ಬಳಿ ಸಾರಿ ಕುಶಲೋಪರಿ ಆರಂಭವಾಯಿತು. ಇಬ್ಬರೂ ಮಾತನಾಡುತ್ತಾ ನೂರು ಅಡಿ ಮುನ್ನಡೆದರು.ಅಷ್ಟೇ ಅದೇನು ಘೋರ ಭೀಕರ ಸದ್ದು ಕಿವಿ ತಮ್ಮಟೆ ಒಡೆದೇ ಹೋದಂತಾಗಿ ಏನೂ ಕೇಳಿಸದಾಯಿತು ಭೂಕಂಪನಕ್ಕೆ ಇಡೀ ಪರಿಸರ ಅಲ್ಲಾಡಿಹೋಯ್ತು. ಭಯಾತಂಕಗಳಿಂದ ಸುಮ ಮರವಟ್ಟಿ ಹೋದಳು.ಹಿಂತಿರುಗಿ ನೋಡಿದರೆ ಇಡೀ ಗಂಗಾರಾಮ್ ಭವನ ಕುಸಿದು ಬಿದ್ದಿದೆ.ಅದು ಏಶಿಯಾ ಖಂಡದಲ್ಲೇ ದೊಡ್ಡ ಪುಸ್ತಕ ವ್ಯಪಾರ ಮಳಿಗೆಯಾಗಿತ್ತು.ಕಣ್ಮುಚ್ಚಿ ಬಿಡುವಷ್ಟರಲ್ಲಿ ಕುಸಿದು ಬಿದ್ದಿತು.ಅದೃಷ್ಟ ಸುಮಾ ಜೀವಂತ ಹೊರಬಂದಿದ್ದಳು. ಅದೆಷ್ಟೋ ಗ್ರಾಹಕರು,ಮಕ್ಕಳು,ಕೆಲಸಗಾರರು,ವ್ಯಾಪಾರಿಗಳು ಲೆಕ್ಕವಿಲ್ಲದಂತೆ ಕಟ್ಟಡದಡಿಗೆ ಸಿಲುಕಿ ಪ್ರಾಣ ಬಿಟ್ಟಿದ್ದರು.ಯಾರ ಜೀವ ಯಾವಾಗ ಎಲ್ಲಿ ಹೇಗೆ ಹೋಗಬೇಕೆಂದಿದೆಯೋ ದೇವರೇ ಬಲ್ಲಾ.

ರಾಮಣ್ಣ ತಂಗಿಯ ಮದುವೆಯ ಕರೆಯೋಲೆ ಹಿಡಿದು ಬಂಧುಗಳನ್ನು ಆಮಂತ್ರಿಸಲು ಹೊರಟಿದ್ದ.ಅವರು ಶ್ರೀಮಂತರು.ತಂಗಿಯನ್ನು ಯೋಗ್ಯ ವರನಿಗೆ ನಿಶ್ಚಯಿಸಿ ಮದುವೆಯ ಪತ್ರಿಕೆ ಹಂಚಲು ಸೋದರರೆಲ್ಲಾ ಬೇರೆಬೇರೆ ದಿಕ್ಕಿನಲ್ಲಿ ಹೊರಟರು.ಸಂಜೆಯಾಯ್ತು .ಇಂದಿಗೆ ಸಾಕು ನಾಳೆ ಮುಂದಿನೂರಿಗೆ ಹೋಗಬೇಕು.ರಾಮಣ್ಣ ಹಿರಿಯ ಮಗ .ಸರಕಾರದ ಉನ್ನತ ಹುದ್ದೆಯಲ್ಲಿದ್ದವ.ಆಕಾಲಕ್ಕೆ ಕಾರುಬಾರುಗಳ ದರ್ಬಾರಿರಲಿಲ್ಲಾ.ಫೋನುಗಳೇ ವಿರಳ.ಎಲ್ಲಾ ಜನರೇ ಓಡಾಡಿ ಮಾಡುತ್ತಿದ್ದ ಕಾಲ.ರಾಮಣ್ಣ ಬಸ್ಸಿಗೆ ಕಾಯುತ್ತಾ ನಿಂತ.ಅದೆಷ್ಟು ಹೊತ್ತಿಗೂ ಬಸ್ಸುಗಳೇ ಅತ್ತ ಸುಳಿಯಬೇಡವೇ.ರಾಮಣ್ಣನಿಗೆ ಮನೆಗೆಲಸದ ತರಾತುರಿ.ಸುಮ್ಮನೇ ವಿಲ್ದಾಣದಲ್ಲಿ ನಿಲ್ಲಲಾರದೇ ಚಡಪಡಿಸುತ್ತಿದ್ದ.ಅಷ್ಟರಲ್ಲಿ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಲಾರಿ ಕಲ್ಲು ತುಂಬಿಕೊಂಡು ಬರುತ್ತಿತ್ತು.ರಾಮಣ್ಣ ಕೈಮಾಡಿದ.ಲಾರಿ ನಿಂತಿತು.ರಾಮಣ್ಣ ಹತ್ತಿದ.ಒಂದೂರು ದಾಟಿದ ಮೇಲೆ ಅದೇನಾಯ್ತೋ ದೇವರಿಗೇ ಗೊತ್ತು .ಲಾರಿ ಎದುರಿನ ಮರಕ್ಕೆ ಗುದ್ದಿ ನಜ್ಜು ಗುಜ್ಜಾಯಿತು.ಮುಂದೆ ಕುಳಿತಿದ್ದ ರಾಮಣ್ಣ ಸ್ಥಳದಲ್ಲೇ ಕೈಲಾಸ ವಾಸಿಯಾದ.ತುಸು ಸಮಯದಲ್ಲೇ ಮದುವೆ ಮನೆ ಮಸಣದ ಮನೆಯಾಯ್ತು. ಹುಟ್ಟು ಸಾವು, ಮದುವೆ,ಮುಂಜಿ ಯಾರಹಣೆಬರಹ ,ಯಾರು ಕಂಡಿರುವರು?.ಎಲ್ಲಾ ಅನಿರೀಕ್ಷಿತಗಳ ಸಂತೆ.ಎಲ್ಲಾ ಅವನಿಚ್ಚೆಯಂತೆ.ನಗಿಸುವವರ ಅಳಿಸುವುದೋ ,ಅಳುವವರ ನಗಿಸುವುದೋ ಎಲ್ಲಾ ಒಂದೇ ಕ್ಷಣದಲ್ಲಂತೆ.ಅವನಿಚ್ಚೆಯಂತೆ.


Rate this content
Log in

Similar kannada story from Abstract