ಮರಳಿ ಮನಸ್ಸಾಗಿದೆ ೧
ಮರಳಿ ಮನಸ್ಸಾಗಿದೆ ೧


ಪ್ರತಿಷ್ಠಿತ ಉದ್ಯಮಿ ರಾಮ್ ರಾವ್ ಅವರ ಮುದ್ದಿನ ಮಗಳು ಅನು.ಅನು ಈಗಿನ ಕಾಲಕ್ಕೆ ತಕ್ಕಂತೆ ಇರೋ ಮಾರ್ಡನ್ ಹುಡುಗಿ ಶ್ರೀಮಂತಿಕೆಯ ಗರ್ವ ತುಂಬಿ ತುಳುಕಾಡುತ್ತಿದೆ ಅವಳಲ್ಲಿ ಈಗ ಅವಳು "ಎನ್ ಸಿ..."ಕಾಲೇಜಿನ ದ್ವಿತೀಯ ವರ್ಷದ ಪದವಿಯನ್ನು ಕಲಿಯುತಿದ್ದಾಳೆ ಜೊತೆಗೆ ಅವರದೆ ಕಾಲೇಜು ಬೇರೆ ಅಲ್ಲಿ ಅವಳದೆ ದರ್ಬಾರು ಯಾರು ಅವಳ ಮಾತಿಗೆ ಎದುರಾಡುವಂತಿರಲಿಲ್ಲಾ.
ರಾಮ್ ರಾವ್ ಅವರ ಕೆಲಸದಾಳು ರಾಮು ಅವರ ಮನೆಯಲ್ಲೇ ಹೃದಯಾಘಾತದಿಂದ ಸತ್ತಿದ್ದ ಅವನ ಮಗಳೆ "ಹೃದಯ ".ರಾಮು ಸತ್ತಾಗ ಅವಳಿನ್ನೂ ಪುಟ್ಟ ಮಗು ರಾಮ್ ರಾವ್ರರೆ ಅವಳಿಗೆ ಹೃದಯ ಎಂದು ನಾಮಕರಣ ಮಾಡಿದ್ದರು ಮನೆ ಮಗಳಂತೆ ನೋಡಿಕೊಂಡಿದ್ದರು.ಅನು ತುಂಬಾ ಹಟಮಾರಿ ಮತ್ತು ಸ್ವಾರ್ಥಿಯಾಗಿದ್ದರಿಂದ ಅವಳನ್ನು ಎಂದಿಗೂ ಮಗಳಾಗಿರಲು ಬಿಡಲಿಲ್ಲಾ ಮನೆಯ ಆಳಿನಂತೆ ನಡೆಸಿಕೋಂಡಿದ್ದಳು.
ಹೃದಯ ಸದಾ ಮೌನಿ ಯಾರ ಜೊತೆಗೂ ಜಗಳಕ್ಕೆ ನಿಲ್ಲುವವಳಲ್ಲಾ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದಳು ಅನುವಿನ ಗುಣಕ್ಕೆ ಇವಳ ಗುಣ ತದ್ವಿರುದ್ಧ ಆಗಿದ್ದರಿಂದ ಇವಳು ಎಲ್ಲರಿಗೂ ಇಷ್ಟವಾಗಿದ್ದಳು. ಅನುವಿಗಿಂತ ಒಂದು ವರ್ಷ ಚಿಕ್ಕವಳಾದ ಇವಳನ್ನು ಕಾಲೇಜು ಮೆಟ್ಟಿಲು ಹತ್ತಲು ಬಿಡಬಾರದೆಂದು ನಿಶ್ಚಯಿಸಿದ್ದಳು ಅನು ಆದರೆ ರಾಮ್ ರಾವ್ ಅವರು ಅವಳನ್ನು ಕಾಲೇಜಿಗೆ ಹೋಗಲೇಬೇಕೆಂದು ಒತ್ತಾಯಿಸಿದ್ದರಿಂದ ಬೇರೆ ದಾರಿಯಿಲ್ಲದೆ ಒಪ್ಪಿಕೋಂಡಳು.
ಹೃದಯ ಮೆಟ್ಟಿಲು ಇಳಿದು ಕೆಳಗೆ ಬರುತ್ತಾ ಇರುವುದನ್ನು ನೋಡಿದ ಅನು"ಬೇಡ ಅಂದ್ರು ಕೇಳದೆ ಕಾಲೇಜ್ ಗೆ ಹೋಗ್ತಿನಿ ಅಂತ ಹೊರಟಿದ್ಯಾ ಅಲ್ವಾ ಈ ಒಂದೆ ದಿವಸದಲ್ಲಿ ನಿನ್ಗೆ ಕಾಲೇಜ್ ಸಹವಾಸನೇ ಬೇಡ ಅನ್ನಿಸ್ಬೇಕು ಹಾಗ್ ಮಾಡ್ತಿನೀ..."ಎಂದು ಮನದಲ್ಲೆ ನಿಶ್ಚಯಿಸಿದ್ದಳು.
ಹೃದಯಗೆ ಇಂದು ಕಾಲೇಜಿನ ಮೊದಲ ದಿನವಾದ್ದರಿಂದ ಸ್ವಲ ಭಯದಿಂದಲೆ ಅನುವಿನ ಜೊತೆ ಹೊರಟಿದ್ದಳು.ಕಾರು ಮುಂದೆ ಸಾಗಿತ್ತು ಅರ್ಧ ಗಂಟೆಯ ನಂತರ ಕಾಲೇಜಿನ ಆವರಣದ ಒಳಗಡೆ ಕಾರು ನುಗ್ಗಿತ್ತು ಅನು ಕಾರನ್ನು ಪಾರ್ಕ್ ಮಾಡಿದವಳು ಅವಳ ಕಡೆ ನೋಡಿ "ಏನ್ ಇನ್ನೂ ಕೂತಿದ್ಯಾ ಇಳಿ....."ಎಂದಾಗ ಇಳಿದಳು ಹೃದಯ.ಅನು ಒಂದಷ್ಟು ಹುಡುಗರು ಮತ್ತು ಹುಡುಗಿಯರಿದ್ದ ಗುಂಪಿನ ಜೊತೆ ಸೇರಿಕೋಂಡಳು ಹೃದಯ ಅವರೆಲ್ಲರನ್ನೂ ದಾಟಿಕೋಂಡೆ ಹೋಗಬೇಕಿತ್ತು ಭಯದಿಂದಲೆ ಸುತ್ತಲೂ ನೋಡುತ್ತಾ ಮುಂದೆ ಹೊರಟವಳಿಗೆ ಒಬ್ಬ ಅಡ್ಡ ಹಾಕಿದ.
"ಜೂನಿಯರಾ.....???"ಎಂದ ಹೃದಯ ಹೌದೆಂಬಂತೆ ತಲೆ ಆಡಿಸಿದಳು.
"ಕಾಲೇಜ್ ಗೆ ಮೊದಲ ಬಾರಿ ಬಂದಿದ್ಯಾ ಈ ಸೀನಿಯರ್ಸ್ಗಳ ಹತ್ತಿರ ರ್ಯಾಗ್ ಮಾಡಿಸಿಕೊಳ್ಳದಿದ್ದರೆ ಹೆಂಗೆ...."ಎಂದವ ಅನುವಿನ ಕಡೆ ನೋಡಿದ ಅವಳು ಕೊಂಕಾಗಿ ನಗುತ್ತಾ ತನ್ನ ಕೈಯಲ್ಲಿದ್ದ ರೋಸ್ ಅನ್ನು ಅವಳ ಕೈಗೆ ನೀಡಿದವಳು"ಅಲ್ಲಿ ನೋಡು ಒಂದು ಗುಂಪು ಇದೆ ಅವರೆಲ್ಲರ ಮಧ್ಯೆ ಒಬ್ಬ ಬೈಕ್ ಮೇಲೆ ಮಲಗಿದಾನೆ ಅವ್ನಿಗೆ ಐ ಲವ್ ಯು...ಅಂತ ಹೇಳು..."ಎಂದಳು ಹೃದಯ ಉಗುಳು ನುಂಗಿ"ಅನು....ಅದು....ನಾನು ಹೇಗೆ..."ಎಂದಾಗ ಅನು ಅವಳ ಮಾತನ್ನು ತಡೆದು "ನೋಡು ಈಗ ನಾನು ಹೇಳೋದು ಮಾಡಿಲ್ಲಾ ಅಂದ್ರೆ ಆಮೇಲೆ ನೀನು ಈ ಸೀನಿಯರ್ಸ್ ಕೆಂಗಣ್ಣಿಗೆ ಗುರಿಯಾಗ್ತೀಯಾ....ನನ್ಗೂ ಹೀಗೆ ಮಾಡಿದ್ರೂ ನಾನು ಪ್ರಪೋಸ್ ಮಾಡಿದಿನೀ ಜಸ್ಟ್ ಫಾರ್ ಫನ್...."ಅಷ್ಟೆ ಎಂದು ಧೈರ್ಯತುಂಬಿದಾಗ ಅವಳು ಹೊರಟಳು.
"ಹೇಯ್ ಅನು ನಿನ್ಗೆ ಏನಾದ್ರೂ ತಲೆ ಕೆಟ್ಟಿದ್ಯಾ ಹೋಗಿ ಹೋಗಿ ಅವ್ನಿಗೆ ಪ್ರಪೋಸ್ ಮಾಡೋಕೆ ಹೇಳಿದ್ಯಾ....ಇವತ್ತು ಅವ್ಳ ಕತೆ ಅಷ್ಟೆ....ಈ ಕಾಲೇಜು ಬಿಟ್ಟು ಹೋಗ್ಬೇಕಾಗ್ಬೋದು ಅವ್ಳು "ಎಂದ ಒಬ್ಬ.ಅನು ನಗುತ್ತಾ " ಇದೆ ತಾನೆ ನನ್ಗೂ ಬೇಕಾಗಿರೋದು..."ಎಂದಾಗ ಎಲ್ಲರೂ ಹೃದಯ ಹೋಗುವುದನ್ನೆ ನೋಡುತ್ತಾ ನಿಂತರು ಮುಂದೇನಾಗವುದೋ ಎಂದು.
(ಮುಂದುವರೆಯುವುದೂ.....)