ಮರಳಿ ಮನಸ್ಸಾಗಿದೆ ೨
ಮರಳಿ ಮನಸ್ಸಾಗಿದೆ ೨
"ಹೃದಯ "ಮುಂದೆ ಹೋಗುತ್ತಾ ಇದ್ದಂತೆ ಎಲ್ಲರ ಎದೆಬಡಿತ ಹೆಚ್ಚಾಗುತ್ತಾ ಇತ್ತು.
"ಏಯ್ ಅನು ಪಾಪ ಕಣೆ.....ಹಿಂದೆ ಬರೋಕೆ ಹೇಳೆ ಮೊದಲೆ ಹೆದರಿಕೋಂಡಿದಾಳೆ..."ಎಂದ ಅವಳ ಸ್ನೇಹಿತ ಅಭಿ ಅವನ ಜೊತೆ ಸೇರಿ ಉಳಿದವರೆಲ್ಲರೂ "ಹೌದು ಕಣೆ ಬರೋಕೆ ಹೇಳು..."ಎಂದರು
"ಸರಿ ನಿಮ್ಗೆ ಅವಳನ್ನು ನೋಡಿದ್ರೆ ಪಾಪ ಅನ್ಸುತ್ತೆ ಅಲ್ವಾ ಅಲ್ಲಿಂದ ನೀವೆ ಹೋಗಿ ಅವ್ಳನ್ನಾ ಕರ್ಕೋಂಡು ಬನ್ನಿ..."ಎಂದಳು ಅನು.
"ಹೇಯ್ ನಾವಾ!!!! ನಾವಂತೂ ಹೋಗಲ್ಲಪ್ಪಾ...."ಎಂದು ಭಯದಿಂದ ಎಲ್ಲರೂ ಅಲ್ಲೆ ಕುಳಿತರು.
"ಸರಿ ಹಾಗಾದ್ರೆ ಮುಂದೆ ಏನಾಗುತ್ತೇ ನೀವುಗಳೆ ನೋಡಿ..."ಎಂದ ಅನು ಕೈಕಟ್ಟಿ ನೋಡುತ್ತಾ ನಿಂತಳು.
ಹೃದಯ ಭಯದಿಂದಲೆ ಒಂದೊಂದೆ ಹೆಜ್ಜೆಯನ್ನಿಡುತ್ತಾ ಆ ಗುಂಪಿನ ಮುಂದೆ ನಿಂತವಳು "ಎಕ್ಸ್ ಕ್ಯೂಸ್ ಮಿ...."ಎಂದಳು ಮೆಲುವಾಗಿ.
ಬೈಕಿಗೆ ಸುತ್ತುವರಿದಿದ್ದ ಎಲ್ಲರೂ ಸರಿದು ನಿಂತರು ಹೃದಯ ಬೈಕಿನ ಕಡೆ ನೋಡಿದಳು ಮಲಗಿರುವ ವ್ಯಕ್ತಿಯ ಮುಖ ಕಾಣಲಿಲ್ಲಾ ಬದಲಾಗಿ ಸಿಗರೇಟಿನ ಹೊಗೆ ಹೋಗುತ್ತಿರುವುದು ಕಾಣಿಸಿತು.
ಆ ಗುಂಪಿನಲ್ಲಿದ್ದವನೊಬ್ಬ "ಏನು...."ಎಂದ.
ಹೃದಯ ಉಗುಳು ನುಂಗಿದವಳು " ನಾನು ಅವರ ಹತ್ರ ಮಾತನಾಡ್ಬೇಕಿತ್ತು....."ಎಂದು ಬೈಕಿನ ಕಡೆ ತೋರಿಸಿದಾಗ ಎಲ್ಲರೂ ಆಶ್ಚರ್ಯದಿಂದ ಅವಳ ಕಡೆಯೆ ನೋಡಿದರು.
ಬೈಕಿನ ಮೇಲೆ ಮಲಗಿದ್ದವನಿಗೆ ಅವಳ ಮಾತು ಕೇಳಿಸಿ ಎದ್ದು ಕುಳಿತನು ಅವನನ್ನು ನೋಡಿದ ಕೂಡಲೆ ಭಯವಾಯಿತವಳಿಗೆ.
ಒಳ್ಳೆಯ ಕಟ್ಟುಮಸ್ತಾದ ಬಾಡಿ ಮುಖದಲ್ಲಿ ಆಗ ತಾನೆ ಬೆಳೆಯುತಿದ್ದ ಕುರುಚಲು ಗಡ್ಡ ಕೆಂಪಗಾಗಿದ್ದ ಕಣ್ಣುಗಳು ಗುಳಿ ಕೆನ್ನೆ ಅವನನ್ನು ನೋಡಿದರೆ ಕಾಲೇಜು ಹುಡುಗನಂತೆ ಕಾಣುತ್ತಿರಲಿಲ್ಲಾ ಪುಡಿ ರೌಡಿಯಂತೆ ಕಾಣುತಿದ್ದ ಅವನ ಮುಖದ ಮೇಲಿರುವ ಗಂಭೀರತೆಯೆ ಅವಳನ್ನು ಭಯಗೊಳಿಸಿತ್ತು.
ಆ ರೌಡಿ ಎಲ್ಲೋ ನೋಡುತ್ತಾ"ಏನೂ...."ಎಂದ ಅವನ ಕಂಚಿನ ಕಂಠಕ್ಕೆ ಹೃದಯಳ ಕೈ ಕಾಲು ನಡುಗಲಾರಂಭಿಸಿತು ಕಣ್ಣು ಮುಚ್ಚಿದವಳು ತನ್ನ ಕೈಯಲ್ಲಿದ್ದ ರೋಸ್ ಅವನ ಮುಂದೆ ಹಿಡಿದು "ಐ ಲವ್ ಯು...."ಎಂದು ಬಿಟ್ಟಿದ್ದಳು ಇಡೀ ಕಾಲೇಜ್ ಅವರನ್ನು ನೋಡುತ್ತಾ ನಿಂತಿತ್ತು. ಅವನು ಕೋಪದಿಂದ ಬೈಕ್ನಿಂದ ಇಳಿದವನೆ ಅವಳ ಕಪಾಳಕ್ಕೆ ಬಾರಿಸಿದ್ದ ಅವನು ಹೊಡೆದ ರಭಸಕ್ಕೆ ಅವಳು ಕೆಳಗೆ ಬಿದ್ದಿದ್ದಳು ಜೊತೆಗೆ ತುಟಿ ಸೀಳಿ ರಕ್ತ ಬರತೊಡಗಿತ್ತು.
"ನನ್ಗೆ ಐ ಲವ್ ಯು ಹೇಳೋವಸ್ಟು ಧೈರ್ಯನಾ ನಾಳೆಯಿಂದ ಈ
ಕಾಲೇಜಲ್ಲಿ ನೀನು ಕಾಣಿಸಿಕೋಂಡ್ರೆ ಹುಟ್ಲಿಲ್ಲಾ ಅನಿಸಿಬಿಡ್ತಿನಿ..."ಎಂದವನೆ ತನ್ನ ಗೆಳೆಯರ ಕಡೆ ನೋಡಿ"ಬನ್ನಿ ಹೋಗೋಣಾ..."ಎಂದು ಬೈಕನ್ನೇರಿ ಹೋಗೆಬಿಟ್ಟಿದ್ದ.
ಕೆಳಗೆ ಬಿದ್ದಿದ್ದ ಹೃದಯಳ ಕೈಯನ್ನು ಹಿಡಿದು ಯಾರೋ ಎಬ್ಬಿಸಿದರು.ಹೃದಯ ಅವಳ ಕಡೆ ನೋಡಿದಳು ಅವಳು ನಗುತ್ತಾ"ನನ್ನ ಹೆಸರು ನೇಹಾ ನಿನ್ನ ಬ್ಯಾಚೇ....."ಎಂದು ಅವಳ ತುಟಿಯ ಕಡೆ ನೋಡಿ"ತುಂಬಾ ನೋವಾಯ್ತಾ...??"ಎಂದು ಕೇಳಿದಳು ಹೃದಯ ಇಲ್ಲಾ ಎನ್ನುವಂತೆ ತಲೆ ಆಡಿಸಿದಳು.
"ನೀನು ಹೋಗಿ ಹೋಗಿ ಅವ್ನಿಗೆ ಯಾಕೆ ಪ್ರಪೋಸ್ ಮಾಡ್ದೆ...."
"ಸೀನಿಯರ್ಸ್ ಹೇಳಿದ್ದು...."ಎಂದಳು ತಲೆ ತಗ್ಗಿಸಿ.
"ರ್ಯಾಗಿಂಗಾ!!!!...ಅದು ಅವ್ನಿಗೆ ಪ್ರಪೋಸ್ ಮಾಡೋಕೆ ಹೇಳಿದಾರೆ ನಿನ್ಗೆ ಅವ್ನ ಬಗ್ಗೆ ಗೊತ್ತಿಲ್ಲಾ ಅನ್ಸುತ್ತೆ ಅಲ್ವಾ....."ಎಂದಾಗ ಹೃದಯ ಹೌದೆಂಬಂತೆ ತಲೆ ಆಡಿಸಿದಳು.
"ಅವ್ನ ನಿಜವಾದ ಹೆಸರು "ಮೌರ್ಯ"....ಒಂಥರಾ ರೌಡಿ ಅವ್ನು ಹಣ ಕೊಟ್ರೆ ಯಾವ ಕೆಲಸ ಬೇಕಾದ್ರೂ ಮಾಡ್ತಾನೆ ಆದ್ರೂ ಕಾಲೇಜಲ್ಲಿ ಅವ್ನೇ ಟಾಪರ್.......ಬೇರೆಯವರ ತರ ನಕಲು ಮಾಡಲ್ಲಾ.....ಕ್ಲಾಸ್ಗಂತು ಹೋಗೋದೆ ಇಲ್ಲಾ ಎಕ್ಸಾಮ್ಗೆ ಬರ್ತಾನೆ ಅಟೆಂಡ್ ಮಾಡ್ತಾನೆ ಹೋಗ್ತಾನೆ ಇಲ್ಲಿ ಯಾರು ಅವ್ನನ್ನಾ ಕೇಳಲ್ಲಾ......ಈ ಕಾಲೇಜ್ ಗೆ ಇವ್ನೆ ಲಕ್ಷ ಲಕ್ಷ ಡೊನೇಷನ್ ಕೊಡೋದ್ರಿಂದಾ ಯಾರು ಮಾತಾಡಲ್ಲಾ......ಈ ಪ್ರೀತಿ ಪ್ರೇಮ ಅಂದ್ರೆ ಆಗೋದೆ ಇಲ್ಲಾ ಅವ್ನಿಗೆ ಇದನ್ನಾ ಹೇಳಿದ್ದು ನನ್ನ ಅಕ್ಕ.....ಅವ್ನು ಅವ್ಳ ಕ್ಲಾಸ್ ಮೇಟ್ ಮೊದಲೆ ನನ್ಗೆ ಹೇಳಿದ್ಲು..."ಎಂದು ಮಾತು ನಿಲ್ಲಿಸಿದ್ದಳು