STORYMIRROR

💔💕 💗💗💗💗💗

Romance Thriller

4  

💔💕 💗💗💗💗💗

Romance Thriller

ಮರಳಿ ಮನಸ್ಸಾಗಿದೆ ೩

ಮರಳಿ ಮನಸ್ಸಾಗಿದೆ ೩

3 mins
358

"ಪಾಪ ಕಣೆ ಅನು ಸುಮ್ನೆ ಅವನ ಕೋಪಕ್ಕೆ ಗುರಿಯಾದ್ಲೂ......ಇನ್ನೂ ಅವಳ ಕಾಲೇಜ್ ಆಸೆ ಇಲ್ಲಿಗೆ ಬಿಡ್ಬೇಕಲ್ವಾ....."ಎಂದ ಅಭಿ.


"ಇಷ್ಟೆಲ್ಲಾ ಮಾಡಿದ್ದು ಅದಕ್ಕೆ ತಾನೆ ಬನ್ನಿ....ಹೋಗೋಣಾ ನಾಳೆಯಿಂದ ಈ ಪೀಡೆಯಿಂದ ಮುಕ್ತಿ ಸಿಕ್ತು...."ಎಂದವಳು ತನ್ನ ಕ್ಲಾಸಿನತ್ತ ನಡೆದಳು.


ಮೌರ್ಯ ತನ್ನ ಸ್ನೇಹಿತರ ಜೊತೆಗೂಡಿ ಕ್ಯಾಂಟೀನ್ಅಲ್ಲಿ ಕುಳಿತಿದ್ದ.ಮೌರ್ಯನಿಗೆ ಒಟ್ಟು ಐದು ಮಂದಿ ಸ್ನೇಹಿತರಿದ್ದು ಕಾರ್ತಿಕ್,ಆದಿ,ವಂಶಿ,ಲೋಹಿತ್,ಕೀರ್ತನಾ. ಅವರಲ್ಲೊಬ್ಬನಾದ ಕಾರ್ತಿಕ್  "ಮೌರ್ಯ ಆ ಹುಡುಗಿಗೆ ಎಷ್ಟು ಧೈರ್ಯ ಅಲ್ವಾ ನಿನ್ಗೆ ಪ್ರಪೋಸ್ ಮಾಡಿದ್ಲೂ...."ಎಂದ .


"ಧೈರ್ಯನೂ ಇಲ್ಲಾ ಏನೂ ಇಲ್ಲಾ ಭಯದಿಂದ ನಡುಗ್ತಾ ಇರೋದನ್ನಾ ನಾನೆ ನೋಡಿದಿನಿ...."ಎಂದಳು ಕೀರ್ತನಾ.


"ಅದನ್ನಾ ನಾನು ಗಮನಿಸಿದಿನಿ ಆದ್ರೂ ಅವ್ಳಿಗೆ ನಮ್ಮ ಮೌರ್ಯ ಮೇಲೆ ಲವ್ ಆಗಿದೆ ಅದೇ ಖುಷಿ ನನ್ಗೆ ಈ ಕಾಲೇಜಲ್ಲಿ ಎಲ್ಲರೂ ಏನೇನೋ ಕೇಳಿದಾರೆ ಆದ್ರೆ ಇವ್ಳು ಮಾತ್ರ ಈ ತರ ಮಾಡಿದ್ದು...."ಎಂದ ಆದಿ.


"ಸಾಕು ನಿಲ್ಲಿಸ್ತೀರಾ ಎಲ್ಲರೂ ನನ್ಗೆ ಈ ಲವ್ ಅಲ್ಲಿ ನಂಬಿಕೆ ಇಲ್ಲಾ ಅನ್ನೋದು ಗೊತ್ತಿಲ್ವಾ.....ಅವಳು ಪ್ರಪೋಸ್ ಮಾಡಿದ್ದನ್ನು ನೆನೆಸಿಕೊಂಡ್ರೆ ರಕ್ತ ಕುದಿಯುತ್ತೆ ನನ್ಗೆ...."ಎಂದ ಮೌರ್ಯ ಕೋಪದಿಂದ ಹಲ್ಲು ಕಚ್ಚುತ್ತಾ.


ಕೀರ್ತನಾ ಅವನ ಕಡೆ ನೋಡಿ "ಕೂಲ್ ಆದ್ರೆ ನೀನು ತುಂಬಾ ರೂಡ್ ಆಗಿ ನಡ್ಕೋಂಡೆ ಅಂತ ನನ್ಗನಿಸ್ತು ಆ ಹುಡುಗಿ ತುಂಬಾನೆ ಇನೋಸೆಂಟ್ ತರ ಕಾಣ್ಸಿದ್ಲೂ ನನ್ಗೆ....ಆಕರ್ಷಣೆ ಸಹಜ ಅಲ್ವಾ ಹಾಗೆ ಹೇಳಿರ್ತಾಳೆ ಹೋಗ್ತಾ ಎಲ್ಲಾನೂ ಸರಿ ಹೋಗುತ್ತೆ ನೀನು ಕೊಟ್ಟಿರೊ ಟ್ರೀಟ್ಮೆಂಟ್ಗೆ ಅವಳು ಇನ್ಮುಂದೆ ಕಾಲೇಜ್ ಗೆ ಬರೋದು ಡೌಟ್ ಅನ್ಸುತ್ತೆ...ಸೋ ಕೋಪ ಮಾಡ್ಕೊಳೋ ಅವಶ್ಯಕತೆ ಇಲ್ಲಾ......"ಎಂದು ಸಮಾಧಾನ ಪಡಿಸಿದಳು.


"ಏನ್ ಬೇಕಾದ್ರೂ ಆಗ್ಲಿ ಇವತ್ತು ನನ್ಗೆ ಕೀರ್ತಿ ಹುಡುಗಿ ತರ ಕಾಣಿಸ್ತಾ ಇದಾಳೆ....."ಎಂದ ವಂಶಿ ಕೀರ್ತನಾ ಅವನ ಕಡೆ ನೋಡಿ  ಕೋಪದಿಂದ"ನಾನು ಬಾಬ್ ಕಟ್ ಹೇರ್ ಮತ್ತು ಶರ್ಟ್ ಮತ್ತು ಪ್ಯಾಂಟ್ ಹಾಕಿದ ತಕ್ಷಣ ಹುಡುಗ ಆಗಿ ಬಿಡ್ತೀನಿ ಹುಡುಗಿಯರಿಗಿರೋ ಭಾವನೆಗಳು ನನ್ಗೂ ಇದೆ ಅನ್ನೋದನ್ನಾ ಮರೀಬೇಡ...."ಎಂದಳು ಅವಳ ಮಾತಿನಲ್ಲಿ ಕೋಪಕ್ಕಿಂತ ಜಾಸ್ತಿ ನೋವೆ ತುಂಬಿಕೊಂಡಿತ್ತು ಅವಳ ಬಾಬ್ ಕಟ್ ಕೂದಲಿಗೆ ಮತ್ತು ಹುಡುಗರ ತರಾನೆ ಧರಿಸೋ ಬಟ್ಟೆಗೆ ಹುಡುಗಿಯರು ಯಾರು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲಾ ಹುಡುಗರಂತೂ ಅವಳ ಕಡೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲಾ ಆಗ ಅವಳನ್ನು ಸ್ನೇಹಿತೆಯನ್ನಾಗಿ ಮಾಡಿಕೊಂಡಿದ್ದ ಮೌರ್ಯ.ಮೌರ್ಯ ಹೇಳಿದ್ದರಿಂದ ಉಳಿದ ನಾಲ್ವರು ಅವಳನ್ನು ಒಪ್ಪಿಕೊಂಡಿದ್ದರು.


ಮೌರ್ಯ ಅವಳ ಕಡೆ ನೋಡಿ"ವಂಶಿ ಬಗ್ಗೆ ನಿನ್ಗೆ ಗೊತ್ತು ತಾನೆ ಮತ್ಯಾಕೆ ಅವನ ಮಾತಿಗೆ ಬೇಸರ ಪಟ್ಟುಕೊಳ್ತೀಯಾ ಸುಮ್ನೆ ಯಾರ್ ಯಾರಿಗೋಸ್ಕರನೋ ನಾವೆಲ್ಲಾ ಜಗಳ ಮಾಡಿದ್ರೆ ನಮ್ಮ ಸ್ನೇಹಕ್ಕೆ ಏನ್ ಬೆಲೆ...."ಎಂದಾಗ ಕೀರ್ತಿನಾಳು ಸುಮ್ಮನಾದಳು.


ಹೃದಯ ಮತ್ತು ನೇಹಾ ಇಬ್ಬರು ಬಿ ಕಾಮ್ ಅನ್ನು ಆರಿಸಿಕೊಂಡಿದ್ದರಿಂದ ಇಬ್ಬರು ಸೇರಿ ತಮ್ಮ ತರಗತಿಯಲ್ಲಿ ಹೋಗಿ ಕುಳಿತರು ಕಾಲೇಜಿನ ಮೊದಲ ದಿನವಾಗಿದ್ದರಿಂದ ತರಗತಿಗಳೇನೂ ನಡೆಯಲಿಲ್ಲ.


ಹೃದಯ ಮಾತ್ರ ಮೌನವಾಗಿದ್ದಳು ಅವಳನ್ನು ಗಮನಿಸಿದ ನೇಹಾ"ಯಾಕ್ ಏನಾಯ್ತು....."ಎಂದಳು.


"ಆ ರೌಡಿ ಇನ್ಮೇಲೆ ಕಾಲೇಜ್ಗೆ ಬರ್ಬಾರ್ದು ಅಂದಿದಾನೆ ಏನ್ ಮಾಡೋದು....."ಎಂದಳು ಹೃದಯ.


"ಹೌದು ಅಲ್ವಾ ಅವ್ನು ಬೇರೆ ಕಾಲೇಜಿನ ಮುಂಭಾಗದಲ್ಲೆ ಗುಂಪು ಕಟ್ಟಿಕೊಂಡು ನಿಂತಿರ್ತಾನೆ ಅಲ್ಲಿಂದ ಅಂತು ಬರೋಕೆ ಆಗಲ್ಲಾ....ನೋಡೋಣಾ ಸಂಜೆ ಹೋಗೋವಾಗ ಕಾಲೇಜ್ ಸುತ್ತಲೂ ನೋಡ್ಕೋಂಡು ಹೋಗೋಣಾ ಬೇರೆ ಯಾವ್ದಾದ್ರೂ ಎಂಟ್ರೆನ್ಸ್ ಇದೀಯಾ ಅಂತ ಓಕೆ...."ಎಂದು ಧೈರ್ಯ ತುಂಬಿದಳು.


ಸಂಜೆಯ ಹೊತ್ತಿಗೆ ಇಬ್ಬರೂ ಸೇರಿ ಕಾಲೇಜ್ ಸುತ್ತಲೂ ಹುಡುಕಿದವರೂ ಕೊನೆಗೆ ನಿಂತಿದ್ದು ಲೈಬ್ರರಿಯ ಮುಂಭಾಗದಲ್ಲಿ ನೇಹಾ ತನ್ನ ಉಸಿರನ್ನೊಮ್ಮೇ ಹೊರದಬ್ಬಿದವಳು "ನೋಡು ನಾಳೆಯಿಂದ ನೀನು ಇಲ್ಲಿಂದ ಬರ್ಬೋದು...."ಎಂದಳು ನಗುತ್ತಾ ಅವಳ ಮಾತಿಗೆ ಹೃದಯ ಪ್ರತಿಯಾಗಿ ನಕ್ಕವಳು ಅನು ವನ್ನು ಹುಡುಕುತ್ತಾ ಬಂದಳು ಅಷ್ಟರಲ್ಲಿ ಅವಳು ಮನೆಗೆ ಹೊರಟಾಗಿತ್ತು.ನೇಹಾ ಅವಳ ಕಡೆ ನೋಡಿ "ಬಾ ನಾನು ನಿನ್ನ ನನ್ನ ಕಾರಲ್ಲಿ ಮನೆಗೆ ಡ್ರಾಪ್ ಮಾಡ್ತಿನಿ...."ಎಂದಾಗ ಹೃದಯ ಬೇರೆ ದಾರಿಯಿಲ್ಲದೆ ಅವಳ ಜೊತೆ ಹೊರಟಳು.


ಹೃದಯ ಮನೆಯೊಳಗೆ ಬರುತ್ತಾ ಇದ್ದಂತೆ ಟಿವಿ ನೋಡುತ್ತಾ ಕುಳಿತಿದ್ದ ಅನು "ನನ್ಗೆ ಟೀ ಮಾಡ್ಕೋ ಬಾ...."ಎಂದಳು ಹೃದಯ ತಲೆ ಆಡಿಸಿದ ಅಡುಗೆ ಮನೆಯೊಳಗಡೆ ಹೊಕ್ಕವಳು ಐದೆ ನಿಮಿಷದಲ್ಲಿ ಟೀ ತಯಾರಿಸಿ ಅವಳ ಮುಂದೆ ಹಿಡಿದಳು.


ಅನು ಕಾಫಿ ಹೀರುತ್ತಾ ವ್ಯಂಗ್ಯವಾಗಿ ನಕ್ಕವಳು"ಏನೋ ತುಟಿಯ ಹತ್ರ ಗಾಯ ಆಗಿದೆ...."ಎಂದಳು.ಹೃದಯ ನಡೆದ ವಿಷಯವೆಲ್ಲಾ ತಿಳಿಸಿದಾಗ ತನಗೆ ಎಲ್ಲಾ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿದ ಅನು"ಐ ಯಾಮ್ ಸ್ವಾರಿ ಅವ್ನು ಹೀಗೆ ಮಾಡ್ತಾನೆ ಅಂತ ಅನ್ಕೋಂಡಿರ್ಲಿಲ್ಲಾ ಅವ್ನು ಪಕ್ಕಾ ರೌಡಿ ಇನ್ಮೇಲಿಂದಾ ಕಾಲೇಜ್ಗೆ ಹೋಗ್ಬೇಡಾ ಒಂದ್ವೇಳೆ ಅವ್ನು ನಿನ್ನ ನೋಡಿದ್ರೆ ಜೀವ ಸಹಿತ ಬಿಡಲ್ಲಾ...."ಎಂದು ಹೆದರಿಸಲು ಪ್ರಯತ್ನಿಸಿದಳು.


"ಇಲ್ಲಾ ಅಕ್ಕ ನಾನು ಕಾಲೇಜ್ಗೆ ಹೋಗ್ತಿನಿ ಏನೇ ಆದ್ರೂ ನಾನು ಕಾಲೇಜು ಬಿಡಲ್ಲಾ..."ಎಂದು ದೃಢವಾಗಿ ಹೇಳಿದಾಗ ಟಿ ಕಪ್ ಅನ್ನು ಅವಳ ಕೈಗೆ ಕುಕ್ಕಿದವಳು "ಏನಾದ್ರೂ ಮಾಡ್ಕೋ ಆದ್ರೆ ಏನಾದ್ರೂ ತೊಂದರೆ ಆದ್ರೆ ನನ್ನ ಹತ್ರ ಬರ್ಬೇಡ....."ಎಂದು ಅಲ್ಲಿಂದ ಹೊರಟಳು.


ರಾತ್ರಿ ಕೆಲಸ ಮುಗಿಸಿ ಬಂದ ರಾಮ್ ರಾವ್ ಅವರು ಹೃದಯ ಕಡೆ ನೋಡಿ"ಇವತ್ತು ಕಾಲೇಜ್ ಫಸ್ಟ್ ಡೇ ಹೇಗಿತ್ತು ಮಗ್ಳೆ..."ಎಂದರು.ಅನು ನಗುತ್ತಾ"ಇವತ್ತು ತುಂಬಾನೆ ಸೂಪರ್ ಆಗಿತ್ತು ಅನ್ಸುತ್ತೆ ಅಲ್ವಾ ಹೃದಯ....."ಎಂದಳು ವ್ಯಂಗ್ಯವಾಗಿ.


ಹೃದಯ ಏನೂ ಮಾತನಾಡದೆ ಮುಖದ ಮೇಲೆ ನಗುತಂದುಕೊಂಡವಳು ತಲೆ ಆಡಿಸಿದಳು.ಆ ರಾತ್ರಿ ಹೃದಯಗೆ ನಿದ್ದೆಯೆ ಬಂದಿರಲಿಲ್ಲಾ ಮೌರ್ಯ ಹೊಡೆದ ಏಟುಗಳು ಮತ್ತೆ ಮತ್ತೆ ನೆನಪಾಗಿ ಬೆಚ್ಟಿಬೀಳಿಸಿತ್ತು.


ನೇಹಾ ಹೇಳಿದಂತೆ ಹೃದಯ ಕಾಲೇಜಿನ ಹಿಂಭಾಗದದಿಂದ ಕಾಲೇಜೊಳಕ್ಕೆ ಹೋಗುತ್ತಿದ್ದಳು ಮೊದ ಮೊದಲೂ ಅನು ಹೃದಯಳ ಜೊತೆಯೆ ಹೋಗುತ್ತಿದ್ದರು ದಿನಕಳೆದಂತೆ ಅವಳನ್ನೂ ಬಿಟ್ಟು ಹೋಗತೊಡಗಿದಳು ನಂತರ ನೇಹಾಳೆ ಅವಳನ್ನು ತನ್ನ ಜೊತೆ ಕರೆದುಕೊಂಡು ಹೋಗಿ ಬಿಡುತ್ತಿದ್ದಳು ಆದರೆ ಎಷ್ಟು ದಿವಸ ಅಂತ ಮೌರ್ಯನ ಕಣ್ಣಿಗೆ ಬೀಳದಿರಲು ಸಾಧ್ಯ ಅಲ್ಲವೆ ಅವನೂ ಇವಳನ್ನು ನೋಡೋ ದಿನ ಹತ್ತಿರ ಬಂದಿತ್ತು ಆದರೆ ಹೇಗೆ ಎಂಬುದು ಇಬ್ಬಾರಿಗೂ ತಿಳಿದಿರಲಿಲ್ಲಾ.

(ಮುಂದುವರೆಯುವುದೂ.....)



Rate this content
Log in

Similar kannada story from Romance