Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಮಗಳು ತಾಯಿಯಾದಾಗ

ಮಗಳು ತಾಯಿಯಾದಾಗ

1 min
5


ಹೆರಿಗೆಯ ನೋವು ಕಾಣಿಸಿಕೊಂಡಾಗ, ಮಗಳನ್ನು ಕೂಡಲೇ ಹಾಸ್ಪಿಟಲ್ ಗೆ ಕರೆದುಕೊಂಡು ಹೊರಟೆವು.
ಅಡ್ಮಿಷನ್ ಪ್ರೊಸೀಜರ್ ಗಳು ಮುಗಿದು, ಅವಳನ್ನು
ಲೇಬರ್ ವಾರ್ಡ್ ಗೆ ಕರೆದುಕೊಂಡು ಹೋಗುವಾಗ, ಅದೇನೋ ಭಯ, ಅದೇನೋ ಕಳವಳ, ಆತಂಕ.
ಯಾಕೋ ಗೊತ್ತಿಲ್ಲ. ಬಹುಶಃ ಅವಳು ಗರ್ಭಿಣಿ ಎಂದು ಗೊತ್ತಾದಾಗಲಿಂದ ಅದೇನೋ ಪ್ರಾಬ್ಲಂ ಅಂತ ಹೇಳುತ್ತಲೇ ಇದ್ದ ,ಅವಳನ್ನು ಚೆಕ್ ಅಪ್ ಮಾಡುತ್ತಿದ್ದ ವೈದ್ಯರ ಮಾತುಗಳೂ ಕಾರಣವಿರಬಹುದು.
ಹೆರಿಗೆಗಾಗಿ ತವರಿಗೆ ಮಗಳನ್ನು ಕರೆದುಕೊಂಡು ಬಂದಾಗ, ಅವಳನ್ನು ಮಗುವಿನ ಜೊತೆ ಅವಳ ಗಂಡನ ಮನೆಗೆ ಸೇರಿಸುವ ತನಕ, ಹೆತ್ತ ತಾಯಿಗೆ ಕಳವಳ ಇದ್ದದ್ದೇ. ಅದರಲ್ಲೂ ನನ್ನ ಮಗಳದು ಅರ್ಲಿ ಪ್ರೆಗನೆನ್ಸಿಯಿಂದ ಅದೇನೋ ನೂರೆಂಟು ಸ್ಕಾನಿಂಗ್ ,ಅದೂ ಇದೂ ಅಂತಲೇ ಹೇಳುತ್ತಿದ್ದರಿಂದ
ನನಗಂತೂ ತುಂಬಾ ಆತಂಕವಿತ್ತು. ಸುಸೂತ್ರವಾಗಿ ಹೆರಿಗೆಯಾದರೆ ಸಾಕೆಂದು ಎಲ್ಲಾ ದೇವರಲ್ಲೂ ಬೇಡಿಕೊಂಡಿದ್ದೆ.
ಅಂತೂ ಇಂತೂ ಲೇಬರ್ ವಾರ್ಡ್ ನಿಂದ ಮಗುವಿನ ಅಳು ಕೇಳಿದಾಗ, ಅದೆಷ್ಟೋ ಸಮಾಧಾನವೆನಿಸಿತು. ಮುದ್ದಾದ ಹೆಣ್ಣು ಮಗುವನ್ನು ತಂದು ನಮ್ಮ ಮುಂದೆ ತೋರಿಸಿದಾಗ ಎಲ್ಲರ ಆತಂಕ ಕಳೆದು, ಸಂತೋಷ ಹರಿದಾಡಿತು.
ಆದರೆ ನನಗೆ ತಾಯಿಯಾಗಿರುವ ನನ್ನ ಮಗಳನ್ನು ನೋಡುವ ತನಕ ಮನಸ್ಸಿಗೆ ಸಮಾಧಾನವಿರಲಿಲ್ಲ.
ಮಗುವನ್ನು ತೋರಿಸಿದ ನಂತರ ಒಳಗಿನಿಂದ ಬಂದ ಡಾಕ್ಟರ್ "ಹೇಗಿದ್ದಾಳೆ ಮೊಮ್ಮಗಳು?" ಎಂದಾಗ ನಾನು "ನನ್ನ ಮಗಳು ಹೇಗಿದ್ದಾಳೆ ಡಾಕ್ಟರ್?" ಎಂದು ಕೇಳಿದೆ.
"ವಿ ಈಸ್ ಫೈನ್" ಅಂದುಬಿಟ್ಟು ಅವರು ಒಳಗೆ ಹೋದಾಗ, ನನ್ನ ಆತಂಕ ಕಳೆದು ಹೋಯಿತು.

ಮಗಳು ತಾಯಿಯಾದಾಗ, ತಾಯಿಯ ಪರಿಸ್ಥಿತಿ ಹೇಗಿರುತ್ತದೆ ? ಇಂದು ನನ್ನ ಅನುಭವ.ಇದೊಂದು ನನ್ನ ಜೀವನದ ಮರೆಯಲಾಗದ ಸಂತೋಷ.

ವಿಜಯಭಾರತೀ.ಎ.ಎಸ್.



Rate this content
Log in

Similar kannada story from Abstract