Vijaya Bharathi

Abstract Inspirational Others

4  

Vijaya Bharathi

Abstract Inspirational Others

ಕುಸುಮ

ಕುಸುಮ

2 mins
455


ನಾನ್ ಸ್ತಾಪ್ ನವೆಂಬರ್ ಆವೃತ್ತಿ 3


ದಿನ 12


ವಿಷಯ: ಸಂತೋಷ


ಕುಸುಮ 


ಮದುವೆಯಾದ ಮಗಳು ಪುಷ್ಪ, ಒಂದು ತಿಂಗಳಿನೊಳಗೇ ಸೂಟ್ ಕೇಸ್ನೊಂದಿಗೆ ಅಳುತ್ತಾ ತವರಿಗೆ ಒಬ್ಬಳೇ ವಾಪಸ್ ಬಂದಾಗ, ಅವಳ ಅಮ್ಮ ಕುಸುಮಳಿಗೆ ಆತಂಕವಾಯಿತು. ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿಯರು ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಎಲ್ಲಿ ಹೋದರೂ ಜೊತೆ ಜೊತೆಯಾಗಿ ಓಡಾಡುತ್ತಿರುವುದೇ ಒಳ್ಳೆಯ ದಾಂಪತ್ಯದ ಲಕ್ಷಣ. ಅಂತಹದರಲ್ಲಿ ಮದುವೆಯಾದ ಕೇವಲ ಒಂದೇ ತಿಂಗಳಿ ನಲ್ಲಿ ಮಗಳು ಹೀಗೆ ಒಬ್ಬಳೇ ಅದೂ ಕಣ್ಣೀರಿಡುತ್ತ ದೊಡ್ಡ ಸೂಟ್ ಕೇಸ್ ಹೊತ್ತುಕೊಂಡು ತವರಿಗೆ ಬಂದರೆ ಹೆತ್ತ ಕರುಳಿಗೆ ಹೇಗಾಗಬೇಡ? ಅದರೂ ಏನಾಯಿತೆಂದು ವಿಚಾರಿಸಿ ಅವಳಿಗೆ ಸೂಕ್ತವಾದ ಬುದ್ಧಿ ಮಾತು ಹೇಳಿಕಳುಹಿಸಬೇಕಾಗಿರುವುದು ತಂದೆ ತಾಯಿಯರ ಕರ್ತವ್ಯವೆಂದು ತಿಳಿದ ಕುಸುಮ, ಮಗಳನ್ನು ನಗುನಗುತ್ತಲೇ ಬರಮಾಡಿಕೊಂಡಳು. 


ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ತನ್ನ ಎರಡು ಮಕ್ಕಳನ್ನು ಬಹಳ ಕಷ್ಟಪಟ್ಟು ಬೆಳೆಸಿ,ದೊಡ್ಡವಳಾದ ಪುಷ್ಪಳಿಗೆ ಒಳ್ಳೆಯ ಕಡೆ ನೋಡಿ ಮದುವೆ ಮಾಡಿದ್ದಳು. ಮದುವೆಗೆ ಮುಂಚೆ ಎಲ್ಲಾ ವಿಷಯಗಳನ್ನು ವಿಚಾರಿಸಿಕೊಂಡೆ ಮುಂದುವರಿದಿದ್ದಳು. ಪುಷ್ಪ ಒಪ್ಪಿದ ಮೇಲೆಯೇ ಕುಸುಮ ಮಗಳ ಮದುವೆಗೆ ಏರ್ಪಾಡು ಮಾಡಿದ್ದು. ಆದರೆ ಈಗೇನಾಯಿತು? ಕುಸುಮಳಿಗೆ ಒಳಗೊಳಗೇ ಚಿಂತೆ ಕಾಡಿದರೂ ಹೊರಗೆ ತೋರಿಸಿಕೊಳ್ಳದೆ, ಮಗಳಿಗೆ ಊಟ ಉಪಚಾರಗಳನ್ನು ಮಾಡಿ, ಸಂತೋಷದಿಂದ ಅವಳ ಗಂಡನ ಮನೆಯವರನ್ನೆಲ್ಲಾ ವಿಚಾರಿಸಿದಳು. 

ಎಲ್ಲದಕ್ಕೂ ಉತ್ತರವನ್ನು ಕೊಟ್ಟ ಪುಷ್ಪ, ಕಡೆಗೆ 

"ನಾನು ಇನ್ನು ಮುಂದೆ ಅ ಮನೆಗೆ ಕಾಲಿಡುವುದಿಲ್ಲ " ಎಂದಾಗ, "ಈಗ ಸಧ್ಯಕ್ಕೆ ನಿನ್ನ ಮನಸ್ಸು ತಿಳಿಯಾಗುವ ತನಕ ಇರು. ಮುಂದೆ ನೋಡೊಣವಂತೆ" ಎಂದ ಕುಸುಮ ಸಧ್ಯಕ್ಕೆ ಆ ಮಾತನ್ನು ನಿಲ್ಲಿಸಿ ತನ್ನ ಕೆಲಸದ ಕಡೆ ಗಮನ ಕೊಟ್ಟಳು. 


ಮಗಳು ತವರಿಗೆ ಬಂದು ವಾರವಾದರೂ ,ಅಳಿಯ ಒಮ್ಮೆಯಾದರೂ ಮನೆ ಕಡೆ ಬರದೇ ಇದ್ದದ್ದನ್ನು ನೋಡಿದ ಕುಸುಮ, ಒಂದು ದಿನ ಮಗಳನ್ನು ನಿಧಾನವಾಗಿ ಗಂಡನ ಮನೆಯಲ್ಲಿ ನಡೆದ ವಿಚಾರಗಳನ್ನೆಲ್ಲ ಕೇಳುತ್ತಾ ಹೋದಳು. 

"ಅಮ್ಮ, ನೀನು ಸುಮ್ಮನೆ ನನಗೆ ಎಲ್ಲಾ ವಿ್ಷಯಗಳನ್ನೂ ಕೇಳುತ್ತಲೇ ಇರಬೇಡ. ನನಗೆ ಅ ಮನೆಯಲ್ಲಿ ಸಂತೋಷದಿಂದ ಇರಲು ಆಗುತ್ತಿಲ್ಲ. ನಾನು ಏನು ಕೇಳಿದರೂ ’ಆಮೇಲೆ ನೋಡೋಣ’ ಅಂತ ಹೇಳುವುದೊಂದು ಬಿಟ್ಟರೆ ನನ್ನ ಗಂಡನಿಗೆ ಏನೂ ಬೇರೆ ಗೊತ್ತಿಲ್ಲ. ಪಾಕೆಟ್ ಮನಿ ಅಂತ ಐನೂರು ರೂಪಯಿ ಕೊಟ್ಟರೆ ಸಾಕಾಗುತ್ತ? ಇನ್ನೇನಾದರೂ ಒಳ್ಳೆಯ ಅಪರೂಪದ ವಸ್ತುಗಳನ್ನು ಕೇಳಿದರೆ,v’ಅದು ತುಂಬಾ ಕಾಸ್ಟ್ಲಿ, ನನ್ನ ಬಳಿ ಅಷ್ಟೊಂದು ದುಡ್ಡಿಲ್ಲ ’ ಅಂತಾನೆ. ಶಿಮ್ಲ, ಡಾರ್ಜಲಿಂಗ್, ಮನಾಲಿ ಮುಂತಾದ ಕಡೆ ಟೂರ್ ಹೋಗೋಣ ಅಂದರೆ, ’ನಾನು ಅಲ್ಲಿಗೆಲ್ಲಾ ಕರೆದುಕೊಂಡು ಹೋಗುವಷ್ಟು ಸಾಹುಕಾರನಲ್ಲ’ ಅಂತ ಏನೋನೋ ಕಾರಣ ಹೇಳಿ, ಹತ್ತಿರದ ಊಟಿಗೆ ಕರೆದುಕೊಂಡು ಹೋಗಿ ಹನಿಮೂನ್ ಮುಗಿಸಿದ. 


ನೀನೇ ಹೇಳಮ್ಮ,ನಾನು ಏನು ಕೇಳಿದರೂ ಹೀಗೆ ಹೇಳುತ್ತ ಹೋದರೆ, ಅಲ್ಲಿ ನಾನು ಹೇಗೆ ಸಂತೋಷದಿಂದಿರಲು ಸಾಧ್ಯ?”

ಮಗಳು ಹೇಳಿದ ಎಲ್ಲಾ ವಿಷಯವನ್ನು ಕೇಳಿಸಿಕೊಂಡ ಕುಸುಮ ಮಗಳಿಗೆ ಸಾಂತ್ವನ ಹೇಳಿ ಸಮಾಧಾನ ಮಾಡಿದಳು.


"ನೋಡು ಪುಷ್ಪ, ನೀನು ನಿನ್ನ ಮೂಗಿನ ನೇರಕ್ಕೆ ಎಲ್ಲರನ್ನೂ ಅಳೆಯ ಬಾರದು. ಅಳಿಯಂದಿರು ಒಳ್ಳೆಯವರೇ. ಆದರೆ ಗಂಡಸರೆಲ್ಲಾ ಹೆಂಡತಿ ಕೇಳಿದಷ್ಟು ದುಡ್ಡು ಕೊಡುವುದಿಲ್ಲ. ಹಾಗಂತ ಅವರು ಕೆಟ್ಟವರಲ್ಲ, ಈ ಸಂತೋಷವೆನ್ನುವುದು ಭೌತಿಕ ವಸ್ತುಗಳಲ್ಲಾಗಲೀ, ಹೊರಗಡೆ ಸುತ್ತಾಡುವುದರಲ್ಲಾಗಲೀ ಇರುವಂತಹದ್ದಲ್ಲ. ಸಂತೋಷವೆನ್ನುವುದು ನಮ್ಮ ಮನಸ್ಸಿನಲ್ಲಿರುವ ಯೋಚನಾ ತರಂಗಗಳು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತ ಹೋಗುತ್ತದೆ. ಗಂಡ ಹೆಂಡತಿ ಎಲ್ಲಿ ಹೋಗಲಿ ಬಿಡಲಿ, ಮನೆಯಲ್ಲೇ ಇರಲಿ, ಸಂತೋಷವಾಗಿರುವುದು ಅವರವರ ಕೈಯಲ್ಲಿ ಇರುತ್ತದೆ. ಹೀಗಾಗಿ ನಿನ್ನ ಗಂಡ ನೀನು ಹೇಳಿದಷ್ಟು ದುಡ್ಡು ಕೊಡಲಿಲ್ಲವೆಂದೋ,ನೀನು ಕೇಳಿದ ಕಡೆ ಕರೆದುಕೊಂಡು ಹೋಗಲಿಲ್ಲವೆಂದೋಅವನು ನಿನಗೆ ಸಂತೋಷ ಕೊಡಲಿಲ್ಲವೆಂದು ಕೊಳ್ಳಬೇಡ. ಈಗ ತಾನೆ ಕೆಲಸಕ್ಕೆ ಸೇರಿರುವ ಅವನು ಎಸ್ಟಾಬ್ಲಿಷ್ ಆಗಲು ಸ್ವಲ್ಪ ಸಮಯ ಬೇಕು. ಆಮೇಲೆ ಅವನೇ ನಿನ್ನ ಎಲ್ಲ ಇಚ್ಚೆಗಳನ್ನೂ ಪೂರೈಸುತ್ತನೆ . ಸಂತೋಷವಾಗಿರಲು, ಯಾವುದೇ ಬೌತಿಕ ಪದಾರ್ಥಗಳು ಬೇಡ, ನೀವಿಬ್ಬರೂ ಪರಸ್ಪರ ಪ್ರೀತಿಯನ್ನು ಹಂಚಿಕೊಂಡು, ನಾನು ಎಂಬುದನ್ನು ಮರೆತು ನಾವು ಎಂದು ಒಂದಾದಾಗ ಸಂತೋಷ ತಾನೇ ತಾನಾಗಿ ಉಳಿಯುತ್ತದೆ. " 

ಪುಷ್ಪ ಅಮ್ಮನ ಮಾತುಗಳನ್ನೆ ಮೆಲುಕು ಹಕಿದಳು.


ಒಂದೆರಡು ವಾರಗಳು ಕಳೆದ ಬಳಿಕ, ಕುಸುಮ ಅಳಿಯ ಹಾಗೂ ಬೀಗರನ್ನು ಊಟಕ್ಕೆ ಕರೆದಳು. ಅಳಿಯನೊಂದಿಗೆ ಮಾತನಾಡಿ, ಮಗಳಿಗೆ ಹಿತವಚನಗಳನ್ನು ಹೇಳಿ ಗಂಡನ ಮನೆಗೆ ಕಳುಹಿಸಿಕೊಟ್ಟಳು.


Rate this content
Log in

Similar kannada story from Abstract