ಕೃಷ್ಣ ಸುಂದರಿ
ಕೃಷ್ಣ ಸುಂದರಿ
ಅನಂತ್ ಮತ್ತು ಪದ್ಮಾವತಿ ದಂಪತಿಗೆ ಬಿಂದು ಮತ್ತು ಸಿಂದು ಎಂಬ ಎರಡು ಹೆಣ್ಣು ಮಕ್ಕಳು.
ಅವಳಿ ಜವಳಿ ಮಕ್ಕಳಾಗಿದ್ದರೂ ಬಣ್ಣದಲ್ಲಿ ಮಾತ್ರ ವಿಭಿನ್ನ ವಾಗಿದ್ದರು . ಬಿಂದು ಕೃಷ್ಣ ಸುಂದರಿ.ಸಿಂದು ಮಹಾಶ್ವೇತೆ.ಚಿಕ್ಕ ವಯಸ್ಸಿನಿಂದಲೂ ಬಿಂದು ವಿಗೆ ತನ್ನ ಬಣ್ಣದ ಬಗ್ಗೆ ಕೀಳರಿಮೆ ಬರುವಂತೆ ಎಲ್ಲರೂ
ಅವಳಿ ಎದುರಿಗೆ ಕನಿಕರದಿಂದ ಮಾತನಾಡಿ ನೋಯುಸುತ್ತಿದ್ದರು. ಇದರಿಂದ ಸಿಂದುವಿಗೆ ತನ್ನ ಬಣ್ಣ ಹಾಗೂ ರೂಪದ ಬಗ್ಗೆ ಜಂಭ ಬರಲು ಶುರು ಆಯ್ತು.
ಬಿಂದು ನೊಂದು ಕೊಂಡಾಗಲೆಲ್ಲಾ ಪದ್ಮಾವತಿ ಯವರು ಅವಳಿಗೆ ಸಮಾಧಾನ ಹೇಳಿ,
"ನೋಡು ಪುಟ್ಟಾ ಶ್ರೀ ಕೃಷ್ಣ ನ ಬಣ್ಣ ವೂ ಕಪ್ಪು, ಆದರೆ ಅವನೆಷ್ಟು ಲೋಕ ಪ್ರಸಿದ್ಧ ನಾದ . ಅಂತಹ ಕೃಷ್ಣ ಪರಮಾತ್ಮ ನ ಬಣ್ಣ ನಿನ್ನದು, ಅವನು ನಿನಗೆ ಒಳ್ಳೆಯದನ್ನು ಮಾಡಿಯೇ ಮಾಡುತ್ತಾನೆ.ಕಪ್ಪು ಕಸ್ತೂರಿ ಅಂತ ಪ್ರಸಿದ್ಧ ಗಾದೆ.ನೀನು ಸಹ ಕಸ್ತೂರಿ ಯಂತೆ ನಿನ್ನ ಸುತ್ತಲೂ ಇರುವವರೆಗೆ ಒಳ್ಳೆಯದನ್ನು ಮಾಡಿ ಯಶಸ್ವಿಯಾಗಿ ಬಾಳುತ್ತೀಯ" ಅಂತ ಹೇಳಿ
ಸಮಾಧಾನ ಮಾಡುತ್ತಿದ್ದರು. ಹೆತ್ತ ತಾಯಿಗೆ ಎಲ್ಲಾ ಮಕ್ಕಳೂ ಒಂದೇ.
ಇವರಿಬ್ಬರಿಗೂ ಮದುವೆಯ ವಯಸ್ಸು ಬಂದಾಗ ಹೆಚ್ಚು ಓದದ ಸಿಂದುವನ್ನು ವಿದ್ಯಾವಂತ ಯುವಕರು ತಿರಸ್ಕರಿಸಿದರೆ, ಓದಿನಲ್ಲಿ ಮುಂದಿದ್ದು ಒಳ್ಳೆಯ ಹುದ್ದೆಯಲ್ಲಿ ಇದ್ದ ಬಿಂದುವನ್ನು ಕಪ್ಪು ಎಂದು ತಿರಸ್ಕರಿಸುತ್ತಿದ್ದರು. ಹೀಗಾಗಿ ಅನಂತನ್ ಮತ್ತು ಪದ್ಮಾವತಿಗೆ ಮಕ್ಕಳ ಮದುವೆಯ ಸಮಸ್ಯೆ ತಲೆ ತಿನ್ನುತ್ತಿತ್ತು.
ಒಂದು ದಿನ ಸಿಂದುವನ್ನು ನೋಡಲು ಬಂದಿದ್ದ ಒಬ್ಬ ಸ್ಪುರದ್ರೂಪಿ ಯುವಕ, ಬಿಂದುವಿನ ಹುದ್ದೆ ಮತ್ತು ಬುದ್ಧಿ ವಂತಿಕೆಯನ್ನು ಮೆಚ್ಚಿ, ಅವಳ ಬಣ್ಣಕ್ಕೆ ಬೆಲೆ ಕೊಡದೇ, ಅವಳನ್ನು ಮದುವೆಯಾಗುವುದಾಗಿ
ಹೇಳಿದಾಗ, ಎಲ್ಲರಿಗೂ ಆಶ್ಚರ್ಯ ವಾಯಿತು.
ಸ್ವತಃ ಬಿಂದು ತನ್ನ ಕಿವಿಯನ್ನು ತಾನೇ ನಂಬದೇ ಹೋದಳು.
ಆದರೆ ತನ್ನ ಬಣ್ಣ ಮತ್ತು ರೂಪದಿಂದ ಬೀಗುತ್ತಿದ್ದ ಸಿಂದುವಿಗೆ ಅವಮಾನ ವಾದಂತಾಯಿತು.
ಕಡೆಗೂ ಕೃಷ್ಣ ಸುಂದರಿ ಬಿಂದುವಿಗೆ ಚಂದದ ವಾರ ಸಿಕ್ಕಿದ್ದು ಅನಂತ್ ಮತ್ತು ಪದ್ಮಾವತಿ ಗೆ ತುಂಬಾ ಸಂತೋಷ ವಾಯಿತು.
ಬಿಂದುವಿನ ಮದುವೆಯಲ್ಲಿ ಬಂದವರೆಲ್ಲರೂ
ಈ ಜೋಡಿ ಯನ್ನು ನೋಡಿ, 'ಇದೇನು ಬ್ರಹ್ಮ ಹಾಕಿದ ಗಂಟೋ? ಕೃಷ್ಣ ಸುಂದರಿಗೆ ಎಂತಹ ಬಿಳಿ ಬಣ್ಣದ ಹುಡುಗ ' ಅಂತ ಮಾತನಾಡಿಕೊಂಡು ಹೋಗುತ್ತಿದ್ದರು.
ಒಟ್ಟಿನಲ್ಲಿ ತಮ್ಮ ಬಿಂದುವಿನ ಒಳ್ಳೆಯ ಗುಣ ಹಿಂಗೂ ಬುದ್ದಿವಂತಿಕೆಗೆ ಶ್ರೀ ಕೃಷ್ಣ ಒಳ್ಳೆಯದನ್ನು
ಮಾಡಿದನಲ್ಲಾ ಅಂತ ಪದ್ಮಾವತಿ ಯವರಿಗೆ ತುಂಬಾ ಸಮಾಧಾನವಾಯಿತು.
ಮುಂದೆ ಒಂದು ತಿಂಗಳಲ್ಲಿ ಸಿಂಧುವಿಗೂ ಒಬ್ಬ ವರನನ್ನು ಹುಡುಕಿ ಮದುವೆ ಮಾಡಿದರು.
ತೆಳ್ಳಗೆ ಬೆಳ್ಳಗೆ ರೂಪಸಿ ಎನಿಸಿದ್ದ ಸಿಂದುವಿಗೆ ಕಪ್ಪು ಬಣ್ಣದ ಗಂಡು ಸಿಕ್ಕಾಗ, ಬ್ರಹ್ಮ ಬರೆದ ಅನುಬಂಧ ವನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾಯಿತು.
ವಿಜಯಭಾರತೀ.ಎ.ಎಸ್.
