Revati Patil

Romance Classics Inspirational

4  

Revati Patil

Romance Classics Inspirational

ಕೋಟಿನಲ್ಲಿಯೇ ಉಳಿದ ಪ್ರೇಮಪತ್ರ

ಕೋಟಿನಲ್ಲಿಯೇ ಉಳಿದ ಪ್ರೇಮಪತ್ರ

3 mins
199


ತಾತಯ್ಯ ತನ್ನ ಊರುಗೋಲಿನ ಸಹಾಯದಿಂದ ನಡೆದು ಟೇಬಲ್ ಮೇಲಿನ ಗಾಜಿನ ಶೀಷೆಯಲ್ಲಿದ್ದ ತನ್ನ ಹಲ್ಲಿನ ಸೆಟ್ಟನ್ನು ಮತ್ತೊಮ್ಮೆ ತೊಳೆದು ಇಟ್ಟರು. ಸ್ವೇಟರನ್ನು ತೊಳೆಯಲು ಬಕೆಟಿನೊಳಗೆ ಹಾಕಿ, ಕೆಲಸದವಳು ಬರುವವರೆಗೂ ನೆನೆಯಲು ಬಾಗಿಲಾಚೆ ಇಟ್ಟರು.  ತಾತಯ್ಯ ಇವತ್ತು ಹೊಸ ಹುಮ್ಮಸ್ಸಿನಲ್ಲಿ ಇದ್ದರು .

       

ಎಂಬತ್ತೆರಡರ ವಯಸ್ಸಿನ ತಾತಯ್ಯ, ಥೇಟ್ ಇಪ್ಪತ್ತರ ಯುವಕನಂತೆ ಅತ್ತಿಂದಿತ್ತ ಓಡಾಡುತ್ತಲೇ ಇದ್ದರು. ಸ್ನಾನ ಮುಗಿಸಿ ಬೂದು ಬಣ್ಣದ ಟಿ ಶರ್ಟ್ ತೊಟ್ಟು, ಅದರ ಮೇಲೊಂದು ಕೋಟ್ ಧರಿಸಿ, ಇರುವ ನಾಲ್ಕೇ ಕೂದಲನ್ನು ನೀಟಾಗಿ ಬಾಚಿ, ಹಲ್ಲಿನ ಸೆಟ್ಟನ್ನು ಬಾಯಿಗೆ ಹಾಕಿ, ಟೀ ಬನ್ ತಿಂದವರೇ ಏರಪೋರ್ಟ್ ಕಡೆ ಹೊರಟು ನಿಂತರು. ಮತ್ತೊಮ್ಮೆ ಕೋಟಿನ ಜೇಬಿಗೆ ಕೈ ಹಾಕಿ ಪತ್ರವಿದ್ದದ್ದನ್ನು ಪರೀಕ್ಷಿಸಿದರು. ಐದು ದಶಕಗಳ ಮೇಲಾಯಿತು, ಆ ಪತ್ರ ತಾತನ ಕೋಟಲ್ಲೇ ಉಳಿದು. ಏರ್ಪೋರ್ಟ್ ಮುಟ್ಟಿದಾಗ ಅವರಿಗೆ ಬೇಕಾದ ವಿಮಾನವಿನ್ನೂ ಬಂದಿರದಿದ್ದ ಕಾರಣ ಅಲ್ಲಿಯೇ ಕಾಯುತ್ತ ಕೂತರು. ತಾತನ ಮನಸ್ಸು ಸುಮಾರು ಐವತ್ತು ವರ್ಷಗಳ ಹಿಂದೆ ಓಡತೊಡಗಿತು.


ಶ್ರೀಮಂತ ಕುಟುಂಬದಲ್ಲೇ ಥಾಮಸ್ ಹುಟ್ಟಿದ್ದು. ಅಪ್ಪ, ಅಮ್ಮ, ತಂಗಿಯರಿದ್ದ ಚಿಕ್ಕ ಕುಟುಂಬ ಥಾಮಸ್ ಅವರದು. ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯಲಿ ಎಂದು ಕೆನಡಾ ದೇಶಕ್ಕೆ ಮಗ-ಮಗಳ ಓದನ್ನು ವರ್ಗಾಯಿಸಿದ್ದರು ಥಾಮಸ್ನ ಅಪ್ಪ. ಥಾಮಸ್ ಕೂಡ ವಿದ್ಯಾವಂತ. ಒಂದೆರಡು ತಿಂಗಳಲ್ಲಿ ಕೆನಡಾ ದೇಶಕ್ಕೆ ಹೊಂದಿಕೊಂಡ. ತಂಗಿಯು ಚೆನ್ನಾಗಿ ಓದುತ್ತಿದ್ದಳು. ಯೂನಿವರ್ಸಿಟಿ ಅಲ್ಲೂ ಥಾಮಸ್ ಬಂಗಾರದ ಪದಕಗಳೊಂದಿಗೆ ರಾರಾಜಿಸಿದ್ದರು. ಹೀಗೆ ಯಾವುದೇ ಅಡೆತಡೆಗಳಿಲ್ಲದೆ ನಡೆದಿತ್ತು ಥಾಮಸ್ನ ಜೀವನ. ಒಂದು ದಿನ ಕೆನಡಾದ ರೆಸ್ಟೋರೆಂಟಲ್ಲಿ ಪರಿಚಯವಾದವಳೇ ಪೀಹು. ಮೂಲತಃ ಭಾರತೀಯ ಪಂಜಾಬಿ ಹುಡುಗಿಯಾಗಿದ್ದ ಪೀಹುವನ್ನು ನೋಡುತ್ತಲೇ ಥಾಮಸ್ ಅವಳೆಡೆಗೆ ನಗೆ ಬೀರಿದ್ದ. ತನ್ನ ಮಣ್ಣಿನವಳೇ ಎನ್ನುವ ಸೆಳೆತ ಅದಾಗಲೇ ಸೆಳೆದಿತ್ತು. ಆ ರೆಸ್ಟೋರೆಂಟ್ ಪೀಹುಳ ತಂದೆಯದು. ಆಗಾಗ ಅಪ್ಪನ ರೆಸ್ಟೋರೆಂಟಿಗೆ ಬರುತ್ತಿದ್ದ ಪೀಹು ಅಂದು ಥಾಮಸ್ ಎಂಬ ಯುವಕನ ಮನ ಕದ್ದುಬಿಟ್ಟಳು. ಆದರೆ ಪೀಹು ಎಂದು ಥಾಮಸನತ್ತ ಒಂದು ನಗೆಯನ್ನೂ ಬೀರಿರಲಿಲ್ಲ. ಥಾಮಸ್ ಮಾತ್ರ ಅವಳನ್ನು ನೋಡುವುದಕ್ಕಾಗಿಯೇ ರೇಸ್ಗೋರೆಂಟಿಗೆ ಬರತೊಡಗಿದ.


ಅಣ್ಣನಲ್ಲಿ ಬದಲಾವಣೆ ನೋಡಿದ್ದ ತಂಗಿ ಮೇರಿ, ಬದಲಾವಣೆಯ ಕಾರಣವೇನೆಂದು ಥಾಮಸ್ನನ್ನು ಕೇಳುತ್ತಾಳೆ. ಆಗ ಥಾಮಸ್ ತನ್ನ ತಂಗಿಗೆ ಪೀಹು ಬಗ್ಗೆ ಹೇಳಿದಾಗ, ಮೇರಿ ಸಹ ಅಣ್ಣನ ಪ್ರೀತಿಗೆ ಸಹಾಯ ಮಾಡುವುದಾಗಿ ಹೇಳುತ್ತಾಳೆ. ಮರುದಿನ ಥಾಮಸ್ ಜೊತೆ ಮೇರಿಯೂ ಬರುತ್ತಾಳೆ ರೆಸ್ಟೋರೆಂಟಿಗೆ. ಪೀಹುವನ್ನು ನೋಡುತ್ತಲೇ ತನ್ನ ಅಣ್ಣನಿಗೆ

'ಅಣ್ಣ ಈ ಪೀಹು ನೋಡಲು ನಿನಗಿಂತ ದೊಡ್ಡವರು ಅನ್ನಿಸ್ತಿದಾರೆ ಕಣೋ, ಬೇರೆ ಹುಡುಗಿ ನೋಡು ಪೀಹು ಯಾಕೋ ನನಗಿಷ್ಟ ಆಗ್ಲಿಲ್ಲ ' ಎನ್ನುತ್ತಾಳೆ.


ಥಾಮಸ್ ಮಾತ್ರ ತನ್ನ ನಿರ್ಧಾರ ಬದಲಿಸದೆ ಅಪ್ಪ ಅಮ್ಮನಿಗೂ ವಿಷಯ ತಿಳಿಸಿ ತಾನು ಪೀಹುವನ್ನು ಪ್ರೀತಿಸುತ್ತಿದ್ದೇನೆ, ಅವಳನ್ನೆ ಮದುವೆಯಾಗುತ್ತೇನೆ ಎಂದಾಗ ಮಗನ ಸಂತೋಷದ ಮಧ್ಯೆ ಜಾತಿಗೀತಿಯನ್ನು ಮರೆತು ಒಪ್ಪಿಗೆ ನೀಡುತ್ತಾರೆ.


ಒಂದು ದಿನ ಥಾಮಸ್ ಪೀಹು ಬಳಿ ತನ್ನ ಪ್ರೀತಿ ನಿವೇದನೆ ಮಾಡಿಕೊಂಡಾಗ ಥಾಮಸ್ ನಿಂತಲ್ಲೇ ಕಲ್ಲಾಗಿಬಿಡುತ್ತಾನೆ. ಪೀಹು ಮೂಗಿ !

ಇವನೆಷ್ಟೇ ಮಾತಾಡಿದರೂ ಅವಳು ಮೌನಿ !

ಥಾಮಸ್ ಪ್ರೀತಿಯಿಂದ ಪೀಹುಗಾಗಿ ಬರೆದ ಪ್ರೇಮಸಂದೇಶವನ್ನು ತನ್ನ ಕೋಟಿನ ಜೇಬಲ್ಲೇ ಉಳಿಸುತ್ತಾನೆ.


ವಿಷಯ ತಿಳಿದ ಮೇರಿ, ಈಗಲೂ ಸಮಯವಿದೆ. ಪೀಹುವನ್ನು ಮರೆತು ಬೇರೊಂದು ಹುಡುಗಿಯನ್ನು ನೋಡೆಂದು ಅಣ್ಣನಿಗೆ ಸಲಹೆ ನೀಡುತ್ತಾಳೆ. ಥಾಮಸ್ ಕೂಡ ರಾತ್ರಿಯೆಲ್ಲಾ ಯೋಚಿಸಿ ಮರುದಿನ ಮತ್ತೇ ರೆಸ್ಟೋರೆಂಟಿಗೆ ಹೋಗಿ ಪೀಹುಳ ತಂದೆಯನ್ನೇ ಭೇಟಿಯಾಗುತ್ತಾನೆ.

ಪೀಹುಳ ತಂದೆ ಸಿಂಪತಿಗಾಗಿ ತನ್ನ ಮಗಳನ್ನು ಮದುವೆಯಾಗುವುದು ಬೇಡ, ಅವಳ ವಯಸ್ಸು ಮೂವತ್ತು ದಾಟಿದೆ. ಅವಳು ಒಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾಳೆ. ಆ ಪ್ರಪಂಚದಲ್ಲಿ ಅವಳು ನೆಮ್ಮದಿಯಿಂದ ಇದ್ದಾಳೆ ಎಂದಾಗ ಥಾಮಸ್ ತಾನು ಸಿಂಪತಿಯಿಂದ ಅಲ್ಲ ನಿಜವಾಗಿಯೂ ಪೀಹುವನ್ನು ಪ್ರೀತಿಸುತ್ತಿದ್ದೇನೆ ಎನ್ನುತ್ತಾನೆ. ಪೀಹುಳ ತಂದೆ ಮಗಳು ಒಪ್ಪಿದರೆ ತನಗೇನು ತೊಂದರೆಯಿಲ್ಲ ಎನ್ನುತ್ತಾನೆ. ಥಾಮಸ್ ಪೀಹು ಬಳಿ ಇದೇ ಮಾತನ್ನು ಕೇಳಿದಾಗ ಪೀಹು ತಾವಿಬ್ಬರು ಸ್ನೇಹಿತರಾಗಿರೋಣ, ಅದಕ್ಕಿಂತ ಹೆಚ್ಚಿನ ಸಂಬಂಧ ಬೇಡ ಎಂದಾಗ ಥಾಮಸ್ ಭಾರವಾದ ಹೃದಯದೊಂದಿಗೆ ಒಪ್ಪಿಕೊಳ್ಳುತ್ತಾನೆ.


ಅವಳು ವರ್ಷಕ್ಕೊಮ್ಮೆ ಭಾರತಕ್ಕೆ ಬರುವುದಾಗಿ ಹೇಳಿರುತ್ತಾಳೆ. ಪೀಹುಳ ಮೃತ ತಾಯಿಯ ಹುಟ್ಟು ಹಬ್ಬದ ದಿನ ಅಮ್ಮನ ಹೆಸರಲ್ಲಿ ಅನಾಥಾಶ್ರಮಕ್ಕೆ ಧನಸಹಾಯ ಮಾಡಿ ಅಲ್ಲಿಯ ಮಕ್ಕಳ ಜೊತೆ ಒಂದು ದಿನ ಕಳೆಯುವುದು ಪೀಹುಗೆ ಪ್ರತಿವರ್ಷದ ಅಭ್ಯಾಸ. ಹೀಗೆ ವಿದ್ಯಾಭ್ಯಾಸದ ನಂತರ ಥಾಮಸ್ ಭಾರತಕ್ಕೆ ಮರಳಿ ಅಪ್ಪನ ವ್ಯವಹಾರ ನೋಡಿಕೊಳ್ಳುತ್ತಾನೆ. ಇಂದಲ್ಲ ನಾಳೆ ಪೀಹು ತನ್ನ ಪ್ರೀತಿ ಒಪ್ಪಿಕೊಂಡು ಬಿಡಬಹುದೆಂಬ ಆಸೆಯಲ್ಲಿ ವಯಸ್ಸು ಕಳೆಯುತ್ತಾನೆ. ಹಾಗೆ ಕಳೆಯುತ್ತ, ಕಳೆಯುತ್ತ ಈಗ ಥಾಮಸ್ ತಾತನಾಗಿ ಬಿಟ್ಟಿದ್ದಾರೆ. ಇವತ್ತು ಅದೇ ದಿನಾಂಕವನ್ನು ನೆನಪಿಸಿಕೊಂಡು ಹಳೆಯ ಥಾಮಸ್ನಂತೆ ಹುರುಪಿನಿಂದ ಮತ್ತೇ ಏರಪೋರ್ಟ್ ಕಡೆ ಮುಖ ಮಾಡಿದ್ದಾರೆ. ಜೇಬಲ್ಲಿ ಹೇಳದೆ, ಓದದೇ ಉಳಿದ ಪ್ರೇಮಸಂದೇಶವಿದೆ.


"ಥಾಮಸ್? " ಎಂದು ಯಾರೋ ಕರೆದಂತಾಗಿ ವಾಸ್ತವಕ್ಕೆ ಮರಳುತ್ತಾರೆ ಥಾಮಸ್. ಮುಂದೆ ಐವತ್ತರ ಆಸುಪಾಸಿನ ಹೆಂಗಸೊಬ್ಬಳು ಎಂಟು ವರ್ಷದ ಮಗಳ ಜೊತೆ ನಿಂತಿದ್ದನ್ನು ನೋಡಿ

"ಎಸ್, ಐಯಾಮ್ ಥಾಮಸ್ " ಎನ್ನುತ್ತಾನೆ.

ಆ ಹೆಂಗಸಿಗೆ ಖುಷಿಯಾಗಿ ತಾನು ಪೀಹುಳ ಮಗಳೆಂದು ಹೇಳುತ್ತಾಳೆ. ಐದಾರು ತಿಂಗಳ ಹಿಂದೆಯಷ್ಟೇ ಪೀಹು ಇಹಲೋಕ ತ್ಯಜಿಸಿದ ವಿಷಯ ಹೇಳುತ್ತಾಳೆ. ಅಮ್ಮನ ಬದಲಿಗೆ ನಿಮ್ಮನ್ನು ನೋಡಲು ನಾನು ಬರಬೇಕಾಯಿತು. ತಗೊಳ್ಳಿ, ಅಮ್ಮ ಕಾಯಿಲೆ ಬಿದ್ದಾಗ ಈ ಪತ್ರ ಕೊಟ್ಟಿದ್ದರು. ಇವತ್ತು ಇಲ್ಲಿ ಅಮ್ಮ ಹೇಳಿದ್ದಕ್ಕೆ ಬಂದೆ, ಇವಳು ನನ್ನ ಮಗಳು. ಎಂದು ತನ್ನ ಬಗ್ಗೆ ಹೇಳಿಕೊಳ್ಳುತ್ತಾಳೆ. ಥಾಮಸ್ ಮೌನವಾಗಿ ಬಿಡುತ್ತಾನೆ. ಮತ್ತೇ ತನ್ನ ಸಂದೇಶ ಕೋಟಿನ ಜೇಬಲ್ಲೇ ಉಳಿಯಿತಲ್ಲ ಎಂದು ಬೇಸರಿಸಿಕೊಳ್ಳುತ್ತಾನೆ. ಪೀಹು ಓದದೇ ಉಳಿದ ತನ್ನ ಪ್ರೇಮಸಂದೇಶವನ್ನು, ಪೀಹು ಬರೆದ ಪತ್ರದ ಜೊತೆ ಸೇರಿಸಿಡುತ್ತಾನೆ. ತನ್ನ ಅಕ್ಷರ ಅವಳು ನೋಡಲೇ ಇಲ್ಲ ಎಂದು ಅವಳ ಸಂದೇಶವನ್ನು ಓದದೇ, ಎರಡೂ ಪತ್ರಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾನೆ!


Rate this content
Log in

Similar kannada story from Romance