STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಕೋಪಿಷ್ಠ

ಕೋಪಿಷ್ಠ

1 min
300

ಆ ಮನೆಯಲ್ಲಿ ಅಪ್ಪ ಬಂದನೆಂದರೆ ಸಾಕು, ಅವನ ಇಬ್ಬರು ಮಕ್ಕಳು ಹೆದರಿಕೊಂಡು ರೂಮನ್ನು ಸೇರಿ ಬಿಡುತ್ತಿದ್ದವು. ಅವನ ಹೆಂಡತಿ ಅವನ ಸೈಕಲ್ ನ ಟ್ರಿನ್ ಟ್ರಿನ್ ಬೆಲ್ಲಿನ ಶಬ್ದ ಕೇಳಿದ ಕೂಡಲೇ ಬಾಗಿಲು ತೆಗೆಯದಿದ್ದರೆ ಅವಳ ಗತಿ ಕೇಳುವ ಹಾಗಿರಲಿಲ್ಲ. ಅವನು ಬಂದು ಒಂದೆರಡು ಬಾರಿ ಬೆಲ್ ಮಾಡಿದ ನಂತರವೂ ಬಾಗಿಲು ತೆಗೆಯದಿದ್ದರೆ ಹೆಂಡತಿಯ ಮೈಮೇಲೆ ಬಾರುಸುಂಡೆ ಗ್ಯಾರಂಟಿ. ಅಡುಗೆಯಲ್ಲಿ ಒಂದು ರುಚಿ ಹೆಚ್ಚು ಕಡಿಮೆ ಯಾಗಿದ್ದರೂ ಮುಗಿಯಿತು. ಅನ್ನದ ತಟ್ಟೆಯನ್ನು ಅವಳ ಮುಖಕ್ಕೆ ಎಸೆದು ಅವಳಿಗೆರಡು ಬಾರಿಸಿ ಹೋಗುತ್ತಿದ್ದ.

ಮಕ್ಕಳೇನಾದರೂ ಒಂದು ತಪ್ಪು ಮಾಡಿದರೂ ಕಡ್ಡಿ ಮುರಿಯುವಷ್ಟು ಹೊಡೆತ ಬೀಳುತ್ತಿತ್ತು.

ಹೊರಗಡೆ ಅವನು ಕೆಲಸ ಮಾಡುವ ಕಡೆಯೂ ತನ್ನ ಸಹೋದ್ಯೋಗಿಗಳೊಂದಿಗೆ ವಿಪರೀತ ಸಿಟ್ಟಿನಿಂದ ಕೂಗಾಡಿ, ರಂಪ ಮಾಡಿ ಬಿಡುತ್ತಿದ್ದ.

ನಮ್ಮ ಈ ಕಥಾನಾಯಕನ ಕೋಪದಿಂದ ಅವನ ಸುತ್ತಲಿನವರಿಗೆ ಸಾಕಷ್ಟು ತೊಂದರೆಗಳೇ ಆಗುತ್ತಿದ್ದವು. ಎಲ್ಲರೂ ಅವನನ್ನು ಕೋಪಿಷ್ಠ, ವಿಶ್ವಾಮಿತ್ರ ಎಂದು ಕರೆದು ಅವನಿಂದ ದೂರವಿರುತ್ತಿದ್ದರು.

ಆದರೆ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಇವನ ವಿಪರೀತ ಕೋಪದ ಫಲವನ್ನು ಅನುಭವಿಸುತ್ತಾ

ತುಂಬಾ ಕಷ್ಟ ಪಡುತ್ತಾ ಇದ್ದರು.

 ಅವನ ಹೆಂಡತಿ ಎಲ್ಲಾ ದೇವರ ಮುಂದೆ ಗಂಡನ ಕೋಪ ಕಡಿಮೆಯಾಗುವಂತೆ ಹರಕೆ ಹೊತ್ತಿದ್ದಳು ಆಯಿತು. ಒಂದು ದಿನ ಅವಳು ಒಬ್ಬ ಸಾಧು ವನ್ನು 

ಭೇಟಿ ಮಾಡಿ ತನ್ನ ಗಂಡನ ಕೋಪದ ಅವಾಂತರಗಳನ್ನು ಹೇಳಿ, ಅದಕ್ಕೆ ಪರಿಹಾರ ನೀಡಬೇಕೆಂದು ಕೇಳಿಕೊಂಡಾಗ, ಆ ಸಾಧು ಅವಳಿಗೆ ನವರಾತ್ರಿಯಲ್ಲಿ ಒಂಭತ್ತು ದಿನಗಳು ದೇವಿಯ ನವಾವರಣಗಳ ಪೂಜೆ ಮಾಡಿ ಮೊಸರನ್ನವನ್ನು ದಾನ ಮಾಡುವಂತೆ ಹೇಳಿ ಕಳುಹಿಸಿದರು.

ಅದರಂತೆಯೇ ಕೋಪಿಷ್ಠನ ಹೆಂಡತಿ ನವರಾತ್ರಿಯಂದು ಶ್ರದ್ಧಾ ಭಕ್ತಿಯಿಂದ ದೇವಿಗೆ ಪೂಜೆ ಮಾಡಿ ಮೊಸರನ್ನವನ್ನು ನೈವೇದ್ಯ ಮಾಡಿ, ಹಸಿದವರಿಗೆ ದಾನ ಮಾಡಿದಳು. ಆ ಒಂಭತ್ತು ದಿನವೂ ಅವಳು ಉಪವಾಸ ಮಾಡಿ ,ದೇವಿ ಭಾಗವತದ ಪಾರಾಯಣ ಮಾಡಿ ಮುಗಿಸಿದಳು.

ಇವಳು ಈ ಪೂಜೆ ಶುರುವಾಗಿ ಮುಗಿಯುವ ವೇಳೆಗೆ ಗಂಡನ ಕೋಪದ ತಾಪ ಕಡಿಮೆಯಾಗುತ್ತಾ ಬಂದು, ಅವನಿಗೆ ತನ್ನ ವಿಪರೀತವಾದ ಕೋಪದಿಂದ ಆಗುತ್ತಿದ್ದ ಅನಾಹುತಗಳ ಬಗ್ಗೆ ತಿಳುವಳಿಕೆ ಮೂಡುತ್ತಾ ಬಂತು. ಕಡೆಗೆ ಅವನ ಮನಸ್ಸೂ ಶಾಂತವಾಗಿರುವುದಕ್ಕೆ ಪ್ರಯತ್ನ ಪಟ್ಟು, ತನ್ನ ಹೆಂಡತಿ ಮಕ್ಕಳನ್ನು ಪ್ರೀತಿಯಿಂದ ಕಾಣುವುದಕ್ಕೆ ಶುರು ಮಾಡಿದನು. ಆಗ ಅವನಿಂದ ದೂರವಾಗುವ ಇರುತ್ತಿದ್ದ ಮಕ್ಕಳು ಅವನಿಗೆ ಹತ್ತಿರವಾದರು.ಮತ್ತು ಹೆಂಡತಿಯ ಕಣ್ಣೀರು ನಿಂತಿತು.

ಶ್ರೀದೇವಿಯ ಪೂಜೆಯಿಂದ ತನ್ನ ಗಂಡನ ಕೋಪವನ್ನು ಕಡಿಮೆ ಮಾಡಿದ್ದಳು ಆ ಸಾಧ್ವಿ.


Rate this content
Log in

Similar kannada story from Abstract