Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಕನಸಿನ ಸೌಧ

ಕನಸಿನ ಸೌಧ

1 min
6


"ಸ್ವಂತ ಮನೆಯೋ ಸ್ವರ್ಗ ಸುಖವೋ"ಅನ್ನುವ ಒಂದು ನುಡಿಗಟ್ಟು ಅತ್ಯಂತ ಪ್ರಚಲಿತ. ಪ್ರತಿಯೊಬ್ಬನಿಗೂ ತನ್ನದೇ ಆದ ಒಂದು ಸೂರು ಇರಬೇಕೆಂಬ ಕನಸು  ಸಹಜ. ಆದರೆ ಎಷ್ಟೋ ಜನರಿಗೆ ಆ ಕನಸು ನನಸಾಗುವುದು ತುಂಬಾ ಕಷ್ಟ. ಅದರಲ್ಲೂ ಈಗ ನಾಲ್ಕೈದು ದಶಕಗಳ ಹಿಂದೆ, ಮನೆಯಲ್ಲಿ ಯಜಮಾನನೊಬ್ಬನದೇ ಆದಾಯದಿಂದ ಹೊಟ್ಟೆ ಬಟ್ಟೆ ತೂಗಿಸಿಕೊಂಡು ಹೋಗುತ್ತಿದ್ದ ಕಾಲ. ಹೀಗಾಗಿ ಮಧ್ಯಮ ವರ್ಗದ ಕುಟುಂಬದಲ್ಲಿ ಸ್ವಂತ ಮನೆ ಮಾಡಿ ಕೊಳ್ಳುವುದು ಅತ್ಯಂತ ಕಷ್ಟ ವಾಗಿತ್ತು.ಆ ದಶಕಗಳಲ್ಲಿ ಈಗ ಸಿಗುತ್ತಿರುವಷ್ಟು ಸಾಲದ ಸೌಲಭ್ಯ ಸಿಗುತ್ತಿರಲಿಲ್ಲ.ಆಗೆಲ್ಲಾ ಮಧ್ಯಮ ವರ್ಗದ ಎಲ್ಲರಿಗೂ ಸ್ವಂತ ಮನೆಯದು  ಕನಸೇ ಆಗಿತ್ತು.
ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿ ಇದ್ದ ನಮ್ಮ ತಂದೆಯವರಿಗೆ ಸ್ವಂತ ಮನೆಯನ್ನು ಮಾಡುವ ಕನಸು ಕನಸಾಗಿಯೇ ಉಳಿದು, ಬಾಡಿಗೆ ಮನೆಗಾಗಿ ನಾವು ಪರದಾಡಿದ ಆ ನೆನಪುಗಳು ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ.  ನಮ್ಮ ತಾಯಿ ಪ್ರತಿ ಬಾಡಿಗೆ ಮನೆಗೆ ಹೋಗುವಾಗಲೂ ತುಂಬಾ ವೇದನೆ ಪಡುತ್ತಿದ್ದು, ಅವರು ತನ್ನ ಮಕ್ಕಳಿಗೆ 'ನೀವೆಲ್ಲರೂ ಕೆಲಸಕ್ಕೆ ಸೇರಿ, ಚೆನ್ನಾಗಿ ದುಡಿದು, ಒಂದು ಸ್ವಂತ ಮನೆ ಮಾಡಿಕೊಳ್ಳಿ'ಎಂದು ಹೇಳುತ್ತಿದ್ದುದು ನಮ್ಮ ಮನಸ್ಸುಗಳಲ್ಲಿ ಗಟ್ಟಿಯಾಗಿ ಬೇರೂರಿ, ಮುಂದೆ ನಾವು ಸಹೋದರ ಸಹೋದರಿಯರೆಲ್ಲರೂ ಕೆಲಸಕ್ಕೆ ಸೇರಿ ಸ್ವಂತ ಮನೆಯನ್ನು ಮಾಡಿಕೊಂಡಾಗ, ನಮ್ಮ ತಾಯಿಗೆ ತುಂಬಾ ಸಮಾಧಾನವಾಯಿತು. 

ಅಂದು ನಮ್ಮ ಕನಸಿನ ಸೌಧದ ಗೃಹಪ್ರವೇಶ ದಿಲ್ಲಿ

ಸಂಭ್ರಮದಿಂದ ಓಡಾಡುವಾಗ, ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳು ಎನಿಸುತ್ತಿತ್ತು.

ಪ್ರತಿಯೊಬ್ಬನ ಜೀವನದಲ್ಲೂ ತನ್ನ ಮದುವೆ, ಚೊಚ್ಚಲ ಮಗು,ನೂತನ ಗೃಹಪ್ರವೇಶ ಸಂಭ್ರಮ ಗಳ ನೆನಪುಗಳು ಎಂದೆಂದಿಗೂ ಹಚ್ಚ ಹಸಿರಾಗಿ ಉಳಿಯುವಂತದ್ದು.ಕನಸಿನ ಸೌಧದ ನನಸಾದಾಗ ಯಾರಿಗೆ ತಾನೇ ಖುಷಿಯಾಗದು?


ವಿಜಯಭಾರತೀ ಎ.ಎಸ್.



Rate this content
Log in

Similar kannada story from Abstract