Vijaya Bharathi

Abstract Classics Others

4  

Vijaya Bharathi

Abstract Classics Others

ಕಡಲ ಬೆಸುಗೆ

ಕಡಲ ಬೆಸುಗೆ

2 mins
577


ಎಂದಿನಂತೆ ವಾರಾಂತ್ಯದ ಸಂಧ್ಯಾ ಸಮಯದಲ್ಲಿ ಕೋವಲಂ ಬೀಚ್ ಕಡೆ ಹೊರಟ ಮನೋಹರ್ ,


 ಕಡಲ ಕಿನಾರೆಯಲ್ಲಿ ಮರಳ ಹಾಸಿಗೆಯ ಮೇಲೆ ಮೈ ಚೆಲ್ಲಿ ಕುಳಿತ. ಏರಿಳಿತದ ದೈತ್ಯ ಅಲೆಗಳು ಭರ್ರನೆ ಬಂದು ಒಂದು ಬಾರಿ ಅವನ ಕಾಲುಗಳನ್ನು ತೊಳೆದು ಓಡೋಡಿ ಹೋಗುತ್ತಿದ್ದರೆ, ಮತ್ತೊಮ್ಮೆ ಅವನ ಭುಜದವರೆಗೂ ಬಂದು ಅಪ್ಪಳಿಸುತ್ತಿತ್ತು. ಸೂರ್ಯಾಸ್ತದ ಸಮಯದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತಾ ಹೋದಂತೆ ಮನೋಹರ್ ಮೇಲೆ ಎದ್ದು ನಿಧಾನವಾಗಿ ಮರಳ ಮೇಲೆ ಹೆಜ್ಜೆ ಹಾಕುತ್ತಾ ಹೋದ. ಕಡಲತಡಿಯ ಆ ಸುಂದರ ಮುತ್ಸಂಜೆಯ ಸೊಬಗನ್ನು ನೋಡುತ್ತಾ ನಿಂತರೆ ಸಮಯದ ಪರಿವೇ ಇರದು. ದಡದಲ್ಲಿ ಚಾಟ್ಸ್ಗಳ ಅಂಗಡಿಗಳ ಮುಂದೆ, ಐಸ್ಕ್ರೀಂ ಮತ್ತು ಕ್ಯಾಂಡಿಗಳ ಅಂಗಡಿಗಳ ಮುಂದೆ, ಸ್ನಾಕ್ಸ್ ಮಳಿಗೆಯ ಎದುರು ಜನಜಂಗುಳಿ. ಭೂಮವ್ಯೋಮವನ್ನು ಒಂದಾಗಿ ಕಾಣುವಂತೆ ಮಾಡುವ ದೈತ್ಯ ಕಡಲ ಅಲೆಗಳ ನರ್ತನವನ್ನು ನೋಡುತ್ತಾ ಕುರುಕಲು ತಿಂಡಿಗಳನ್ನು ಬಾಯಾಡಿಸುತ್ತಾ ಹೋ, ಹಾಹಾ,ಹುರ್ರೇ, ಎಂಬ ಉದ್ಗರಿಸುತ್ತಾ ,ಹೆಗಲನ್ನು ಬಳಸಿ ನಿಂತ ಜೋಡಿಗಳನ್ನು ನೋಡುವಾಗ ಮನೋಹರ್ ಗೆ ಮಹತಿಯ ನೆನಪುಗಳು ಕಾಡತೊಡಗಿತು. 

ಮನೆಯವರ ವಿರೋಧವನ್ನೂ ಲೆಕ್ಕಿಸದೇ ತಾನು ಪ್ರೀತಿಸಿದ ಮಹತಿಯನ್ನು ಮದುವೆ ಮಾಡಿಕೊಂಡು,ದೂರದ ಈ ಟ್ರಿವೇಂಡ್ರಂಗೆ ಬಂದಿದ್ದು, ಮಹತಿಯ ಹೆಗಲ ಮೇಲೆ ಕೈ ಹಾಕಿ, ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳುತ್ತಾ, ಪ್ರತಿ ಸಂಜೆ ಈ ಕಡಲ ಸೌಂದರ್ಯ ವನ್ನು ಸವಿದದ್ದು, ನಂತರ ತಮ್ಮ ಮದುವೆಯಾದ ಕೇವಲ ಮೂರು ವರ್ಷಗಳಲ್ಲಿ ಮಹತಿಗೆ ಮಾರಣಾಂತಿಕ ಕ್ಯಾನ್ಸರ್ ಕಡಲ ಅಲೆಗಳಂತೆ ಅವಳನ್ನು ಎಳೆದೊಯ್ದುದ್ದು, ನಂತರ ತನ್ನ ಜೀವನದಲ್ಲಿ ಶೂನ್ಯ ಆವರಿಸಿದ್ದು, ಮತ್ತೆ ತನ್ನ ಹುಟ್ಟೂರಿಗೆ ಹೋಗಲು ಇಚ್ಚಿಸದೆ ಈ ಕಡಲತಡಿಯಲ್ಲೇ ಉಳಿದದ್ದು,.....ಈಗ ಕೇವಲ ಮನೋಹರ್ ಗೆ ನೆನಪುಗಳಾಗಿ ಉಳಿದಿವೆ. ಯಾರ ದೃಷ್ಟಿ ತಾಗಿತೋ ಆ ಸುಂದರ ಜೋಡಿಗೆ? 


ತನ್ನ ಪ್ರೀತಿಯ ಮಹತಿ ಯ ಸುಂದರ ನೆನಪುಗಳನ್ನು ಮೆಲುಕು ಹಾಕಲು ಆಗಾಗ್ಗೆ ಕಡಲತಡಿಗೆ ಬಂದು ಅಲೆಗಳ ಆಟವನ್ನು ನೋಡುತ್ತಾ ನಿಲ್ಲುವ ಮನೋಹರ್ , ಕೆಲವೊಮ್ಮೆ ಸುಂದರ ಜೋಡಿಗಳ ಸರಸಸಲ್ಲಾಪ ಹಾಗೂ ಪ್ರೇಮದಾಟಗಳನ್ನು ನೋಡುವಾಗ ಅವನಿಂದ ನಿಟ್ಟುಸಿರು ಹೊರ ಬೀಳುತ್ತಿತ್ತು..


 ಹಳೆಯ ನೆನಪುಗಳಲ್ಲಿ ತೇಲುತ್ತಾ ಅಲೆಗಳ ಬಡಿದಾಟ ಗಳನ್ನು ವೀಕ್ಷಿಸುತ್ತಿದ್ದ ಮನೋಹರ್ ಹತ್ತಿರ ಓಡಿಬಂದ ಐದು ವರ್ಷದ ಗಂಡು ಮಗು ಮರಳಲ್ಲಿ ಕಪ್ಪೆಗೂಡು ಆಡುತ್ತಾ ಕುಳಿತಿತ್ತು. ಆ ಮಗುವಿನ ಆಟವನ್ನು ನೋಡುತ್ತಾ ಅದರೊಂದಿಗೆ ಮಾತುಕತೆ ಬೆಳೆಸಿದ. ಕತ್ತಲು ಸುತ್ತಲೂ ಕವಿಯ ತೊಡಗಿದಾಗ ಆ ಮಗುವಿನ ಅಮ್ಮ ಮಗುವನ್ನು ಹುಡುಕಿಕೊಂಡು ಬಂದಳು. 


 ಆ ಮಗು ತನ್ನ ಅಮ್ಮನಿಗೆ ಹೊಸ ಅಂಕಲ್ ನ ಪರಿಚಯ ಮಾಡಿಸಿತು. ಮಗುವಿನ ಹೆಸರು ಚಿಂಟು ಎಂದಷ್ಟೇ ಮನೋಹರ್ ಗೆ ಗೊತ್ತಾದದ್ದು.ಸುಮಾರು ಇಪ್ಪತ್ತೈದರ ಹರೆಯದ ಚಿಂಟುವಿನ ಅಮ್ಮ ನೋಡಲು ತುಂಬಾ ಸುಂದರವಾಗಿದ್ದು ಮಹತಿಯನ್ನೇ ಹೋಲುವಂತೆ ಇದ್ದದ್ದನ್ನು ನೋಡಿ, ಮನೋಹರ್ ಅವಾಕ್ಕಾದ.

ಮುಂದೆ ಚಿಂಟು ಮನೋಹರ್ ಗೆ ಅತ್ಯಂತ ಹತ್ತಿರವಾದ. ಏಕಾಂಗಿಯಾಗಿ ಬಳಲುತ್ತಿದ್ದ ಮನೋಹರ್ ಗೆ ಚಿಂಟುವಿನ ಒಡನಾಟ ತುಂಬಾ ಆಪ್ಯಾಯಮಾನವಾಗಿತ್ತು.


 ಈ ಪುಟ್ಟ ಬಾಲಕನ ಮೂಲಕ ಅವನ ಅಮ್ಮ ಸುಮತಿಯ ಸ್ನೇಹವೂ ದೊರಕಿ, ಮನೋಹರ್ನ ಬತ್ತಿಹೋದ ಭಾವ ಜಲ ಮತ್ತೆ ಉಕ್ಕುತ್ತಿತ್ತು.

ಬರಬರುತ್ತಾ ಸುಮತಿ ಮತ್ತು ಚಿಂಟು ಮನೋಹರ್ಗೆ ಅತ್ಯಂತ ಪ್ರೀತಿಪಾತ್ರ ರಾದರು. .ಚಿಕ್ಕ ಪ್ರಾಯದಲ್ಲಿಯೇ ಗಂಡನನ್ನು ಕಳೆದುಕೊಂಡಿದ್ದ ಸುಮತಿ,ತನ್ನ ಮಗು ಚಿಂಟುವಿನೊಂದಿಗೆ ಇದೇ ನಗರದಲ್ಲೇ ಇದ್ದಾರೆಂದು ತಿಳಿದಾಗ ಮನೋಹರ್ ಗೆ ಅವರ ಮೇಲೆ ಅನುಕಂಪ ಉಂಟಾಯಿತು. ಇವರಿಬ್ಬರ ಬಗ್ಗೆ ಕಾಳಜಿ ವಹಿಸತೊಡಗಿದ.


 ಒಂದು ವರ್ಷದ ಸ್ನೇಹಕ್ಕೆ ಸಂಬಂಧ ದ ಸೇತುವೆ ಕಟ್ಟಲು ಮನೋಹರ್ ಮತ್ತು ಸುಮತಿ ನಿರ್ಧರಿಸಿದರು. ಇವರ ನಿರ್ಧಾರಕ್ಕೆ ಕಡಲು ಸಾಕ್ಷಿಯಾಯಿತು.


Rate this content
Log in

Similar kannada story from Abstract