Vijaya Bharathi

Abstract Classics Others

4  

Vijaya Bharathi

Abstract Classics Others

ಕೈ ಕೊಟ್ಟ ಗಾಡಿ

ಕೈ ಕೊಟ್ಟ ಗಾಡಿ

1 min
580


ನಾನ್ ಸ್ಟಾಪ್ ನವೆಂಬರ್ ಆವೃತ್ತಿ 3 ಬಿಗಿನರ್

ದಿನ ೨೮

ವಿಷಯ :ಸಮಯ


ಕೈ ಕೊಟ್ಟ ಗಾಡಿ

  

ಅಂದು ಆಫೀಸ್ಗೆ ಹೊರಟ ವನಜಳಿಗೆ ದಾರಿಯಲ್ಲಿ ಗಾಡಿ ಇದ್ದಕ್ಕಿದ್ದಂತೆ ಕೆಟ್ಟು ನಿಂತು ಹೋದಾಗ, ತುಂಬಾ ಟೆನ್ಷನ್ ಆಯಿತು. ಇನ್ನು ಹತ್ತು ನಿಮಿಷ ದೊಳಗೆ ಆಫೀಸಿಗೆ ಹೋಗಿಅಟೆಂಡೆನ್ಸ್ ಗೆ ಸಹಿ ಹಾಕಬೇಕು,ಇಲ್ಲವಾದರೆ ಅಟೆಂಡೆನ್ಸ್  ರಿಜಿಸ್ಟರ್ ಬಾಸ್ ಚೇಂಬರ್ ಒಳಗೆ ಹೋಗಿಬಿಡುತ್ತದೆ.. 

ಈಗ ಗಾಡಿ ಬೇರೆ ಸ್ಟಾರ್ಟ್ ಆಗ್ತಿಲ್ಲ. ಇದೇನಾಗಿದೆಯೋ,? ಈಗಂತೂ ಸರಿಮಾಡಿಸಲಾಗುವುದಿಲ್ಲ , ಆಫೀಸಿಗೆ ಸಮಯವಾಗುತ್ತಿದೆ. ಅವಳು ಕೂಡಲೇ ಗಾಡಿಯನ್ನು ತಳ್ಳಿ ಕೊಂಡು ಒಂದು ಅಂಗಡಿಯ ಮುಂದೆ ನಿಲ್ಲಿಸಿ, ಆಟೋ ಗೆ ಕಾದು ನಿಂತಳು. ಬೆಳಗಿನ ಪೀಕ್ ಅವರನಲ್ಲಿ ಆಟೋ ಸಿಗುವುದೂ ಕಷ್ಟ. ವಾಚ್ ನೋಡಿಕೊಂಡಳು, ಇನ್ನು ಕೇವಲ ಐದು ನಿಮಿಷ ಗಳಸಮಯವಿದೆ . ಅವಳಿಗೆ ಚಡಪಡಿಕೆ. ಕಡೆಗೂ ಒಂದಕ್ಕೆ ಒಂದೂವರೆ ಪಟ್ಟು ದುಡ್ಡಿಗೆ ಒಪ್ಪಿಕೊಂಡು ಆಟೋ ಹಿಡಿದು, ಅವಳು ಆಫೀಸ್ ತಲುಪಿದಾಗ ಕಾಲುಗಂಟೆ ತಡವಾಗಿತ್ತು. 

ಆಫೀಸಗೆ ಹೋಗಿ ಅಟೆಂಡೆನ್ಸ್ ರಿಜಿಸ್ಟರ್ ಹುಡುಕಿದಾಗ ಅದು ಬಾಸ್ ಚೇಂಬರ್ನಲ್ಲಿರುವುದು ಗೊತ್ತಾಯಿತು. 

ಅವಳ ಗ್ರೂಪ್ ಆಫೀಸರ್ ಅವಳಿಗೆ ಒಳಗಡೆಯೇ ಹೋಗಿ ಬಾಸ್ ಎದುರಿಗೇ ಸೈನ್ ಮಾಡಲು ನಿರ್ದೇಶಿಸಿದರು. 

ಅವಳು ಬಾಸ್ ಚೇಂಬರ್ ಒಳಗೆ ಬಂದು,ಅಟೆಂಡೆನ್ಸ್ ಹಾಕಬೇಕೆಂದು ರಿಕ್ವೆಸ್ಟ್ ಮಾಡಿದಾಗ ಅವಳ ಬಾಸ್ ಅಲ್ಲಿಯೇ ಇದ್ದ ಗಡಿಯಾರದತ್ತ ಕಣ್ಣು ಹಾಯಿಸಿ,  

"ಈಗ ಸಮಯ ಎಷ್ಟು ಅಂತ ಗೊತ್ತಾ?" ಅಂತ ಕೇಳಿದಾಗ ವನಜ ತನ್ನ ಗಾಡಿ ಕೈಕೊಟ್ಟಿದ್ದರಿಂದ ಆಫೀಸಿಗೆ ನಿಗಧಿತ ಸಮಯದಲ್ಲಿ ಬರಲಾಗದೆ ಕಾಲು ಗಂಟೆ ತಡವಾಗಿರುವುದಕ್ಕೆ ಕ್ಷಮೆ ಕೇಳಿದಳು. 

ಅದೊಂದು ಫೈನಾನ್ಸ್ಕ ಕಾರ್ಪೋರೇಷನ. ಅಲ್ಲಿ ಸಮಯಕ್ಕೆ ತುಂಬಾ ಬೆಲೆ .

ಅವಳ ಬಾಸ್ ಅವಳಿಗೆ ಸಮಯ ಪಾಲನೆಯ ಬಗ್ಗೆ , "ಟೈಂ ಈಸ್ ಮನಿ ಅಂಡ್ ಮನಿ ಈಸ್ ಟೈಂ "ಅಂತ ಹೇಳಿ ಇನ್ನು ಮುಂದೆ ಈ ರೀತಿ ಆಫೀಸ್ ಗೆ ನಿಗಧಿತ ಸಮಯಕ್ಕೆ ಬರಬೇಕೆಂದು ಎಚ್ಚರಿಕೆ ನೀಡಿ, ಅಟೆಂಡೆನ್ಸ್ ರಿಜಿಸ್ಟರ್ ನೀಡಿದಾಗ, ವನಜ ಅವರೆದುರೇ ಸಹಿ ಮಾಡಿ, ಸಾರಿ ಕೇಳಿ, ಹೊರಗಡೆ ತನ್ನ ಸೀಟ್ನಲ್ಲಿ ಕುಳಿತಾಗ ಅವಳಿಗೆ ಸುಸ್ತಾಗಿ ಹೋಗಿತ್ತು.


 


"


Rate this content
Log in

Similar kannada story from Abstract