ಹುಟ್ಟು ಹಬ್ಬ
ಹುಟ್ಟು ಹಬ್ಬ
ಅಂದು ಶಾಲೆಯಿಂದ ಬಂದ ಹತ್ತು ವರ್ಷ ದ ಶ್ವೇತ ತನ್ನ ಅಮ್ಮನಿಗೆ ಹೇಳಿ, ಪಕ್ಕದ ಮನೆಯ ಶ್ರೀಶಳ ಹ್ಯಾಪಿ ಬರ್ತ್ ಡೇ ಗೆಂದು ಹೊರಟಳು. ಶ್ವೇತಾ ಳ ಅಪ್ಪ ಅಮ್ಮ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಇರುವ ಬಡತನದ ಮನೆಯವರು. ಆದರೆ ಮಗಳಿಗೆ ಕಷ್ಟಪಟ್ಟು ಹಣ ಹೊಂದಿಸುತ್ತಾ ಒಳ್ಳೆಯ ಕಾನ್ವೆಂಟ್ ನಲ್ಲೇ ವಿದ್ಯಾಭ್ಯಾಸ ಮಾಡಿಸುವ ಛಲ ಅವರಿಗೆ. ಹೀಗಾಗಿ ಶ್ವೇತ ಳಿಗೆ ಸಿರಿವಂತ ಸ್ನೇಹಿತರೆ ಹೆಚ್ಚು. ಅಂದು ತನ್ನ ಗೆಳತಿಯ ಮನೆಗೆ ಹೋಗಿ ಅವಳ ಹ್ಯಾಪಿ ಬರ್ತ್ ಡೇ ಮುಗಿಸಿ ಕೊಂಡು ಬಂದ ನಂತರ ಮುಂದಿನ ವಾರವೇ ಬರಲಿರುವ ತನ್ನ ಹುಟ್ಟು ಹಬ್ಬವನ್ನು ಹೀಗೆ ಮಾಡುವಂತೆ ಅವಳ ಅಪ್ಪ ಅಮ್ಮನನ್ನು ಕೇಳಿದಳು. ಆಗ ಅವರಿಬ್ಬರೂ ಮಗಳಿಗೆ ತಮ್ಮ ಅಂತಸ್ತನ್ನು ವಿವರಿಸಿ, ತಮ್ಮ ಕೈಗಳಲ್ಲಿ ಅಷ್ಟೊಂದು ಹಣ ಖರ್ಚು ಮಾಡಿ ಹುಟ್ಟು ಹಬ್ಬ ಆಚರಿಸಲಾಗುವುದಿಲ್ಲ. ಅಂದು ನಿನಗೆ ಹೊಸ ಬಟ್ಟೆ ಕೊಡಿಸಿ, ದೇವಸ್ಥಾನ ಕ್ಕೆ ಕರೆದುಕೊಂಡು ಹೋಗಿ, ಸಿಹಿ ಮಾಡಿ ಕಾಣಿಸುತ್ತಲೇವೆ ಎಂದು ಸಮಾಧಾನ ಮಾಡಿದರು. ಆದರೆ ಶ್ವೇತಾ ಳ ಮನಸ್ಸು ಮುದುಡಿತು.ತನಗೆ ತನ್ನ ಗೆಳತಿಯರಂತೆ ಸಂಭ್ರಮದಿಂದ ಕೇಕ್ ಕಟ್ ಮಾಡಿ "ಹ್ಯಾಪಿ ಬರ್ತ್ ಡೇ ಟು ಯು"ಎಂದು ಹಾಡುತ್ತಾ ಹುಟ್ಟು ಹಬ್ಬ ಮಾಡುವುದಿಲ್ಲವಲ್ಲಾ ಎಂದು ಕಿಂಕೃತಿ ಪಟ್ಟುಕೊಂಡು ಮಂಕಾಗಿ ಕುಳಿತಳು.
