ಹುಡುಗಾಟ
ಹುಡುಗಾಟ
ಒಂದು ಊರಿನಲ್ಲಿ ಗಿರಿ ಎಂಬ ತುಂಟ ಯುವಕನಿದ್ದನು. ಆತ ಬಲು ಸಾಹಸಿ ಆದರೂ ಯಾಮರಿಸುವುದರಲ್ಲಿ ಎತ್ತಿದ ಕೈ. ಒಂದು ದಿನ ಗೆಳೆಯರ ಜೊತೆಗೂಡಿ ಈಜಲೆಂದು ತೆರಳಿದ್ದ ಆದರೆ ಈತ ಈಜುತ್ತಿರಲಿಲ್ಲ. ಯಾಕೆಂದರೆ ಅವನಿಗೆ ಈಜು ತಿಳಿದಿರಲಿಲ್ಲ. ಒಂದು ದಿನ ಯಾರೂ ಇಲ್ಲದ ಸಮಯದಲ್ಲಿ ನದಿ ಕಡೆ ನಡೆದು ಈಜಬೇಕೆಂದು ನಿರ್ಧಾರವನ್ನು ಕೈಗೊಂಡ. ಅದು ಅವನ ಕೆಟ್ಟ ನಿರ್ಧಾರವಾಗಿತ್ತು. ಆದರೂ ಆತ ತನ್ನ ತೀರ್ಮಾನದಂತೆ ನದಿಗೆ ಹಾರಿದ. ಈಜಲು ತಿಳಿಯದವರಿಗೆ ನೀರಿಗೆ ಬಿದ್ದು ಏನು ಮಾಡಬೇಕೆಂದು ತಿಳಿಯದೆ ತನ್ನ ಪ್ರಾಣವನ್ನೇ ಕಳೆದುಕೊಂಡ.
ಇದರಿಂದ ತಿಳಿಯುವುದೇನೆಂದರೆ ಎಲ್ಲಾ ಸಮಯದಲ್ಲೂ ಹುಡುಗಾಟ ಒಳ್ಳೆಯದಲ್ಲ. ಅದು ಜೀವಕ್ಕೆ ಕುತ್ತು ತರುತ್ತದೆ.
