ಹಣೆಬರಹ
ಹಣೆಬರಹ
ಓದುವುದರಲ್ಲಿ ಚುರುಕಾಗಿದ್ದ ಅವಳು ತರಗತಿಗೆ ಮೊದಲು ಬರುತ್ತಿದ್ದಳು.ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಾ ಇದ್ದಳು. ಆಕೆ ತನ್ನ ತಂದೆ ತಾಯಿಗೆ ಮುದ್ದಿನ ಒಬ್ಬಳೇ ಮಗಳು. ಚೆನ್ನಾಗಿ ಓದಿ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸನ್ನು ಹೊತ್ತಿದ್ದಳು. ತಮ್ಮ ಊರಿನ ಜಾತ್ರೆಗೆ ಹೋಗಿ ವಾಪಾಸು ಬರುವಾಗ ಜೋರಾಗಿ ಮಳೆ ಬರುತ್ತಿತ್ತು. ಅವಳು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಯಿತು ತನ್ನ ಹೆತ್ತವರನ್ನು ಕಳೆದುಕೊಂಡಳು. ಅದೃಷ್ಟವಶಾತ್ ಇವಳು ಪ್ರಾಣಾಪಾಯದಿಂದ ಪಾರಾದಳು. ಸ್ವಲ್ಪ ದಿನದ ನಂತರ ಫಲಿತಾಂಶ ಘೋಷಣೆಯಾಯಿತು. ಅವಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಳು. ಅವಳ ಜವಾಬ್ದಾರಿಯನ್ನು ಹೊರಲು ಯಾರೂ ತಯಾರಿರಲಿಲ್ಲ ಹಾಗಾಗಿ ಹಿತೈಷಿಗಳೆಲ್ಲಾ ಸೇರಿ ವಿದ್ಯಾವಂತ ವರನಿಗೆ ಮದುವೆ ಮಾಡಲು ನಿಶ್ಚಯಿಸಿದರು. ಹಣೆಬರಹಕ್ಕೆ ಹೊಣೆ ಯಾರು ಎಂದುಕೊಂಡು ತನ್ನ ಹೆತ್ತವರು ಇದಿದ್ದರೆ ನನ್ನ ಕನಸೆಲ್ಲಾ ನನಸಾಗಿ ಹಣೆಬರಹವೇ ಬದಲಾಗಿರುತಿತ್ತು ಎಂದು ಕಣ್ಣ ನೀರನ್ನು ಒರೆಸಿಕೊಳ್ಳುತ್ತಾ ಮದುವೆಗೆ ಒಪ್ಪಿಗೆ ಸೂಚಿಸಿದಳು.