STORYMIRROR

Chethana Bhargav

Classics Inspirational Others

3  

Chethana Bhargav

Classics Inspirational Others

ಕಂದನ ರಚನೆ

ಕಂದನ ರಚನೆ

1 min
143

ನಗರದಲ್ಲಿ ಆಕಾಶನು ಒಂದು ಭವ್ಯವಾದ ಮನೆಯನ್ನು ಕೊಂಡುಕೊಂಡಿದ್ದನು . ಆದರೆ ಆರ್ಥಿಕ ಹಿಂಜರಿತದಿಂದಾಗಿ ತನ್ನ ಕೆಲಸ ಕಳೆದುಕೊಂಡು ಮನೆಯ ಸಾಲವನ್ನು ತೀರಿಸಲು ಹೆಣಗಾಡುತ್ತಿದ್ದ. ಈತನು ಉತ್ತಮ ಚಿತ್ರಕಾರನಾಗಿದ್ದ. ಒಂದು ದಿನ ಆಕಾಶನ ಮಗುವು ಗೋಡೆಯ ಮೇಲೆ ತನ್ನ ಮನಸ್ಸಿಗೆ ಬಂದ ಹಾಗೆ ಚಿತ್ರವನ್ನು ಬಿಡಿಸುತ್ತಿತ್ತು .ಮಗುವು ಬಿಡಿಸಿದ ಬರಹದಲ್ಲಿ ಸಮಸ್ಯೆಗಳ ಬಲೆಯನ್ನು ಬಿಡಿಸಿ ಭರವಸೆಯ ಆಶಾಕಿರಣವನ್ನು ಕಾಣುತ್ತಿರುವ ವ್ಯಕ್ತಿಯ ಚಿತ್ರಣ ಕಂಡಂತಾಯಿತು. ಅವನು ಆ ಚಿತ್ರವನ್ನು ತನ್ನ ಕೈಚಳಕದಿಂದ ಕುಂಚದಲ್ಲಿ ಮೂಡಿಸಿ ಪ್ರತಿಷ್ಠಿತ ಚಿತ್ರಕಲಾ ಸ್ಪರ್ಧೆಗೆ ಕಳುಹಿಸಿದನು. ಈ ಚಿತ್ರವು ಬಹಳ ಜನಮನ್ನಣೆ ಪಡೆದು ಅತೀ ಹೆಚ್ಚು ಬೆಲೆಗೆ ಮಾರಾಟವಾಯಿತು . ಪ್ರವೃತ್ತಿ ರೂಪದಲ್ಲಿದ್ದ ಚಿತ್ರಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡನು. ಆತನ ಆರ್ಥಿಕಸ್ಥಿತಿಯು ಉತ್ತಮಗೊಂಡಿತು . ಕಂದನ ಕೈ ಬರಹದ ರಚನೆಯಿಂದಾಗಿ ಆಕಾಶನ ಜೀವನವೇ ಬದಲಾಯಿತು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics