Chethana Bhargav

Classics Inspirational Others

4.0  

Chethana Bhargav

Classics Inspirational Others

ಕೈ ಜಾರಿದ ಕನಸು

ಕೈ ಜಾರಿದ ಕನಸು

1 min
171



ಶ್ರೇಯ ಬಹಳ ಸ್ಪುರದ್ರೂಪಿ. ಆಕೆಯ ಮುಖ, ನಯನಗಳು ಹುಬ್ಬು ಎಲ್ಲವೂ ಒಬ್ಬ ನರ್ತಕಿಗೆ ಹೇಳಿ ಮಾಡಿಸಿದ್ದಂತೆ ಇತ್ತು. ಅವಳಿಗೂ ನಾಟ್ಯ ಎಂದರೆ ಬಲು ಪ್ರೀತಿ. ಆಕೆ ದೊಡ್ಡ ನೃತ್ಯಗಾರ್ತಿ ಆಗಬೇಕೆಂದು ಕನಸು ಕಂಡಿದ್ದಳು . ಅವಳು ಕೈ ಕಾಲು ಆಡಿಸಿದರೆ ಸಾಕು ಅದು ಚೆಂದದ ನೃತ್ಯ ಭಂಗಿಯಂತೆ ಕಂಗೊಳಿಸುತ್ತಿತ್ತು. ಅವಳಿಗೆ ನೃತ್ಯವು ಜನ್ಮಜಾತವಾಗಿ ಒಲಿದು ಬಂದಿತ್ತು . ಮನೆಯಲ್ಲಿ ನಡೆದಾಡುವಾಗಲೂ ನೃತ್ಯ ಮಾಡಿಕೊಂಡೆ ನಡೆದಾಡುತ್ತಿದ್ದಳು . ಚಿಕ್ಕ ಪುಟ್ಟ ಕಾರ್ಯಕ್ರಮ ಕೊಟ್ಟು ಪ್ರಸಿದ್ಧಿ ಹೊಂದಿದ್ದಳು .


ಒಂದು ದಿನ ನೃತ್ಯವನ್ನು ಮುಗಿಸಿಕೊಂಡು ಮನೆಗೆ ತೆರಳುವಾಗ ಅವಳ ನೆಂಟರೊಬ್ಬರು ಅವಳ ಮನೆಯ ಮಾರ್ಗವಾಗಿಯೇ ಹೋಗುತ್ತಿರುವುದಾಗಿ ಅವಳನ್ನು ಮನೆಗೆ ಬಿಡುತ್ತೇನೆ ಎಂದು ಹೇಳಿ ಕಾರಿನಲ್ಲಿ ಹತ್ತಿಸಿಕೊಂಡರು. ದುರಾದೃಷ್ಟವಶಾತ್ ಆ ದಿನ ಬಹಳ ಮಳೆ ಬರುತ್ತಿದ್ದರಿಂದ ಕಾರಿಗೆ ವೇಗವಾಗಿ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದು ಅವಘಡ ಸಂಭವಿಸಿತು. ಶ್ರೇಯಾಳ ಬಲಗಾಲು ಮುರಿದು ಹೋಗಿತ್ತು . ಅವಳಿಗೆ ಭೂಮಿ ಬಾಯ್ಬಿಟ್ಟಂತೆ ಅನಿಸತೊಡಗಿತ್ತು . ಅವಳು ಈ ಆಘಾತದಿಂದ ಹೊರಬರಲು ಬಹಳ ಸಮಯ ತೆಗೆದುಕೊಂಡಳು . ತಾನು ದೊಡ್ಡ ನೃತ್ಯಗಾರ್ತಿ ಆಗಬೇಕೆಂಬ ಕನಸು ಕೈ ಜಾರಿತಲ್ಲ ಎಂದು ಮನದಲ್ಲಿ ಬಹಳ ಮರುಗಿದಳು . ಆದರೆ ಕೃತಕ ಕಾಲನ್ನು ಜೋಡಿಸಿ ಸತತ ಪ್ರಯತ್ನದಿಂದ ಕೈ ಜಾರಿದ ಕನಸನ್ನು ನನಸು ಮಾಡಿಕೊಳ್ಳಬಹುದೆಂದು ಭರವಸೆಯಿಂದ ಧೈರ್ಯ ತಂದುಕೊಂಡಳು 


Rate this content
Log in

Similar kannada story from Classics