Chethana Bhargav

Classics Inspirational Others

4.0  

Chethana Bhargav

Classics Inspirational Others

ಚಿಗುರಿದ ಕನಸು

ಚಿಗುರಿದ ಕನಸು

1 min
141


ರಾಮಯ್ಯ ಅರ್ಧ ಎಕರೆ ಭೂಮಿಯಲ್ಲಿ ಸಣ್ಣ ಪುಟ್ಟ ತರಕಾರಿಗಳನ್ನು ಬೆಳೆದು ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಒಂದು ಹೊತ್ತು ಊಟವಿದ್ದರೆ ಮತ್ತೊಂದು ಹೊತ್ತಿನ ಊಟಕ್ಕಾಗಿ ಪರದಾಡುವ ಪರಿಸ್ಥಿತಿ. ಅವನಿಗೆ ಮೂರು ಜನ ಮಕ್ಕಳು,ಅವರನ್ನು ಶಾಲೆಗೆ ಸೇರಿಸಿ ಚೆನ್ನಾಗಿ ಓದಿಸಬೇಕೆಂಬ ಕನಸು ಕಟ್ಟಿಕೊಂಡಿದ್ದರೂ ತನ್ನ ಆರ್ಥಿಕ ಪರಿಸ್ಥಿತಿಯ ಮುಗ್ಗಟ್ಟಿನಿಂದಾಗಿ ಅವರನ್ನು ಶಾಲೆಗೆ ಸೇರಿಸಲು ಆಗುತ್ತಿರಲಿಲ್ಲ. ಹಣಕಾಸಿನ ತೊಂದರೆಯಿಂದಾಗಿ ಅವನು ಜೀವನದಲ್ಲಿ ಕಂಡ ಕನಸೆಲ್ಲಾ ಬತ್ತಿಹೋಗಿದೆ ಎಂದು ಬಹಳ ಹತಾಶನಾಗಿದ್ದ. ಈ ಬಾರಿ ಅವನು ತನ್ನ ಭೂಮಿಯಲ್ಲಿ ಬೇರೆ ತರಕಾರಿಯ ಬದಲಿಗೆ ಬರೀ ಟೊಮ್ಯಾಟೋವನ್ನು ಹಾಕಿದ. ಈ ತರಕಾರಿಯ ಇಳುವರಿ ಬರುವ ವೇಳೆಗೆ ಒಳ್ಳೆಯ ದರ ನಿಗದಿಯಾಗಿತ್ತು.ಇದರಿಂದ ಅವನ ಮನದಲ್ಲಿ ಕಮರಿದ ಕನಸ್ಸುಗಳೆಲ್ಲಾ ಚಿಗುರೊಡೆದು ಜೀವನದಲ್ಲಿ ಉತ್ಸಾಹವನ್ನು ತುಂಬಿಕೊಂಡ. ತನ್ನ ಬೆಳೆಯನ್ನು ಒಳ್ಳೆಯ ದರಕ್ಕೆ ಮಾರಿ ಬಂದ ಹಣದಿಂದ ಮಕ್ಕಳನ್ನು ಶಾಲೆಗೆ ಸೇರಿಸಿ, ತಾನು ಕಂಡ ಕನಸೆಲ್ಲಾ ನನಸಾಗುವ ಕಾಲ ಶುರುವಾಗಿದೆ ಎಂಬ ಭರವಸೆಯೊಂದಿಗೆ, ನಾನು ಜೀವನದಲ್ಲಿ ಪ್ರಗತಿ ಹೊಂದುತ್ತೇನೆಂಬ ಕನಸ್ಸೊಂದನ್ನು ಕಾಣಲು ಶುರುಮಾಡಿದ. ಹಂತ ಹಂತವಾಗಿ ಬೆಳೆದು ಪ್ರಗತಿ ಪರ ರೈತನಾಗಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾನೆ.


Rate this content
Log in

Similar kannada story from Classics