Chethana Bhargav

Classics Inspirational Others

4.0  

Chethana Bhargav

Classics Inspirational Others

ಪಂಜರ

ಪಂಜರ

1 min
203


ಕಿರಣ ಮತ್ತು ಹರಿಣಿ ಇಬ್ಬರೂ ಉದ್ಯೋಗಸ್ಥರು . ಇಬ್ಬರೂ ಉನ್ನತ ಹುದ್ದೆಯಲ್ಲಿ ಇದ್ದಾರೆ . ಅವರಿಗೆ ತಮ್ಮ ಮಗ ಅರುಣ್ ಕಂಡರೆ ಪಂಚಪ್ರಾಣ .ಅವನಿಗೆ ಏನೂ ತೊಂದರೆ ಆಗಬಾರದೆಂದು ಎಲ್ಲಾ ಸೌಲಭ್ಯ ಮತ್ತು ಸೌಕರ್ಯಗಳನ್ನು ಮನೆಯಲ್ಲಿಯೇ ಒದಗಿಸಿದ್ದರು . ಹೊರಗಡೆ ಮಗನನ್ನು ಕಳುಹಿಸಿದರೆ ಎಲ್ಲಿ ಅವನಿಗೆ ತೊಂದರೆಯಾಗಿಬಿಡುವುದೋ ಎಂಬ ಅತಿಯಾದ ಕಾಳಜಿಯಿಂದ ಅವನನ್ನು ಎಲ್ಲೂ ಕಳುಹಿಸುತ್ತಿರಲಿಲ್ಲ .


ಇವರ ಅತಿಯಾದ ಮೋಹ ಅರುಣನಿಗೆ ಪಂಜರದಲ್ಲಿ ಬಂಧಿಸಿದ ಭಾವನೆ ಮೂಡತೊಡಗಿತ್ತು . ಅವನಿಗೆ ಮನೆಯ ಹೊರಗೆ ಮಕ್ಕಳೊಂದಿಗೆ ಆಟ ಆಡುವುದು , ಹರಟುವುದು , ಮಣ್ಣಿನಲ್ಲಿ ಆಡುವುದೆಂದರೆ ಬಲು ಇಷ್ಟ . ಆದರೆ ಇದಕ್ಕೆ ಮನೆಯಲ್ಲಿ ಅನುಮತಿ ಇರಲಿಲ್ಲ .


ಮಕ್ಕಳು ಆಡುವುದನ್ನು ತನ್ನ ಕೋಣೆಯ ಕಿಟಕಿಯಿಂದ ಪಂಜರದ ಗಿಳಿಯಂತೆ ನೋಡುತ್ತಾ ನಿಂತಿರುತ್ತಿದ್ದ . ಹೀಗೆ ದಿನ ಕಳೆಯುತ್ತಿದ್ದಂತೆ ಅವನ ವರ್ತನೆಯಲ್ಲಿ ಬದಲಾವಣೆ ಕಾಣತೊಡಗಿತ್ತು . ಯಾವಾಗಲೂ ನಿರುತ್ಸಾಹಿಯಾಗಿ ಇರುತ್ತಿದ್ದ . ಇದನ್ನು ಗಮನಿಸಿ ಪೋಷಕರು ಅವನನ್ನು ವೈದ್ಯರ ಹತ್ತಿರ ಕರೆದುಕೊಂಡು ಹೋದರು . ಅವರು ಮಗುವಿನ ಮನಸ್ಸಿನ ಇಚ್ಛೆಯನ್ನು ತಿಳಿದುಕೊಂಡು ಪೋಷಕರಿಗೆ ಮನದಟ್ಟಾಗುವ ಹಾಗೆ ವಿವರಿಸಿದರು 


ಪೋಷಕರು ವೈದ್ಯರ ಸಲಹೆಯಂತೆ ಅರುಣನನ್ನು ಮಕ್ಕಳೊಡನೆ ಆಡಲು ಕಳುಹಿಸಲು ಪ್ರಾರಂಭಿಸಿದರು . ಅವನು ಮೊದಲಿಗಿಂತಲೂ ಚೂಟಿಯಾಗಿ ಖುಷಿ ಖುಷಿಯಿಂದ ಚಟುವಟಿಕೆಯಿಂದ ಮನೆಯ ತುಂಬಾ ಓಡಾಡಿಕೊಂಡು ಇರಲು ಪ್ರಾರಂಭಿಸಿದ . ಇದರಿಂದ ಮಗನನ್ನು ಕಂಡು ಹೆತ್ತವರಿಗೂ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು . 


ಮಕ್ಕಳನ್ನು ಪಂಜರದಲ್ಲಿಟ್ಟು ಪ್ರೀತಿಸಬೇಡಿ . ಅವರ ಎಳೆ ಮನಸ್ಸನ್ನು ಅರಿತು ಹೃದಯದಿಂದ ಪ್ರೀತಿಸಿ ಸ್ವಚ್ಛಂದವಾಗಿ ಬದುಕಲು ಬಿಡಿ 



Rate this content
Log in

Similar kannada story from Classics