Chethana Bhargav

Classics Inspirational Others

4.0  

Chethana Bhargav

Classics Inspirational Others

ಜೋಪಾನ ಮಾಡಿದ ಕೈ

ಜೋಪಾನ ಮಾಡಿದ ಕೈ

1 min
216


ಸಂಧ್ಯಾ ಮತ್ತು ಅರುಣಾ ದಂಪತಿಗಳು ತಮ್ಮ ಸಾಕುಮಗಳಾದ ವಿದ್ಯಾಳನ್ನು ಕಪ್ಪೆಚಿಪ್ಪಿನೊಳಗಿನ ಮುತ್ತಿನಂತೆ ಜೋಪಾನ ಮಾಡುತ್ತಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅನಾಥಳಾಗಿದ್ದ ವಿದ್ಯಾಳನ್ನು 

ಮನೆಗೆ ಕರೆತಂದು ಪ್ರೀತಿಯಿಂದ ಸಾಕುತ್ತಿದ್ದರು. ಅವಳಿಗೆ ಅವರು ತನ್ನ ಸ್ವಂತ ತಂದೆ ತಾಯಿ ಅಲ್ಲವೆಂದು ತಿಳಿದೇ ಇರಲಿಲ್ಲ. ವಿದ್ಯಾ ದೊಡ್ಡವಳಾಗಿ ಬುದ್ಧಿತಿಳಿದ ಮೇಲೆ ನೆರೆಹೊರೆಯವರು ಆಡುತ್ತಿದ್ದ ಗುಸು ಗುಸು ಮಾತಿನಿಂದ ಅವಳ ಮನದಲ್ಲಿ ಅನುಮಾನ ಆತಂಕ ಗೊಂದಲ ಮನೆಮಾಡಿತು. ಒಂದು ದಿನ ಅಮ್ಮನ ಬಳಿ ನೇರವಾಗಿ ಹೋಗಿ,"ಅಮ್ಮ ,ನಾನು ನೀನು ಹೆತ್ತ ಮಗಳು ಅಲ್ವಾ" ಎಂದು ಕೇಳಿದಳು. ಸಂಧ್ಯಾ ಸಮಾಧಾನದಿಂದ ಪ್ರೀತಿಯಿಂದ ಅವಳನ್ನು ಕೂರಿಸಿಕೊಂಡು "ಕಂದಾ, ನೀನು ನನ್ನ ಗರ್ಭದಲ್ಲಿ ಹುಟ್ಟಿಲ್ಲವಾದರೇನು ನನ್ನ ಹೃದಯದಿಂದ ಹುಟ್ಟಿದವಳು" ಎಂದು ಹೇಳಿದಳು. ತಾಯಿಯ ಮಾತನ್ನು ಕೇಳಿ ವಿದ್ಯಾ ಇಷ್ಟು ದಿನ ತನ್ನನ್ನು ಜೋಪಾನಮಾಡಿದ ಅಮ್ಮನ ಕೈಯನ್ನು ಹಿಡಿದು ಸಂತೋಷದಿಂದ ಭಾವಪರವಶಳಾದಳು 


Rate this content
Log in

Similar kannada story from Classics