ಹಂಗಿನ ಅರಮನೆ
ಹಂಗಿನ ಅರಮನೆ
ಆ ದೊಡ್ಡ ಮನೆಗೆ ಸೊಸೆಯಾಗಿ ಬಂದಾಗ, ಶುಭಾಂಗಿಯನ್ನು ನೋಡಿದವರೆಲ್ಲ ಅವಳ
ಅದೃಷ್ಟವನ್ನು ಹೊಗಳಿದ್ದೇ ಹೊಗಳಿದ್ದು. ಅವಳ ಅದೃಷ್ಟವನ್ನು ಕಂಡು ಅಸೂಯೆ ಪಟ್ಟವರೂ ಇದ್ದರು. ಆದರೆ ತಾನು ಅದೆಂತಹ ಅದೃಷ್ಟವಂತೆ ಎಂಬುದು ಶುಭಾಂಗಿ ಗೆ ಮಾತ್ರ ಗೊತ್ತಿತ್ತು.
ಅರಮನೆಯಂತಹ ದೊಡ್ಡ ಮನೆ ಅವಳಿಗೆ ವಿ.ಐ.ಪಿ. ಜೈಲ್ ಆಗಿತ್ತು. ಆ ದೊಡ್ಡ ಮನೆಯ ಯಜಮಾನ ಅವಳ ಮಾವ ಆ ಮನೆಯ ಸರ್ವಾಧಿಕಾರಿ ಯಾಗಿದ್ದರು.
ಅವರು ಹಾಕಿದ ಗೆರೆಯನ್ನು ಯಾರೂ ದಾಟುವಂತಿರಲಿಲ್ಲ. ಅದರಲ್ಲೂ ಮನೆಯ ಹೆಂಗಸರು ತುಟಿ ಬಿಚ್ಚುವಂತಿಲ್ಲ. ಬೇಕಾದ ಒಡವೆಗಳು, ವಿಧವಿಧವಾದ ಅಡುಗೆ ತಿಂಡಿ ಗಳು, ಕೈಗೊಬ್ಬ ಕಾಲಿಗೊಬ್ಬ ಆಳು ಕಾಳು ಗಳು, ಎರಡು ಮೂರು ಕಾರುಗಳು, ಅವುಗಳಿಗೆ ಡ್ರೈವರ್ ಗಳು,
ಏನಿಲ್ಲ ಆ ಮನೆಯಲ್ಲಿ? ಆದರೆ ಆ ಮನೆಯಲ್ಲಿ
ಹೆಂಗಸರು ತಮ್ಮ ಸ್ವಾತಂತ್ರ್ಯ ಕಳೆದು ಕೊಂಡು
ಗಂಡಸರು ಹೇಳಿದಂತೆ ಬದುಕಬೇಕಾಗಿತ್ತು.
ವಿದ್ಯಾವಂತೆ ಬುದ್ಧಿ ವಂತೆ ಯಾಗಿದ್ದ ಶುಭಾಂಗಿಗೆ
ಆ ಮನೆಯ ವಾತಾವರಣ ಉಸಿರುಗಟ್ಟುವಂತೆ ಆಗುತ್ತಿತ್ತು. ಯಾವುದಕ್ಕೂ ಪ್ರತಿಭಟಿಸದೇ, ಬೊಂಬೆ ಗಳಂತೆ ಬದುಕುವುದು ಅವಳಿಗೆ ಸಾಧ್ಯವಾಗಲಿಲ್ಲ.
ಅವಳ ಗಂಡನೂ ಅಪ್ಪನ ಹಾದಿಯಲ್ಲೇ ಹೆಜ್ಜೆ ಹಾಕುತ್ತಿರುವುದನ್ನು ನೋಡುತ್ತಿದ್ದ, ಶುಭಾಂಗಿಗೆ
ತುಂಬಾ ಹಿಂಸೆಯಾಗುತ್ತಿತ್ತು. ಅವಳಿಗೆ ಆ ಹಂಗಿನರಮನೆಗಿಂತ ವಿಂಗಡದ ಗುಡಿಸಲೇ ಲೇಸು ಎನಿಸುತ್ತಿತ್ತು. ಆದರೆ ಆ ಅರಮನೆಯಿಂದ ಬಿಡುಗಡೆಯಾಗಿ , ಸ್ವತಂತ್ರಳಾಗುವುದು ಹೇಗೆಂದು ಹಗಲೂ ಇರುಳು ಯೋಚಿಸುತ್ತಲೇ ಇದ್ದಳು.
ಸ್ವಾತಂತ್ರ್ಯ ಆಜನ್ಮ ಸಿದ್ಧ ಹಕ್ಕು ಎಂಬುದು ಅವಳ ಸಿದ್ದಾಂತವಾಗಿತ್ತು.ಆದರೆ ವಿಧಿಯ ಲೀಲೆ ಅವಳ ವಿರುದ್ಧ ವಾಗಿತ್ತು. ಏನೀ ವಿಪರ್ಯಾಸ?
