ಹದಿಹರೆಯ
ಹದಿಹರೆಯ
ನಾನ್ ಸ್ಟಾಪ್ ನವೆಂಬರ್ ಆವೃತ್ತಿ 3 ಬೆಗಿನೆರ್
ದಿನ್: 23
ವಿಷಯ: ಕನಸು
ಬಡತನದಲ್ಲಿ ಬೆಳೆಯುತ್ತಿದ್ದ ಇಪ್ಪತ್ತು ವರ್ಷದ ಕಮಲಿಗೆ ತನ್ನ ಕಾಲೇಜಿನಲ್ಲಿ ತನ್ನ ಜೊತೆಯವರೆಲ್ಲರೂ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು, ಒಳ್ಳೊಳ್ಳೆ ಫ್ಯಾಷನ್ ಬ್ಯಾಗಗಳನ್ನು ಬೆನ್ನಿಗೆ ನೇತು ಹಾಕಿಕೊಂಡು ಹೈ ಹೀಲ್ಡ್ ಚಪ್ಪಲಿಗಳನ್ನು ಟಕ್ ಟಕ್ ಟಕ್ ಅಂತ ನಡೆದಾಡುತ್ತಿದ್ದರೆ, ಅವಳು ಹಾಕುವ ಸಾಧಾರಣವಾದ ಹತ್ತಿಯ ಬಟ್ಟೆ, ಅರ್ಧ ಬೆಲೆಗೆ ಸಿಗುತ್ತಿದ್ದ ಬ್ಯಾಗ್, ನೂರು ರೂಪಾಯಿನ ಸಾಧಾರಣವಾದ ಚಪ್ಪಲಿಯನ್ನು ನೋಡಿಕೊಂಡಾಗ ಅವಳಿಗೆ ತುಂಬಾ ಮುಜುಗರವಾಗುತ್ತಿತ್ತು. ಅವಳಿಗಂತೂ ತಮ್ಮ ಬಡತನ ಎಂದಿಗೆ ಕೊನೆಗೊಳ್ಳುವುದೋ ಎನಿಸುತ್ತಿತ್ತು.ಅವಳ ಜೀವನದಲ್ಲಿದ್ದು ಒಂದೇ ಕನಸು.
ತಾನು ಚೆನ್ನಾಗಿ ಓದಿ ಪಧವೀಧರಳಾದ ನಂತರ ಒಳ್ಳೆಯ ಉದ್ಯೋಗ ಹಿಡಿದು, ಮೊದಲಿಗೆ ತಮ್ಮ ಮನೆಯ ಬಡತನದ ಬವಣೆಯನ್ನು ಕಡಿಮೆ ಮಾಡಬೇಕು, ಕೈತುಂಬಾ ಸಂಬಳ ಪಡೆದು, ಒಳ್ಳೋಳ್ಳೆ ಬಟ್ಟೆ ಬರೆಗಳು, ಕಣ್ಣಿಗೆ ಬೇಕಾದ ಬ್ಯಾಗ್ಗಳು, ಮಿರಮಿರ ಮಿಂಚುವ ಚಪ್ಪಲ್ಗಳು, ಮನಸ್ಸಿಗೆ ತೃಪ್ತಿ ಕೊಡುವ ತೀಂಡಿ ತಿನಿಸಿಗಳು , ನಂತರ ತನ್ನ ಕನಸಿನ ರಜಕುಮಾರನೊಂದಿಗೆ ಮದುವೆ ಮಾಡಿಕೊಂಡು ಜುಂ ಜುಂ ಅಂತ ದೇಶ ವಿದೇಶಗಳನ್ನೆಲ್ಲ ಸುತ್ತಾಡಬೇಕು, ........... ಹೀಗೆ ಸುಂದರ ಸ್ವಪ್ನಗಳನ್ನು ಕಾಣುತ್ತಿದ್ದಳು. ತನ್ನ ಬಳಿ ಹಣ ಒಂದಿದ್ದರೆ ತನ್ನ ಕನಸು ಸಾಕಾರವಾಗುತ್ತದೆ, ಇಲ್ಲವಾದರೆ ಅದು ಕನಸಾಗೇ ರಾತ್ರಿಯ ನಿದ್ರೆಯಲ್ಲಿ ಕಾಡುತ್ತದೆ.
ಕಮಲಿ ತುಂಬಾ ಶ್ರದ್ಧೆಯಿಂದ ಕಷ್ಟಪಟ್ಟು ಚೆನ್ನಾಗಿ ಓದಿ, ಉತ್ತಮ ಅಂಕದೊಂದಿಗೆ ಪದವೀಧರಳಾದಳು. ಅವಳಂಡುಕೊಂಡಂತೆ ತಕ್ಷಣದಲ್ಲಿ ಉದ್ಯೋಗಕ್ಕೆ ಸೇರಲಾಗಲಿಲ್ಲ. ಎಲ್ಲರ ಪ್ರೋತ್ಸಾಹ ದಿಂದ ಕಮಲಿ ಸ್ನಾತಕೋತ್ತರ ಪದವಿಯನ್ನೂ ಪಡೆದು, ಸಿವಿಲ್ ಸರ್ವೀಸ್ ಪರೀಕ್ಷೆಗಳನ್ನು ಬರೆಯುತ್ತ ಹೋದಳು.
ಕಡೆಗೂ ಅವಳ ಕನಸಿನ ಒಳ್ಳೆಯ ಉದ್ಯೋಗ ದೊರೆತು ಐ.ಪಿ.ಎಸ್. ಆಫೀಸರ್ ಹುದ್ದೆ ಗಳಿಸಿದಳು. ಈಗ ಅವಳು ಕಾಲೇಜಿನ ದಿನಗಳಲ್ಲಿ ಕಾಣುತ್ತಿದ್ದ ಕನಸುಗಳೆಲ್ಲವೂ ಸಾಕಾರವಾಗುತ್ತಾ ಬಂದವು. "ಕೈಕೆಸರಾದರೆ ಬಾಯಿ ಮೊಸರು" ಅವಳ ಅನುಭವವಾಗಿತ್ತು.
