STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಎರಡು ಮುಖಗಳು

ಎರಡು ಮುಖಗಳು

1 min
6


ಕಾಮುಕನೊಬ್ಬನ ಅತ್ಯಾಚಾರಕ್ಕೆ ಬಲಿಯಾದ ರಜನಿ ಒಂದು ಮಗು ವಿನ ತಾಯಿಯಾದಾಗ,ಅವಳ ಬಾಳು ಕತ್ತಲಾಗಿ ಹೋಯಿತು. ಹದಿನೆಂಟರ ಹರೆಯದ ಅವಳು ಗರ್ಭಿಣಿಯಾದಾಗ ಅವಳ ಬಗ್ಗೆ ಮನೆಯಲ್ಲಿ ಅವಳ ತಂದೆ ತಾಯಿಗೆ ಮುಂದೇನು ಎಂದು ದಿಕ್ಕೇ ತೋಚಲಿಲ್ಲ. ಕಡೆಗೆ ಮಗಳನ್ನು ಅಬಾರ್ಷನ್ ಗಾಗಿ ಕರೆದುಕೊಂಡು ಹೋದಾಗ, ವೈದ್ಯರು ಅದು ಸಾಧ್ಯವಿಲ್ಲ ವೆಂದು ಹೇಳಿ ಬಿಟ್ಟಾಗ, ಮಗಳನ್ನು ತಮ್ಮ ಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲೇ ಅವಳಿಗೆ ಹೆರಿಗೆ ಮಾಡಿಸಿದರು.ಮುಂದೆ ಆ ಮಗುವಿಗೆ ತಂದೆ ಹುಡುಕುವುದು ಹೇಗೆ?ಎಂಬ ಮತ್ತೊಂದು ಯೋಚನೆ ಶುರುವಾಯಿತು. ಆಗ ಬಂದವನೇ ರಾಜೇಂದ್ರ. ಆ ಹಳ್ಳಿಯಲ್ಲಿ ಸಮಾಜ ಸೇವೆ ಮಾಡಿಕೊಂಡು, ತನ್ನ ಹೊಲ ಗದ್ದೆ ಯನ್ನು ನೋಡಿಕೊಂಡು ಸರಳವಾಗಿ ಜೀವನ ನಡೆಸುತ್ತಿದ್ದ ರೈತನ ಮಗ. ರಜನಿಯ ವಿಷಯವನ್ನು ತಿಳಿದುಕೊಂಡ ರಾಜೇಂದ್ರ, ಅವಳ ಸ್ನೇಹವನ್ನು ಬೆಳೆಸಿಕೊಂಡು, ಅವಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾ ಹೋದ. 

ಕಡೆಗೆ ಒಂದು ದಿನ ಅವನು ರಜನಿಯ ತಂದೆ ತಾಯಿಯ ಹತ್ತಿರ ಬಂದು ತಾನು ರಜನಿಯನ್ನು ಮದುವೆ ಮಾಡಿ ಬಾಳು ಕೊಡಲು ಸಿದ್ಧನೆಂದಾಗ,ಅವರ ಪಾಲಿಗೆ ಅವನು ದೇವರಂತೆ ಕಾಣಿಸಿದ. 

ಮುಂದೆ ರಜನಿ ಮತ್ತು ರಾಜೇಂದ್ರ ಇಬ್ಬರೂ ಮದುವೆ ಮಾಡಿಕೊಂಡರು. ರಜನಿಯ ಬಾಳು ಬೆಳಗಿದ ರಾಜೇಂದ್ರ ಅವಳಿಗೆ ದೇವರಂತೆ ಆದ.

ಈ ಜಗತ್ತಿನಲ್ಲಿ ಕೆಟ್ಟ ಗಂಡಸರಿದ್ದಂತೆ ಒಳ್ಳೆಯವರೂ ಇದ್ದಾರೆ ಎಂಬುದು ಅವಳಿಗೆ ಸಾಬೀತಾಯಿತು .

ರಜನಿಯ ಬಾಳಿನಲ್ಲಿ ಒಬ್ಬ ದೈತ್ಯನಾಗಿ ಬಂದರೆ, ಮತ್ತೊಬ್ಬ ದೇವತೆಯಾಗಿ ಬಂದು, ಅವಳ ಕತ್ತಲಿನ ಬಾಳಿಗೆ ಬೆಳಕು ತಂದ ಸೂರ್ಯನಾದ. ಅವಳ ಬಾಳಿನಲ್ಲಿ ಗಂಡಸಿನ ಎರಡೂ ಮುಖಗಳ ಅನಾವರಣವಾಗಿತ್ತು.


Rate this content
Log in

Similar kannada story from Abstract