Gireesh pm Giree

Abstract Children Stories Inspirational

3  

Gireesh pm Giree

Abstract Children Stories Inspirational

ಎಂದೂ ನೋಯಿಸಬೇಡ

ಎಂದೂ ನೋಯಿಸಬೇಡ

1 min
292



ಹೆತ್ತ ತಾಯಿ ಋಣವ, ಪೊರೆದ ತಂದೆ ಋಣವ, ಹತ್ತು ಜನುಮ ಬಂದರು ಅದು ತೀರಿಸಲಾಗದು. ನವ ಮಾಸದ ವೇದನೆಯ ಸಹಿಸಿ ಜಗದ ಬೆಳಕ ತೋರಿಸುವ ಕರುಣಾಮಯಿ. ನೋವಲ್ಲು ಇದ್ದರು ಆಜೀವ ಮಗುವಿನ ನಲಿವನ್ನು ಸದಾಕಾಲ ಬಯಸುತ್ತಾ ಇರುತ್ತದೆ. ಅತ್ತರೆ ಸೆರೆಗ ಆಸರೆ ನೀಡುವಳು, ನಕ್ಕರೆ ತನ್ನ ನಗುವೆಂದು ತಾನು ನಗುವಳು . ಜಗದಲ್ಲಿ ಜೀವಕ್ಕೆ ಜೀವ ನೀಡುವವಳು ಯಾರಾದರೂ ಇದ್ದಾರೆ ಕೇಳಿದರೆ ಅದು ಮಾತೆ . ಹುಟ್ಟಿದ ಕೂಸಿನ ಲಾಲನೆ-ಪಾಲನೆ ಮಾಡುವುದರಿಂದ ಹಿಡಿದು ತಾನು ಬದುಕಿರುವ ಕೊನೆಯತನಕ ಕಣ್ರೆಪ್ಪೆಯಂತೆ ಕನ್ನಡಿಯಂತೆ ಜೋಪಾನ ಮಾಡುವಳು. ಬಿದ್ದಾಗ ಅವಳ ಮಾತೇ ಔಷಧ ಸೋತಾಗ ಸೋಲೇ ಗೆಲುವಿನ ಮೆಟ್ಟಿಲೆಂದು ಸಮಾಧಾನಪಡಿಸುವಳು. ಗೆದ್ದಾಗ ನನ್ನಕಿಂತ ಅವಳ ಮುಖದಲ್ಲಿ ನಗುವಿನ ಸಂಭ್ರಮ ಮನೆಮಾಡಿರುತಿತ್ತು. ಶಾಲೆಯಲ್ಲಿ ಕೊಡುತ್ತಿದ್ದ ನೋಟ್ಸನ್ನು ಎಷ್ಟು ಬಾರಿ ಹುಷಾರಿಲ್ಲದ ಸಂದರ್ಭದಲ್ಲಿ ಬರೆದು ಕೊಟ್ಟಿದ್ದಾಳೆ. ಆ ದಿನಗಳಲ್ಲಿ ಅಮ್ಮನೆ ಟ್ಯೂಷನ್ ಟೀಚರ್.

ತನ್ನ ಉಸಿರಿಗಿಂತ ಹೆಚ್ಚು ಪ್ರೀತಿಸುವ ತಾಯಿಯ ಪ್ರೀತಿ ಕೊನೆಯಿಲ್ಲದ ಆಗಸದಂತೆ ವಿಶಾಲ. ಆದರೆ ಇಂದಿನ ಕಾಲದಲ್ಲಿ ಎಲ್ಲವೂ ಬುಡಮೇಲಾಗಿದೆ. ಕೆಲವರು ಕೆಲಸಕ್ಕೆ ಬಾರದ ಮಾತುಗಳನ್ನು ಕೇಳಿ ಹಾಗೇನು ಅನಾಥಾಶ್ರಮಕ್ಕೆ ತಳ್ಳುತ್ತಾರೆ. ಇದುವೇ ಈಗಿನ ನವ ಜಗದ ಮಾಯೆ. ತಾನಾಯ್ತು ತನ್ನ ಹೆಂಡತಿ ಮಕ್ಕಳಾಯಿತು ಎಂದು ಯೋಚಿಸುವ ಮನಸ್ಸಲ್ಲಿ ತಂದೆ-ತಾಯಿಗೆ ಸ್ಥಾನವೇ ಇಲ್ಲದಂತಾಗಿದೆ. ಪೊರೆದ ಹಡೆದ ತಾಯಿಯನ್ನು ನಡು, ವೃದ್ಧಾಶ್ರಮದಲ್ಲಿ ಬಿಟ್ಟು ಅಬ್ಬಾ ಸಾಧಿಸಿದೆ ಎಂದು ಬೀಗುವವರೆ ತುಸು ಜಾಸ್ತಿ.

ಯಾಕಾದ್ರೂ ಹೀಗೆ ಮಾಡುತ್ತಾರೆ ಎಂಬುದು ದೇವರಿಗೆ ಗೊತ್ತು ಅದೇ ಆ ಮಹಾತಾಯಿ ಹುಟ್ಟಿದ ಮಗುವನ್ನು ಬೇರೆ ಕಡೆ ಬಿಡುವ ಯೋಚನೆಯನ್ನು ಮಾಡದು. ಮಕ್ಕಳನ್ನು ನಡು ಹಾದಿಯಲ್ಲಿ ಬಿಡದೆ ಅವುಗಳಿಗೆ ಬೇಕಾದ ಎಲ್ಲಾ ರೀತಿಯ ಉಡುಗೆ ತೊಡುಗೆಯನ್ನು ಶಿಕ್ಷಣವನ್ನು ಕೊಡುವಳು. ನಾವು ಮಾತ್ರ ಕೊಡುವುದು ಕೊನೆಯಲ್ಲಿ ಆಶ್ರಮ ಎಂಬ ಕೊಡುಗೆಯನ್ನು.


ನಿಜಕ್ಕೂ ನಾವು ಈ ರೀತಿ ಮಾಡುವುದು ಖಂಡಿತಾ ತಪ್ಪು. ತಾಯಿ ನಮ್ಮೆರಡು ಕಣ್ಣಿನ ಹಾಗೆ ಅವರನ್ನು ಯಾವುದೇ ಕಾರಣಕ್ಕೂ ನೋಯಿಸಬಾರದು ಯಾವುದೇ ಸಮಯದಲ್ಲೂ ಕೈಬಿಡಬಾರದು. ಒಂದು ವೇಳೆ ದೇವರು ನಮ್ಮನ್ನು ಕೈಬಿಟ್ಟರು ನೆರವಿನ ಹಸ್ತ ನೀಡದಿದ್ದರೂ ತಂದೆ-ತಾಯಿ ನಮ್ಮ ನೆರಳಿನಂತೆ ಸದಾ ನಮ್ಮ ಹಿಂದೆ ನೆರವಿಗೆ ಇರುವರು. ಆ ಕಾರಣದಿಂದಲೇ ತಂದೆ-ತಾಯಿಯನ್ನು ದೇವರಿಗಿಂತ ಉನ್ನತ ಸ್ಥಾನದಲ್ಲಿಟ್ಟು ಪೂಜಿಸುವುದು. ಅಪ್ಪ ನೀವೆಂದು ಸದಾ ನಗುತಿರಬೇಕು. ಐ ಲವ್ ಯು ಅಪ್ಪ ಅಮ್ಮ




Rate this content
Log in

Similar kannada story from Abstract